ಪುತ್ತೂರು: ಡಿಸೆಂಬರ್ ತಿಂಗಳಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ ನಡೆಯುವ ಗಿರಿಜಾ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಬಡಗನ್ನೂರು ದುರ್ಗಾ ಗಣೇಶ ಸಭಾಭವನದಲ್ಲಿ ನಡೆಯಿತು.
ಸಭೆಯ ಕುರಿತು ಮಾತನಾಡಿದ ನಾರಾಯಣ ಪ್ರಕಾಶ್, ಸನಾತನ ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು. ಅನೇಕತೆಯಲ್ಲಿ ಏಕತೆಯನ್ನು ಕಂಡಿರುವ ಸರ್ವೇ ಜನಃ ಸುಖಿನೋ ಭವಂತು ಅನ್ನುವ ವಿಶಾಲ ಮನೋಭಾವಿಕೆಯು ನಮ್ಮ ಧರ್ಮದಲ್ಲಿ ನಾವೆಲ್ಲರೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಒಂದಾಗಬೇಕಾಗಿದೆ. ಬೇರೆ ಬೇರೆ ಕಾರಣಗಳಿಂದ ಹಿಂದೂ ಸಮಾಜವನ್ನು ಒಡೆಯುವ ತಂತ್ರಗಳು ನಿರಂತರವಾಗಿ ನಡೆಯುತ್ತಿದೆ. ಅಧಿಕಾರಕ್ಕಾಗಿಯೇ ಸ್ವಪ್ರತಿಷ್ಟೆಗಾಗಿಯೇ ನಡೆಯುವ ಈ ಷಡ್ಯಂತ್ರಗಳ ವಿರುದ್ಧ ನಾವೆಲ್ಲರೂ ಒಂದಾಗಬೇಕಾಗಿದೆ. ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪವು ನಮ್ಮದಾಗಬೇಕು. ಈ ಹಿನ್ನಲೆಯಿಂದ ಕಳೆದ ಮೂರು ವರ್ಷದಿಂದ ಧರ್ಮಶ್ರದ್ಧೆಯಿಂದ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಹಿಂದು ಸಮಾಜಕ್ಕೆ ಶಕ್ತಿ ತುಂಬುವಂತಹ ಕಾರ್ಯವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ.
ಪ್ರಸ್ತುತ ಸಮಾವೇಷದಲ್ಲಿರುವ ಸಂಗತಿಗಳನ್ನು ಗಮನಿಸಿಕೊಂಡು ನಾವೆಲ್ಲರೂ ಒಟ್ಟಾಗಿ ಒಂದಾಗಿ ಧರ್ಮ ಸಂರಕ್ಷಣೆಗೆ ತೊಡಗಬೇಕಾಗಿದೆ. ಹಿಂದೂ ಸಾಮಾಜದ ವಿರಾಟ ದರ್ಶನ ಸಾಧು ಸಂತರ ಉಪಸ್ಥಿತಿಯಲ್ಲಿ ನಡೆಯುವ ಕೇಸರಿ ಸಂಗಮದಲ್ಲಿ ಅನಾವರಣಗೊಳ್ಳಲಿದೆ. ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಶಿವ ಪಾರ್ವತಿಯ ಕಲ್ಯಾಣದಿಂದ ಲೋಕಕಲ್ಯಾಣವಾಗಲಿದೆ. ಈ ಕಲ್ಯಾಣವನ್ನು ಕಣ್ತುಂಬಿಸಿಕೊಳ್ಳಲು ಅವಕಾಶ ಸಿಕ್ಕಿರುವುದು ಹಿಂದೂಗಳ ನಮ್ಮೆಲ್ಲರ ಸೌಭಾಗ್ಯ. ಈ ಹಿನ್ನಲೆಯಿಂದ ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸುವುದು ಮತ್ತು ಎರಡು ದಿವಸಗಳ ಕಾಲ ಲಕ್ಷಾಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ನಡೆಯಲಿರುವ ಅನ್ನಸಂತರ್ಪಣೆಗೆ ಸಾಹಿತ್ಯಗಳನ್ನು ನೀಡಿ ತನು ಮನ ಧನಗಳೊಂದಿಗೆ ಸಹಕಾರ ನೀಡುವ ಕರ್ತವ್ಯ ನಮ್ಮೆಲ್ಲರದು ಎಂದರು.
ವೇದಿಕೆಯಲ್ಲಿ ಗಿರಿಜಾ ಕಲ್ಯಾಣೋತ್ಸವದ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾದ ಪ್ರಜ್ವಲ್ ಘಾಟೆ, ಶ್ರೀನಿವಾಸ್ ಭಟ್ ಚಂದುಕುಡ್ಲು, ಮಲ್ಲಿಕಾ ಪ್ರಸಾದ್, ರಾಮಕೃಷ್ಣ ಭಟ್, ಲಿಂಗಪ್ಪ, ಉಪಸ್ತಿತರಿದ್ದರು.
ರಾಮಕೃಷ್ಣ ಭಟ್ ಸ್ವಾಗತಿಸಿ, ಪ್ರಸಾದ್ ವಂದಿಸಿದರು.
























