ಧಾರ್ಮಿಕ

ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಆಯುಧ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಸಹ ಸಂಘಟನೆಗಳ ಸಹಯೋಗದಲ್ಲಿ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆಯುಧ ಪೂಜಾ ಕಾರ್ಯಕ್ರಮ ಅ.18ರಂದು ನೆರವೇರಿತು.

gowda

ಕಾರ್ಯಕ್ರಮದ ಅಂಗವಾಗಿ ಸಮುದಾಯ ಭವನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ಹಾಗೂ ದೇವತಾ ಆರಾಧನೆ ನಡೆಯಿತು. ಅರ್ಚಕರು ಶಾಸ್ತ್ರೋಕ್ತವಾಗಿ ಆಯುಧಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿದರು. ಬಳಿಕ ಪ್ರಸಾದ ವಿತರಿಸಲಾಯಿತು.

ಸಮುದಾಯ ಭವನದ ಮುಂಭಾಗದ ಆವರಣದಲ್ಲಿ ಸದಸ್ಯರ ವಾಹನಗಳನ್ನು ಸಾಲಾಗಿ ನಿಲ್ಲಿಸಿ ವಿಶೇಷ ವಾಹನ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಕೆಯ್ಯೂರು, ನಿಕಟಪೂರ್ವ ಅಧ್ಯಕ್ಷ ರವಿ ಮುಂಗ್ಲಿಮನೆ, ಅಧ್ಯಕ್ಷ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಶ್ರೀಧರ ಗೌಡ ಪಾಣತ್ತಿಲ, ಸಲಹಾ ಸಮಿತಿಯ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಕಾರ್ಯದರ್ಶಿ ಯತೀಶ್ ದೇವ, ಮೋಹನ್ ಬಾಳುಗೋಡು, ಯುವ ಸಂಘದ ಗೌರವಾಧ್ಯಕ್ಷ ಅಮರ್ ನಾಥ್ ಗೌಡ ಬಪ್ಪಳಿಗೆ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಕುದ್ರೋಳಿ: ಶಾರದಾ ಮಾತೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ | ಮಂಗಳೂರು ದಸರಾದಲ್ಲಿ ಹಲವು ವಿಶೇಷತೆ: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಭಕ್ತಿಪೂರ್ಣ ಮಂತ್ರಘೋಷಗಳು, ಸಾಂಪ್ರದಾಯಿಕ ಸಂಗೀತ ಮತ್ತು ವರ್ಣರಂಜಿತ ಸಾಂಸ್ಕೃತಿಕ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…