ಧಾರ್ಮಿಕ

ಅ. 21ರಂದು ಸಂಜೆ ಪುತ್ತೂರು ದಸರಾ (ಶಾರದೋತ್ಸವ)ದ ಅದ್ಧೂರಿ ಮೆರವಣಿಗೆ | ಕೇರಳ, ತಮಿಳುನಾಡು, ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡಿದ್ದು, ಅ. 17ರಂದು ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದೆ. ಅ. 21ರಂದು ಬೆಳಿಗ್ಗೆ ಅಕ್ಷರಾಭ್ಯಾಸ, ಸಂಜೆ 5.30ಕ್ಕೆ ಶೋಭಾಯಾತ್ರೆ ಹೊರಡಲಿದೆ ಎಂದು ಶಾರದೋತ್ಸವ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ. 21ರಂದು ಸಂಜೆ 5.30ಕ್ಕೆ ವೈಭವದ ಪುತ್ತೂರು ದಸರಾ ಶೋಭಾಯಾತ್ರೆ ಬೊಳುವಾರು ವೃತ್ತದಿಂದ ಹೊರಡಲಿದೆ. ಶೋಬಾಯಾತ್ರೆಗೆ ಕೊಡುಗೈದಾನಿ, ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಚಾಲನೆ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಪುಷ್ಪಾರ್ಚನೆ ಮಾಡಲಿದ್ದಾರೆ. ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಥಾರತಿ ಮಾಡಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಹಾವೀರ ಮೆಡಿಕಲ್ ಸೆಂಟರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಪುತ್ತೂರು ಸಿಝ್ಲರ್ ಗ್ರೂಪ್ ನ ಪ್ರಸನ್ನ ಕುಮಾರ್ ಶೆಟ್ಟಿ, ತಿಂಗಳಾಡಿ ಪದ್ಮಶ್ರೀ ಗ್ರೂಪ್ ನ ಕೆದಂಬಾಡಿಗುತ್ತು ರತ್ನಾಕರ ರೈ ಉಪಸ್ಥಿತರಿರುವರು ಎಂದು ವಿವರಿಸಿದರು.

ಶೋಭಾಯಾತ್ರೆ ಸಾಗುವ ಹಾದಿಯಲ್ಲಿ ವಿದ್ಯುತ್‌ ದೀಪಾಲಂಕಾರದ ಜೊತೆಗೆ ಕೇರಳ ಮತ್ತು ಕರ್ನಾಟಕದಿಂದ ಹಲವಾರು ಕಲಾ ತಂಡಗಳು ಭಾಗಿಯಾಗುವುದು ವಿಶೇಷ ಆಕರ್ಷಣೆ. ಸುಮಾರು 500ರಿಂದ 600 ತಂಡಗಳಿಂದ ಕುಣಿತ ಭಜನೆ ಮೆರವಣಿಗೆಯಲ್ಲಿ ಇದ್ದು ಸನಾತನ ಸಂಸ್ಕೃತಿಯ ಮಹತ್ವವನ್ನು ಶೋಭಾಯಾತ್ರೆಯಲ್ಲಿ ಸಾರಲಾಗುತ್ತದೆ ಎಂದರು.

ಅ. 17ರಂದು ಬೆಳಿಗ್ಗೆ 9.30ರ ನಂತರ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದೆ. ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆದು, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅ. 18ರಂದು ಬೆಳಿಗ್ಗೆ 8ರಿಂದ ಚಂಡಿಕಾ ಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಅ. 19ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಅ. 20ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ. 21ರಂದು ಬೆಳಿಗ್ಗೆ 9ರಿಂದ ಅಕ್ಷರಾಭ್ಯಾಸ ನಡೆದು, ಸಂಜೆ 5.30ಕ್ಕೆ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಜರುಗಲಿದೆ ಎಂದು ವಿವರಿಸಿದರು.

ಕೇರಳ, ತಮಿಳುನಾಡು, ಕರ್ನಾಟಕದ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಆಕರ್ಷಣೆ:

ಶೋಭಾಯಾತ್ರೆಯ ಸಂಚಾಲಕ ನವೀನ್‌ ಕುಲಾಲ್‌ ಮಾತನಾಡಿ, ಶೋಭಾಯಾತ್ರೆಯಲ್ಲಿ ಈ ಬಾರಿ ಚೆಂಡೆಮೇಳ, ಕೊಂಬು, ಸಾಕ್ಸೋಫೋನ್, ವಯೋಲಿನ್, ಕೀ ಬೋರ್ಡ್, ರಿದಂ ಪ್ಯಾಡ್ ಮತ್ತು ಕೊಳಲು ಸಹಿತ ಅನೇಕ ಆಕರ್ಷಣೆಗಳು ಜನಮನ ಸೆಳೆಯಲಿದೆ. ಪ್ರಸಿದ್ಧ ತಂಡಗಳಾದ ಕರಿಂಕಾಳಿ ತ್ರಿಶೂರ್‌, ಅಘೋರಿ ಅಲೇಪುರಂ, ಪೂತಂ ತೀರ ಪಾಲಕ್ಕಾಡ್‌, ತಿರುಪತಿ ಬೋರ್ಡ್‌ ಮಲಾಪುರಂ, ಕಥಕ್ಕಳಿ ಬೋರ್ಡ್‌ ತ್ರಿಶೂರ್‌, ಕಾಳಿ ಡ್ಯಾನ್ಸ್‌ ತ್ರಿಶೂರ್‌, ಗೊರಿಲ್ಲಾ ಆಂಡ್‌ ಟೀಮ್‌, ದೇವಿ ಬೋರ್ಡ್‌ ಕಾಸರಗೋಡು, ತಾಂಬೋಲಂ ಕಾಸರಗೋಡು, ಕಾಳ ಮಲಪ್ಪುರಂ, ದೇವರೂಪಂ ಎರ್ಣಾಕುಲಂ, ಮುತ್ತುಕೊಡೆ ಕಾಸರಗೋಡು ಹಾಗೂ ಅರೆಯಂಜಮ್‌ ಮಲಪ್ಪುರಂ ಬೋರ್ಡ್‌ ಭಾಗವಹಿಸಲಿವೆ ಎಂದು ಹೇಳಿದರು.

ಶೋಭಾಯಾತ್ರೆಯು ಬೊಳುವಾರು ವೃತ್ತದಿಂದ ಚೆಂಡೆಮೇಳ, ವಾದ್ಯ ಘೋಷ, ಕುಣಿತ ಭಜನೆ ಹಾಗೂ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಆಕರ್ಷಣೆಗಳೊಂದಿಗೆ ಶ್ರೀ ಶಾರದ ದೇವಿಯ ಭವ್ಯ ಶೋಭ ಯಾತ್ರೆಯು ನಡೆಯಲಿದೆ. ಜೊತೆಗೆ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶಿಸ್ತು ಪಾಲನೆಯೇ ಮುಖ್ಯವಾಗಿರುತ್ತದೆ. ಆದ್ದರಿಂದ ಶೋಭಾಯಾತ್ರೆಯು ಸಾಗುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆ ವಹಿಸುವಂತೆ ವಿನಂತಿಸಿಕೊಂಡರು.

ಮುಖ್ಯವಾಗಿ ಇಲ್ಲಿಯವರೆಗೆ ಪುತ್ತೂರು ಶಾರದೋತ್ಸವ ಎಂಬ ಹೆಸರಿದ್ದು ಇನ್ನು ಮುಂದೆ ಪುತ್ತೂರು ದಸರಾ ಎಂಬ ನಾಮಾಂಕಿತದಿಂದ ನಡೆಯಲಿದೆ. ಜೊತೆಗೆ ಸಮಯಪಾಲನೆ ಮತ್ತು ಶಿಸ್ತಿಗೆ ಆಧ್ಯತೆ ನೀಡಿದ್ದು. ಎಲ್ಲಾ ಕಾರ್ಯಕ್ರಮಗಳೂ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುತ್ತದೆ. ವಿಶೇಷವಾಗಿ ಈ ಬಾರಿ ಡಿ.ಜೆ. ಮತ್ತು ಸುಡಿಮದ್ದಿನ ಪರ್ದರ್ಶನ ಇರುವುದಿಲ್ಲ. ನಮ್ಮ ನಾಡಿನ ಸಂಸ್ಕೃತಿಗೆ ಹೆಚ್ಚು ಒತ್ತನ್ನು ನೀಡಿ ಈ ಬಾರಿಯ ಶಾರದೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಯಂತ್‌ ಉರ್ಲಾಂಡಿ, ಶೋಭಾಯಾತ್ರೆಯ ಸಂಚಾಲಕ ಕೃಷ್ಣ ಎಂ. ಅಳಿಕೆ ಹಾಗೂ ಕೋಶಾಧಿಕಾರಿ ವಸಂತ್‌ ಕುಮಾರ್‌ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಕುದ್ರೋಳಿ: ಶಾರದಾ ಮಾತೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ | ಮಂಗಳೂರು ದಸರಾದಲ್ಲಿ ಹಲವು ವಿಶೇಷತೆ: ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ಭಕ್ತಿಪೂರ್ಣ ಮಂತ್ರಘೋಷಗಳು, ಸಾಂಪ್ರದಾಯಿಕ ಸಂಗೀತ ಮತ್ತು ವರ್ಣರಂಜಿತ ಸಾಂಸ್ಕೃತಿಕ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವಿರುದ್ಧ ವಿ.ಹಿಂ.ಪ. ಆರೋಪ; ಅಭಿವೃದ್ಧಿ ಸಮಿತಿ ವಿಸರ್ಜನೆಗೆ ಆಗ್ರಹ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯು ಭಕ್ತರ ಧಾರ್ಮಿಕ ಭಾವನೆ…