ಪುತ್ತೂರು: ಎಲೆಕ್ಟ್ರಿಕ್ ಉತ್ಪನ್ನಗಳ ಅತೀ ದೊಡ್ಡ ಉತ್ಪಾದನಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹೆವೆಲ್ಸ್ ಕಂಪೆನಿಯ ಹೆವೆಲ್ಸ್ ಎಕ್ಸ್’ಪೀರಿಯನ್ಸ್ ಸೆಂಟರ್ ಗುರುವಾರ ಪುತ್ತೂರು ಮೊಳಹಳ್ಳಿ ಶಿವರಾಯ ರಸ್ತೆಯ ಸುಶಾ ಚೇಂಬರ್ಸ್ ಕಟ್ಟಡ ಮೈತ್ರಿ ಇಲೆಕ್ಟ್ರಿಕ್ ಕಂ.ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಗುಣಮಟ್ಟದ ಉತ್ಪನ್ನವೇ ಸಂಸ್ಥೆಯ ಬೆಳವಣಿಗೆಗೆ ಕಾರಣ:
ಮಾಸ್ಟರ್ ಪ್ಲಾನರಿಯ ಪಾಲುದಾರ ಅರ್ಜುನ್ ಮಾತನಾಡಿ, ಒಂದು ಸಂಸ್ಥೆ ದೊಡ್ಡದಾಗಿ ಬೆಳೆದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಗುಣಮಟ್ಟದ ಉತ್ಪನ್ನ. ಮೈತ್ರಿ ಇಲೆಕ್ಟ್ರಿಕ್ ಕಂ. ಇದರ ಮಾಲಕರಾದ ರವಿನಾರಾಯಣ ಅವರು ಪ್ರಾರಂಭಿಸಿದ ಪುಟ್ಟ ಸಂಸ್ಥೆ ಇಂದು ದೊಡ್ಡದಾಗಿ ಬೆಳೆದು ನಿಂತಿದೆ ಅಂದರೆ ಅದಕ್ಕೆ ಕಾರಣ ಗುಣಮಟ್ಟ ಹಾಗೂ ಅವರ ಪರಿಶ್ರಮ. ಇಂತಹ ಸಂಸ್ಥೆಗಳು ಪುತ್ತೂರಿಗೆ ಇನ್ನಷ್ಟು ಅವಶ್ಯಕತೆ ಇದೆ. ಹಾಗಾಗಿ ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.
ಪರಸ್ಪರ ಸಹಕಾರದಿಂದ ಬೆಳವಣಿಗೆ:
ಮತ್ತೋರ್ವ ಪಾಲುದಾರ ಆಕಾಶ್ ಮಾತನಾಡಿ, ಪರಸ್ಪರ ಬೆಂಬಲವಿದ್ದರೆ ಮಾತ್ರ ಎಲ್ಲರೂ ಜೊತೆಯಾಗಿ ಬೆಳೆಯಲು ಸಾಧ್ಯ. ರವಿನಾರಾಯಣ ಅವರು ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಪರಿಣಾಮ ಎಲ್ಲರೂ ಒಟ್ಟೊಟ್ಟಿಗೆ ಬೆಳೆಯಲು ಸಹಕಾರಿಯಾಗಿದೆ ಎಂದ ಅವರು, ಮೈತ್ರಿ ಇಲೆಕ್ಟ್ರಿಕ್ ಕಂ.ನ ಹೆವೆಲ್ಸ್ ಎಕ್ಸ್’ಪೀರಿಯನ್ಸ್ ಸೆಂಟರ್ ಗೆ ಶುಭಹಾರೈಸಿದರು.
ಹೆವೆಲ್ಸ್ ಕಂಪೆನಿಯ ಪುತ್ತೂರಿನ ಏಕೈಕ ಡೀಲರ್ ಮೈತ್ರಿ ಕಂಪೆನಿ:
ಹೆವೆಲ್ಸ್ ಇಂಡಿಯಾ ಲಿ. ಕಂಪನಿಯ ಕರ್ನಾಟಕದ ಬ್ರ್ಯಾಂಚ್ ಹೆಡ್ ನವೀನ್ ಚಂದ್ರನ್ ಮಾತನಾಡಿ, ಹೆವೆಲ್ಸ್ ಕಂಪೆನಿಯ ಪುತ್ತೂರಿನ ಏಕೈಕ ಡೀಲರ್ ಮೈತ್ರಿ ಇಲೆಕ್ಟ್ರಿಕಲ್ ಕಂ. ಹೆವೆಲ್ಸ್ ಕಂಪೆನಿಯ ಉತ್ಪನ್ನಗಳನ್ನು ಗ್ರಾಹಕರು ಮೈತ್ರಿ ಎಲೆಕ್ಟ್ರಿಕಲ್ ನಲ್ಲೂ ಖರೀದಿಸಬಹುದಾಗಿದೆ. ರವಿನಾರಾಯಣ ಅವರು ಪುಟ್ಟದಾಗಿ ಸಂಸ್ಥೆಯನ್ನು ಆರಂಭಿಸಿದ್ದರು. ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಅದೇ ರೀತಿ ಹೆವೆಲ್ಸ್ ಕಂಪೆನಿಯ ಸಂಸ್ಥಾಪಕರು ಕೇವಲ 10 ಸಾವಿರ ರೂಪಾಯಿಯಿಂದ ಸಂಸ್ಥೆಯನ್ನು ಆರಂಭಿಸಿದ್ದರು. ಇಂದು 25 ಸಾವಿರ ಕೋಟಿ ರೂ.ನ ಉದ್ಯಮವಾಗಿ ಬೆಳೆದಿದೆ ಎಂದರು.
ಹೆವೆಲ್ಸ್ ಎಕ್ಸ್’ಪೀರಿಯನ್ಸ್ ಸೆಂಟರಿನಲ್ಲಿ ಎಸಿ, ಫ್ಯಾನ್ಸ್, ಸ್ವಿಚ್, ಮೈನ್ ಸ್ವಿಚ್, ಲೈಟ್ಸ್, ಮಿಕ್ಸಿ ಮೊದಲಾದ ಉಪಕರಣಗಳು ಲಭ್ಯವಿವೆ. ಮುಖ್ಯವಾಗಿ ಹೆವೆಲ್ಸ್ ಕಂಪನಿಯ ಇವಿ ಚಾರ್ಜರ್ಸ್ ಕೂಡ ಇಲ್ಲಿ ಲಭ್ಯ ಎಂದರು.
ಟಚ್ ಆ್ಯಂಡ್ ಫೀಲ್:
ಹೆವೆಲ್ಸ್ ಕಂಪನಿಯ ಡಿವಿಝನಲ್ ಆರ್.ಎಸ್.ಎಂ. ವಿವೇಕ್ ಭಟ್ ಮಾತನಾಡಿ, ಗ್ರಾಹಕರಿಗೆ ಟಚ್ ಆ್ಯಂಡ್ ಫೀಲ್ ಪಡೆದುಕೊಂಡು ಖರೀದಿ ಮಾಡಬೇಕು ಎನ್ನುವ ಉದ್ದೇಶದಿಂದ ಹ್ಯಾವೆಲ್ಸ್ ಎಕ್ಸ್’ಪೀರಿಯನ್ಸ್ ಸೆಂಟರ್ ಅನ್ನು ಪುತ್ತೂರಿನ ಮೈತ್ರಿ ಇಲೆಕ್ಟ್ರಿಕಲ್ ನಲ್ಲಿ ಆರಂಭಿಸಲಾಗಿದೆ. ಗ್ರಾಹಕರನ್ನು ತಲುಪಲು ಮೈತ್ರಿ ಇಲೆಕ್ಟ್ರಿಕಲ್ ಕಂಪೆನಿಯು ಸದಾ ಒಂದಲ್ಲ ಒಂದು ವಿಚಾರದಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದೆ. ಇದೀಗ ಹೆವೆಲ್ಸ್ ಕಂಪೆನಿಯ ಡೀಲರ್ ಶಿಪ್ ಕೂಡ ಪಡೆದುಕೊಂಡಿದೆ. ಗ್ರಾಹಕರು ಗುಣಮಟ್ಟದ ಉತ್ಪನ್ನಗಳಿಗಾಗಿ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಕೇಳಿಕೊಂಡರು.
ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಹ್ಯಾವೆಲ್ಸ್ ಡೀಲರ್ ಶಿಪ್:
ಮೈತ್ರಿ ಇಲೆಕ್ಟ್ರಿಕ್ ಕಂ. ಮಾಲಕ ರವಿ ನಾರಾಯಣ ಮಾತನಾಡಿ, ಆರಂಭದಲ್ಲಿ ಪುಟ್ಟದಾಗಿ ಸಂಸ್ಥೆಯನ್ನು ಪ್ರಾರಂಭಿಸಿದ್ದೆ. ಆ ಸಂದರ್ಭ ಅನೇಕರು ನಮಗೆ ಸಹಕಾರ ನೀಡಿದ್ದಾರೆ. ಆದ್ದರಿಂದಾಗಿ ಮೈತ್ರಿ ಇಲೆಕ್ಟ್ರಿಕ್ ಕಂ ಇಂದು ಈ ಬೆಳವಣಿಗೆ ಕಂಡಿದೆ. ಇಂದು ಹೆವೆಲ್ಸ್ ಎಕ್ಸ್’ಪೀರಿಯನ್ಸ್ ಸೆಂಟರ್ ಅನ್ನು ಶುಭಾರಂಭ ಮಾಡಿದ್ದೇವೆ. ಕಂಪೆನಿಯ ಡೀಲರ್ ಶಿಪ್ ಪಡೆದುಕೊಂಡು, ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರ ಕೈಗೆ ನೀಡಬೇಕು ಎನ್ನುವ ಉದ್ದೇಶದಿಂದ ಮಳಿಗೆಯನ್ನು ಪ್ರಾರಂಭ ಮಾಡಿದ್ದೇವೆ. ಎಲ್ಲರ ಸಹಕಾರ ಅಗತ್ಯ ಎಂದು ಕೇಳಿಕೊಂಡರು.
ಇಂಜಿನಿಯರ್ ಕಮ್ಮಾಜೆ ಕೇಶವ್ ಭಟ್, ಹೆವೆಲ್ಸ್ ಕಂಪನಿಯ ಕರ್ನಾಟಕ ಕೋಸ್ಟಲ್ ಟೆರಿಟರ್ ಫ್ಯಾನ್ ಮತ್ತು ಲೈಟ್ಸ್ ಮ್ಯಾನೇಜರ್ ರುದ್ರಯ್ಯ (ಮುತ್ತು), ಮಾರ್ಕಂ ಮ್ಯಾನೇಜರ್ ಆನಂದ್, ಬ್ರ್ಯಾಂಡ್ ಸ್ಟೋರ್ ಮ್ಯಾನೇಜರ್ ಕಿಶೋರ್ ಮತ್ತು ಕರಾವಳಿ ಭಾಗದ ಎಲ್ಲಾ ಉತ್ಪನ್ನಗಳ ಮ್ಯಾನೇಜರ್ಸ್ ಉಪಸ್ಥಿತರಿದ್ದರು.
ಶೌರಿ ಪ್ರಾರ್ಥಿಸಿದರು. ಮೈತ್ರಿ ಕಂಪನಿಯ ಮಾಲಕರ ಪುತ್ರ ಪ್ರಮಥ ಸ್ವಾಗತಿಸಿ, ಶಿವ ಸುಬ್ರಹ್ಮಣ್ಯ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೈತ್ರಿ ಕಂಪನಿಯ ಉರ್ಬನ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.

























