ಟ್ರೆಂಡಿಂಗ್ ನ್ಯೂಸ್

ಕುಂತೂರು: ಮಲ್ಲಿಕಾ ಲೇಡೀಸ್ ಟೈಲರ್ ಮತ್ತು ಮೆಟೀರಿಯಲ್ಸ್’ನ 3ನೇ ಶಾಖೆ ಉದ್ಘಾಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಆಲಂಕಾರು: ಕಡಬ ತಾಲೂಕಿನ ಕುಂತೂರಿನಲ್ಲಿ ಮಲ್ಲಿಕಾ ಲೇಡೀಸ್ ಟೈಲರ್ ಮತ್ತು ಮೆಟೀರಿಯಲ್ಸ್ ಇದರ 3ನೇ ಶಾಖೆ ಕುಂತೂರಿನಲ್ಲಿ ಉದ್ಘಾಟನೆಗೊಂಡಿತು.

gl

ಸಂಸ್ಥೆಯ ಮಾಲಕಿ ಮಲ್ಲಿಕಾ ಗಣೇಶ್ ಅವರ ಅತ್ತೆ ಶಾಂತಾ, ತಂದೆ ಪರಮೇಶ್ವರ ಆಚಾರ್ಯ, ತಾಯಿ ಸರೋಜಿನಿ ಅವರು ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ವಿದ್ವಾನ್ ಸಂದೀಪ್ ಪುರೋಹಿತ್ ಅವರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಮುಖರಾದ ಧನಂಜಯ, ಸುರೇಂದ್ರ, ಮುಕ್ತಾ ಆಚಾರ್ಯ ಉಪಸ್ಥಿತರಿದ್ದು, ಶುಭಹಾರೈಸಿದರು.

ಮಲ್ಲಿಕಾ ಗಣೇಶ್ ಮಾತನಾಡಿ, ವಿವಿಧ ಬಗೆಯ ಬಟ್ಟೆಗಳು ಹಾಗೂ ಮೆಟೀರಿಯಲ್ಸ್ ಅನ್ನು ಆಕರ್ಷಕ ದರದಲ್ಲಿ ಗ್ರಾಹಕರಿಗೆ ನೀಡಬೇಕು ಎನ್ನುವ ಸದುದ್ದೇಶದಿಂದ ಸಂಸ್ಥೆಯ ಮೂರನೇ ಮಳಿಗೆಯನ್ನು ಪ್ರಾರಂಭಿಸಿದ್ದೇವೆ. ನಮ್ಮಲ್ಲಿ ಸೀರೆಗಳು, ನೈಟಿ, ಕುರ್ತ, ಲೇಡಿಸ್ ಪ್ಲಾಜ ಪ್ಯಾಂಟ್, ಟಾಪ್ಸ್, ಧೋತಿ ಪ್ಯಾಂಟ್, ಲೆಗ್ಗಿನ್ಸ್, ಒಳ ಉಡುಪುಗಳು ಲಭ್ಯ. ಇದರ ಜೊತೆಗೆ ಮದುವೆ ಸೀರೆಗಳಿಗೆ ಗೊಂಡೆ ಹಾಗೂ ಬ್ಲೌಸ್ ಗೆ ಎಂಬ್ರಾಯಿಡರಿ ಮಾಡಿ ಕೊಡುತ್ತೇವೆ ಎಂದರು.

ಮಲ್ಲಿಕಾ ಗಣೇಶ್ ಅವರ ಪತಿ ಗಣೇಶ್ ಸ್ವಾಗತಿಸಿ, ವಂದಿಸಿದರು. ಪ್ರದೀಪ್ ಆಚಾರ್ಯ ಪುಳಿತ್ತಡಿ, ರಾಜೇಶ್ವರಿ ಪ್ರದೀಪ್ ಆಚಾರ್ಯ ಅವರು ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕರೆ ಹೋಗ್ತಿಲ್ಲ, ನೆಟ್ ವರ್ಕ್ ಕೆಲಸ ಮಾಡ್ತಿಲ್ಲ!! ವರ್ಷಾಂತ್ಯಕ್ಕೆ ಹೀಗೇಕೆ ಮಾಡ್ತು ಕಂಪೆನಿಗಳು??

ಪುತ್ತೂರು: ಮೊಬೈಲ್ ಕರೆ ಹೋಗ್ತಿಲ್ಲ. ಇಂಟರ್ ನೆಟ್ ವರ್ಕ್ ಆಗ್ತಿಲ್ಲ. ಹೀಗೇಕಾಯ್ತು ಎಂಬ…

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…