ಧಾರ್ಮಿಕ

ಪುತ್ತೂರು: ವಿದ್ಯಾರ್ಥಿನಿ ಸಜ್ಞಾ ಇಸ್ಮಾಯಿಲ್ ಕೈ ಬರೆಹದಲ್ಲಿ ಮೂಡಿದ ಪವಿತ್ರ ಕುರ್‌ಆನ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್ ಆನ್ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.

ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿ, ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮದ ಬೈತಡ್ಕ ನಿವಾಸಿ ಇಸ್ಮಾಯಿಲ್-ಝಹ್ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್ಞಾ ಈ ಸಾಧನೆ ಮಾಡಿದವರು.

ಸಜ್ಞಾ ಸುಮಾರು 5 ವರ್ಷ ಪರಿಶ್ರಮದಿಂದ ಇದನ್ನು ಸಾಧಿಸಿದ್ದಾರೆ. 2021ರ ಜನವರಿಯಲ್ಲಿ ಬರವಣಿಗೆ ಆರಂಭಿಸಿ, 2025ರ ಆಗಸ್ಟ್‌ನಲ್ಲಿ ಪೂರ್ಣಗೊಳಿಸಿದ್ದಾರೆ.

ಒಂದು ಪುಟ ಬರೆಯಲು 4 ಗಂಟೆ ಬೇಕಾಗುತ್ತಿತ್ತು. ಕೆಲವು ದಿನ 8 ಗಂಟೆ ಬಳಸಿ 2 ಪುಟ ಬರೆದಿದ್ದೇನೆ. 302 ದಿನದಲ್ಲಿ (2,416 ಗಂಟೆ) ಈ ಕಾರ್ಯ ಪೂರ್ಣಗೊಳಿಸಿದ್ದೇನೆ ಎಂದು ಸಜ್ಞಾ ಇಸ್ಮಾಯಿಲ್ ಅವರು ಪ್ರತಿಕ್ರಿಯಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಸಾಂಪ್ರದಾಯಿಕ ದೀಪಾವಳಿ ಆಚರಣೆ | ಧರ್ಮದೇವತೆಗಳಿಗೆ ಪರ್ವ ಸೇವೆ, ಬಲಿಯೇಂದ್ರ ಪೂಜೆ

ಧರ್ಮಸ್ಥಳ: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವಂತೆಯೇ,…

ಕನ್ನಯ ತರವಾಡು ಮನೆಯಲ್ಲಿ ಹೊಸ ಅಕ್ಕಿ ಊಟ: ಸಾಮಾಜಿಕ ಸಮೀಕ್ಷೆಯ ಮಾಹಿತಿ ನೀಡಿದ ಸುಂದರ ಗೌಡ ನಡುಬೈಲು

ಬಡಗನ್ನೂರು ಗ್ರಾಮದ ಕನ್ನಯ ಕುಟುಂಬಸ್ಥರ ತರವಾಡು ಮನೆಯಲ್ಲಿ ಭಾನುವಾರ ಹೊಸಅಕ್ಕಿ ಊಟ ಕಾರ್ಯಕ್ರಮ…

ಕರಾವಳಿಯ ವಿಶಿಷ್ಟ ಕಾರ್ಯಕ್ರಮವಾಗಿ ಪುತ್ತೂರು ದೀಪೋತ್ಸವ 2026 | ಲೋಗೋ, ಆಮಂತ್ರಣ ಬಿಡುಗಡೆಗೊಳಿಸಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ…

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…