tamanvi
ಧಾರ್ಮಿಕ

ಬನ್ನೂರು ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರು ಸ್ಫೂರ್ತಿ ಮೈದಾನದ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಶನಿವಾರ ಮಧ್ಯಾಹ್ನ ಜರಗಿತು.

maithri

shani

bannur

ಬೆಳಿಗ್ಗೆ ಗಣಪತಿ ಹೋಮ ನಡೆದು, ಬಳಿಕ ಶ್ರೀ ಶನೀಶ್ವರ ಪೂಜೆ ಪ್ರಾರಂಭಗೊಂಡಿತು. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ಇದೇ ಸಂದರ್ಭ ಶ್ರೀ ಶನೀಶ್ವರ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಿತು. ಹರೀಶ್ ಶಾಂತಿ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದಿನೇಶ್ ಸಾಲ್ಯಾನ್ ಅವರ ನೇತೃತ್ವ ವಹಿಸಿದ್ದರು.

ಸಂಜೆ 5.30ರಿಂದ ಅಂಗನವಾಡಿ ಪುಟಾಣಿಗಳಿಂದ, ಶಾಲಾ ಮಕ್ಕಳಿಂದ, ಸಂಘ ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಲಿದೆ. ಸಂಜೆ 7 ಗಂಟೆಯಿಂದ ಸ್ಫೂರ್ತಿ ಯುವಕ – ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ, ಬಾಲಸಭಾದ 36ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆದು, ರಾತ್ರಿ 11ರಿಂದ ಜಾಂಬವತಿ ಕಲ್ಯಾಣ ಬಬ್ರುವಾಹನ ಕಾಳಗ ಯಕ್ಷಗಾನ ಜರಗಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts