tamanvi
ಧಾರ್ಮಿಕ

ಶ್ರೀನಿವಾಸ ಕಲ್ಯಾಣಕ್ಕೆ ಮುನ್ನ ಕಾಶೀ ಯಾತ್ರೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಆರಂಭವಾಗಿದೆ.

ಪುತ್ತೂರು ಶ್ರೀ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಪೂರ್ವಭಾವಿಯಾಗಿ ಇದೀಗ ಶ್ರೀನಿವಾಸನ ಕಾಶೀ ಯಾತ್ರೆ ಆರಂಭಗೊಂಡಿದೆ.

ಸಭಾ ವೇದಿಕೆಯಿಂದ ಹೊರಟ ಶ್ರೀನಿವಾಸ ದೇವರ ಮೆರವಣಿಗೆ ಕಾಶೀ ಯಾತ್ರೆಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿತು. ಅರುಣ್ ಕುಮಾರ್ ಪುತ್ತಿಲ ಅವರ ಚಾಚಿದ ಕೈಗಳಲ್ಲಿ ಶ್ರೀನಿವಾಸ ವಿರಾಜಮಾನವಾಗಿದ್ದ.

ಇದಕ್ಕೆ ಮೊದಲು ಶ್ರೀನಿವಾಸ ಕಲ್ಯಾಣೋತ್ಸವ ಸೇವೆ ಮಾಡಿಸಿದ ಭಕ್ತರನ್ನು ವೇದಿಕೆಗೆ ಆಹ್ವಾನಿಸಲಾಗಿದೆ.

ಕಾಶೀ ಯಾತ್ರೆ ಮುಗಿಸಿ ಮರಳುವ ಶ್ರೀನಿವಾಸನಿಗೆ ಅದ್ಧೂರಿ ಕಲ್ಯಾಣ ನಡೆಯಲಿದೆ.

ಶೃಂಗಾರಗೊಂಡ ವೇದಿಕೆ, ಹೂಗಳ ಆಕರ್ಷಕ ಸಿಂಗಾರ, ಕಲ್ಯಾಣೋತ್ಸವ ನೋಡಲು ಆಗಮಿಸಿದ ಭಕ್ತ ಸಾಗರ, ಅಚ್ಚುಕಟ್ಟು ವ್ಯವಸ್ಥೆ, ಕಲ್ಯಾಣದ ವೈಭವಕ್ಕೆ ಇಮ್ಮಡಿಗೊಳಿಸಿದ ಗದ್ದೆಯಲ್ಲಿದ್ದ ಸಂತೆ ಹೀಗೆ ಹಲವು ವಿಶೇಷತೆಗಳು ಶ್ರೀನಿವಾಸನ ಕಲ್ಯಾಣದಲ್ಲಿವೆ.

ಗೋಧೂಳಿ ಲಗ್ನದಲ್ಲಿ ನೆರವೇರುವ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಬಳಿಕ ಅನ್ನಸಂತರ್ಪಣೆ, ಸುಡುಮದ್ದು ಪ್ರದರ್ಶನ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts