Gl harusha
ಕರಾವಳಿದೇಶ

ಕಟಪಾಡಿ: ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು

ಎಲ್ಲಿಯ ಕಾಶ್ಮೀರ, ಎಲ್ಲಿಯ ಕರಾವಳಿ! ಅಲ್ಲಿ ಕಡುಶೀತ. ಇಲ್ಲಿ ವರ್ಷದ ಹೆಚ್ಚಿನ ಅವಧಿಯಲ್ಲಿ ಧಗಧಗ ಸೆಕೆ! ಆದರೂ ಶೀತಲ ವಾತಾವರಣಕ್ಕೆ ಸೂಕ್ತವಾಗಿರುವ ಕಾಶ್ಮೀರಿ ಕೇಸರಿಯನ್ನು ಕರಾವಳಿಯಲ್ಲಿ ಬೆಳೆಯುವ ಹೊಸ ಪ್ರಯೋಗದಲ್ಲಿ ಐಟಿ ಉದ್ಯೋಗಿ ಯುವಕರು ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಟಪಾಡಿ: ಎಲ್ಲಿಯ ಕಾಶ್ಮೀರ, ಎಲ್ಲಿಯ ಕರಾವಳಿ! ಅಲ್ಲಿ ಕಡುಶೀತ. ಇಲ್ಲಿ ವರ್ಷದ ಹೆಚ್ಚಿನ ಅವಧಿಯಲ್ಲಿ ಧಗಧಗ ಸೆಕೆ! ಆದರೂ ಶೀತಲ ವಾತಾವರಣಕ್ಕೆ ಸೂಕ್ತವಾಗಿರುವ ಕಾಶ್ಮೀರಿ ಕೇಸರಿಯನ್ನು ಕರಾವಳಿಯಲ್ಲಿ ಬೆಳೆಯುವ ಹೊಸ ಪ್ರಯೋಗದಲ್ಲಿ ಐಟಿ ಉದ್ಯೋಗಿ ಯುವಕರು ಯಶಸ್ವಿಯಾಗಿದ್ದಾರೆ.

srk ladders
Pashupathi
Muliya

ಕೆ.ಜಿ.ಗೆ 4ರಿಂದ 7 ಲಕ್ಷ ರೂ. ಬೆಲೆ ಬಾಳುವ ಈ ಕಾಶ್ಮೀರಿ ಕೇಸರಿಯನ್ನು ಕರಾವಳಿ ಭಾಗದಲ್ಲಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದವರು ಸಾಫ್ಟ್ ವೇರ್ ಡೆವಲಪಿಂಗ್ ಉದ್ಯಮಿಗಳಾದ ಅನಂತ್‌ಜಿತ್ ಉಡುಪಿ, ಅಕ್ಷತ್ ಬಿ.ಕೆ. ಮಣಿಪಾಲ ಅವರು. ಕಾಲೇಜು ಹಂತದಿಂದ ಸ್ನೇಹಿತರಾಗಿದ್ದ ಇವರು ಜತೆಯಾಗಿಯೇ ಐಟಿ ಉದ್ಯೋಗಿಗಳಾಗಿದ್ದು, ಬಳಿಕ ಸ್ವಂತ ಕಂಪೆನಿ ಆರಂಭಿಸಿದ್ದಾರೆ. ಈಗ ಅವರು ಹೊಸ ಪ್ರಯೋಗದ ತವಕದೊಂದಿಗೆ ಕೇಸರಿ ಬೆಳೆದಿದ್ದಾರೆ. ಉಡುಪಿ ಬೈಲೂರಿನ ಅನಂತ್‌ಜಿತ್‌ ವಾಸದ ಮನೆಯ ಮೇಲ್ಮಹಡಿಯಲ್ಲಿ ಅವರ ಕೇಸರಿ ಕೃಷಿ ನಡೆಯುತ್ತಿದೆ.

ಅನಂತ್‌ಜಿತ್‌ ಮತ್ತು ಅಕ್ಷತ್ ಬಿ.ಕೆ. ಅವರು ಮಹಡಿಯಲ್ಲಿರುವ 180 ಚದರ ಅಡಿ ಕೋಣೆಯನ್ನು ಬಳಸಿಕೊಂಡು ತಂಪನೆಯ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆಯುತ್ತಿದ್ದಾರೆ. ಕ್ರೂಕಸ್ ಸ್ಯಾಟಿವಸ್‌ನ ಹೂವಿನಿಂದ ಪಡೆಯುವ ಮಸಾಲೆ ಕೇಸರಿ ಕ್ರೋಕಸ್‌ ಇದರ ಉತ್ತಮ ಗುಣಮಟ್ಟದ ಗಡ್ಡೆಯನ್ನು ಕಾಶ್ಮೀರದ ಬೆಳೆಗಾರರ ಮೂಲಕವೇ ತರಿಸಿಕೊಂಡು ಕೃಷಿ ಮಾಡಿದ್ದಾರೆ. ಮೊದಲಿಗೆ ಸ್ಥಳೀಯ ಮಣ್ಣಿನಲ್ಲಿ ಕೇಸರಿ ಗಡ್ಡೆ ಬೆಳೆಯುವ ಪ್ರಯತ್ನ ನಡೆಸಿದ್ದರು. ಅದು ಸಫಲವಾಗಿರಲಿಲ್ಲ.

6 ಡಿಗ್ರಿ ಸೆ. ಉಷ್ಣಾಂಶ ಬೇಕು

ಕೇಸರಿ ಬೆಳೆಗೆ ಅತ್ಯಂತ ಮುಖ್ಯವಾಗಿ ಬೇಕಿರುವುದು ತಂಪಿನ ವಾತಾವರಣ. ಸುಮಾರು ಆರು ಡಿಗ್ರಿ ಉಷ್ಣಾಂಶವನ್ನು ನಿರಂತರವಾಗಿ ಕಾದಿಟ್ಟುಕೊಳ್ಳಬೇಕು. ಇದಕ್ಕಾಗಿ ಎ.ಸಿ., ಚಿಲ್ಲರ್ ಮತ್ತು ಹ್ಯುಮಿಡಿಫೈ‌ರ್ ಯಂತ್ರಗಳನ್ನು ಬಳಸಲಾಗಿದೆ. ಗಡ್ಡೆಗಳನ್ನು ಇರುವೆ ದಾಳಿ ಮತ್ತು ಇಲಿಯ ಕಾಟದಿಂದ ಮುಕ್ತಗೊಳಿಸ ಬೇಕಾಗುತ್ತದೆ. ಜತೆಗೆ ಕೋಣೆಯೊಳಗೆ ಹೋಗುವಾಗ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಇಷ್ಟೆಲ್ಲ ವ್ಯವಸ್ಥೆ ಮಾಡಲು 10 ಲಕ್ಷ ರೂ.ಗೂ ಅಧಿಕ ಬಂಡವಾಳ ಹೂಡಲಾಗಿದೆ ಎನ್ನುತ್ತಾರೆ ಗೆಳೆಯರು. ಇದಕ್ಕಾಗಿ ಎಂಟು ಲಕ್ಷ ರೂ. ಬ್ಯಾಂಕ್‌ ಸಾಲ ಪಡೆದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts