tamanvi
ದೇಶ

ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’ ಪ್ರಶಸ್ತಿ ಪ್ರದಾನ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಕೊಲೊಂಬೊ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಮಿತ್ರ ವಿಭೂಷಣ’ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

maithri

ಥೈಲ್ಯಾಂಡ್ ಬಳಿಕ ಈಗ ಪ್ರಧಾನಿ ಮೋದಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ದೇಶದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಬಳಿಕ ಮೋದಿಗೆ ‘ಮಿತ್ರ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಲಂಕಾ ಸರ್ಕಾರವು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ದೇಶಗಳ ಮುಖ್ಯಸ್ಥರಿಗೆ ಈ ಗೌರವವನ್ನು ನೀಡುತ್ತದೆ.

ಭಾರತವು ಐತಿಹಾಸಿಕವಾಗಿ ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಸಹಾಯಹಸ್ತ ಚಾಚಿದ ಮೊದಲ ದೇಶ ಭಾರತವಾಗಿತ್ತು. ಈಗ ಈ ಉತ್ತಮ ಸಂಬಂಧಗಳನ್ನು ಗುರುತಿಸಿ, ಶ್ರೀಲಂಕಾ ಸರ್ಕಾರ ಪ್ರಧಾನಿ ಮೋದಿಯವರಿಗೆ ಈ ಗೌರವವನ್ನು ನೀಡಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾರತದ 140 ಕೋಟಿ ದೇಶವಾಸಿಗಳಿಂದ ಬಂದ ಗೌರವ ಎಂದು ಮೋದಿ ಬಣ್ಣಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…

ಬಾಲಿವುಡ್ ನಟರು, ಕ್ರಿಕೆಟ್ ತಾರೆಯರು ಚುನಾವಣಾ ಆಖಾಡಕ್ಕೆ!! | ನಡುರಾತ್ರಿಯ ಬಿಜೆಪಿ ಸಭೆ ನಿರ್ಣಯಿಸಿದ ಆ ಸೆಲಬ್ರಿಟಿಗಳು ಯಾರು?

ನವದೆಹಲಿ: ಖ್ಯಾತ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌…