Gl jewellers
ದೇಶ

ಹೆಸರು ಬದಲಿಸಿಕೊಂಡ Zomato: ಇನ್ಮುಂದೆ ಫುಡ್ ಆರ್ಡರ್‌’ಗೆ ಈ ಹೆಸರಿನಿಂದ ಹುಡುಕಿ…!

ಆಹಾರ ಡೆಲಿವರಿ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿರುವ ಜೊಮ್ಯಾಟೊ ತನ್ನ ಹೆಸರು ಬದಲಿಸಲು ಮುಂದಾಗಿದೆ. ಕಂಪನಿಯ ಹೆಸರನ್ನು ಎಟರ್ನಲ್ (Eternal) ಎಂದು ಬದಲಾಯಿಸಲು ಕಂಪನಿಯ ಬೋರ್ಡ್ ಅನುಮತಿ ನೀಡಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಆಹಾರ ಡೆಲಿವರಿ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿರುವ ಜೊಮ್ಯಾಟೊ ತನ್ನ ಹೆಸರು ಬದಲಿಸಲು ಮುಂದಾಗಿದೆ. ಕಂಪನಿಯ ಹೆಸರನ್ನು ಎಟರ್ನಲ್ (Eternal) ಎಂದು ಬದಲಾಯಿಸಲು ಕಂಪನಿಯ ಬೋರ್ಡ್ ಅನುಮತಿ ನೀಡಿದೆ.

Pashupathi
Papemajalu garady
Karnapady garady

ಸಂಸ್ಥೆಯ ಹೆಸರನ್ನು ‘ಎಟರ್ನಲ್’ ಎಂದು ಬದಲಾಯಿಸುವ ವಿಶೇಷ ನಿರ್ಣಯಕ್ಕೆ ಕಂಪನಿಯ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ಜೊಮ್ಯಾಟೊ ತಿಳಿಸಿದೆ.

ಆದರೆ ಕಂಪನಿಯ ಆಹಾರ ಡೆಲಿವರಿ ಉದ್ಯಮದ ಹೆಸರು, ಜೊಮ್ಯಾಟೊ ಎಂದೇ ಇರಲಿದೆ.

ಕಂಪನಿಯ ಹೆಸರನ್ನು ಬದಲಿಸುವ ಬಗ್ಗೆ ಬೋರ್ಡ್‌ನಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡಿ, ಜೊಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಸಿಂಗ್ ಷೇರುದಾರರಿಗೆ ಮನವಿ ಮಾಡಿದ್ದರು. ಒಪ್ಪಿಗೆ ಸಿಕ್ಕರೆ ನಮ್ಮ ಕಾರ್ಪೊರೇಟ್ ವೆಬ್‌ಸೈಟ್‌ zomato.comನಿಂದ eternal.comಗೆ ಬದಲಾಗಲಿದೆ. ಸ್ಟಾಕ್ ಟಿಕರ್ ಕೂಡ ಬದಲಾಗಲಿದೆ ಎಂದು ಅವರು ಹೇಳಿದ್ದರು.

ಬ್ಲಿಂಕಿಟ್ ನಮ್ಮ ಭವಿಷ್ಯದ ಚಾಲಕ ಶಕ್ತಿಯಾಗಿದ್ದು, ಅದನ್ನು ಸ್ವಾಧೀನಪಡಿಕೊಂಡ ಬಳಿಕ, ಬ್ರಾಂಡ್ ಹಾಗೂ ಕಂಪನಿ ನಡುವೆ ವ್ಯತ್ಯಾಸ ಗುರುತಿಸಲು ಆಂತರಿಕವಾಗಿ ನಾವು ಜೊಮ್ಯಾಟೊ ಬದಲು ಎಟರ್ನಲ್ ಎಂದು ಬಳಕೆ ಮಾಡಲು ಪ್ರಾರಂಭಿಸಿದೆವು. ಈಗ ಸಾರ್ವಜನಿಕವಾಗಿ ಕಂಪನಿಯ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಹೆಣ್ಣು ಮಗು ಜನಿಸಿದರೆ 50 ಸಾವಿರ ರೂ., ಗಂಡು ಮಗುವಿಗೆ ಒಂದು ಹಸು!  ತೆಲುಗು ನಾಡಿನಲ್ಲಿ ಹೀಗೊಂದು ಸಂಚಲನ ಮೂಡಿಸಿದ ಬಹುಮಾನ!

ಮೂರನೇ ಮಗು ಮಾಡಿಕೊಳ್ಳುವಂತಹ ದಂಪತಿಗಳಿಗೆ ಸಿಹಿ ಸುದ್ದಿ ಒಂದು ದೊರೆತಿದ್ದು ಹೆಣ್ಣು ಮಗು…