ಶಿಕ್ಷಣ

ಪಿಯುಸಿ ಫಲಿತಾಂಶ: ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದ ಶ್ರೀವಿದ್ಯಾ ಜೆಡ್ಡು ಅವರಿಗೆ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಬಂಟ್ವಾಳ ತಾಲೂಕಿನ ಬಸವನಗುಡಿಯ ನಿವಾಸಿ ಶ್ರೀವಿದ್ಯಾ ಜೆಡ್ಡು ಅವರಿಗೆ ಮುಡಿಪು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಪಟಿಕ್ಕಲ್ ಕೃಷ್ಣಪಸಾದರ ಮಗ ಚಿನ್ಮಯ ರಾಮ ಅವರ ಉಪನಯನ ಸಂದರ್ಭ ಗೌರವಿಸಲಾಯಿತು.

gl

ಶ್ರೀವಿದ್ಯಾ ಜೆಡ್ಡು ಸ್ವರ ಸಿಂಚನ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿ. ಭರತನಾಟ್ಯ ಕಲಾವಿದೆ. ಬಹುಮುಖ ಕಲಾ ಪ್ರತಿಭೆ. ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.

ಪಟಿಕ್ಕಲ್ ರಾಮಚಂದ್ರ ಭಟ್ ಮತ್ತು ದೇವಕಿ ಅವರು ಶಾಲು ಪೇಟ ತೊಡಿಸಿದರು. ಶಾರದಮ್ಮ ಪೆರ್ನಾಜೆ ಹಾರ ಹಾಕಿದರು. ಗೌರಿ ಜೆಡ್ಡು ಪುಸ್ತಕ, ಸ್ಮರಣಿಕೆ ನೀಡಿದರು. ಕುಮಾರ ಪೆರ್ನಾಜೆ- ಸೌಮ್ಯ ಪೆರ್ನಾಜೆ ದಂಪತಿ ಜೇನುತುಪ್ಪ, ತಾಂಬೂಲ ನೀಡಿ ಶುಭ ಹಾರೈಸಿದರು.

ವಿದ್ಯಾರ್ಥಿನಿಯ ಹೆತ್ತವರು ನ್ಯಾಯವಾದಿ ಪ್ರಕಾಶ್ ನಾರಾಯಣ ಜೆಡ್ಡು, ರಮ್ಯ ಜೆಡ್ಡು ಹಾಗೂ ಕೃಷ್ಣಪ್ರಸಾದ್ ಪಟಿಕ್ಕಲ್, ಸ್ವರ್ಣ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…