tamanvi
ಶಿಕ್ಷಣ

ಲಕ್ಷ್ಯ ಡೇ ಕೇರ್ ಸೆಂಟರ್, ಕೌನ್ಸಲಿಂಗ್ ಸೆಂಟರ್: ರಮೇಶ್ ಅರವಿಂದ್, ಯೋಗರಾಜ್ ಭಟ್ ಶುಭಹಾರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಕ್ಕಳ ಹಿತಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ‘ಲಕ್ಷ್ಯ ಡೇ ಕೇರ್ ಸೆಂಟರ್’ ಹಾಗೂ ‘ ಲಕ್ಷ್ಯ ಕೌನ್ಸಲಿಂಗ್ ಸೆಂಟರ್‌’ಗೆ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಸಾಹಿತಿ ಯೋಗರಾಜ್ ಭಟ್ ಶುಭ ಹಾರೈಸಿದ್ದಾರೆ.

ಬೊಳುವಾರು ಬೈಪಾಸ್ ರಸ್ತೆಯ ಪ್ರಾರಂಭದಲ್ಲಿ ಪ್ರಾರ್ಥನಾ ಗಾರ್ಡನ್ಸ್ ಹೋಟೆಲ್ ಮುಂಭಾಗದಲ್ಲಿರುವ ರವಿಂದ ಕಾಂಪ್ಲೆಕ್ಸ್ ನಲ್ಲಿ ಲಕ್ಷ ಡೇ ಕೇರ್ ಸಂಸ್ಥೆಯು ಇದೇ ಜನವರಿಯಲ್ಲಿ ಶುಭಾರಂಭಗೊಳ್ಳಲಿದೆ. ಒಂದು ವರ್ಷದಿಂದ ನಾಲ್ಕು ವರ್ಷದ ಮಕ್ಕಳಿಗಾಗಿ ಶಿಶು ಶಿಕ್ಷಣ ತಜ್ಞರಿಂದ ಹಾಗೂ ಮನಃಶಾಸ್ತ್ರಜ್ಞರಿಂದಲೇ ನಡೆಸಲ್ಪಡುತ್ತಿದ್ದು ಪ್ರತಿ ಶಿಶುವಿನ ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನವಿರಿಸಿ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡುತ್ತಿದೆ. ಇದು ಉದ್ಯೋಗಕ್ಕಾಗಿ ತೆರಳುವ ಪಾಲಕರಿಗೆ ಬಹು ಅನುಕೂಲಕರವಾಗಿದ್ದು ಸಂಶೋಧಿತ ಶೈಕ್ಷಣಿಕ ಚಟುವಟಿಕೆ ಆಟಗಳನ್ನು ಹೊಂದಿರುತ್ತದೆ. ಪ್ರತಿ ಶಿಶುವಿಗೂ ಹಾಗೂ ಪಾಲಕರಿಗೂ ವೈದ್ಯರ ಸಲಹೆ ಆಧಾರಿತ ಆಪ್ತಸಲಹೆ ಮತ್ತು ಮಾರ್ಗದರ್ಶನದ ಲಭ್ಯವಿರುತ್ತದೆ. ಈಗಾಗಲೇ ದಾಖಲಾತಿ ಆರಂಭವಾಗಿದ್ದು ತಾಲೂಕಿನ ಪಾಲಕರಿಗೆ ಇದರ ಪ್ರಯೋಜನವನ್ನು ಪಡೆಯಲು ಸಂಸ್ಥೆ ವಿನಂತಿಸಿಕೊಂಡಿರುತ್ತದೆ.

ಇದರೊಂದಿಗೆ ಸಂಪೂರ್ಣ ಜೀವನಾಧಾರಿತ ಕೌನ್ಸೆಲಿಂಗ್ ಸೌಲಭ್ಯವನ್ನು ಲಕ್ಷ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಅಡೆತಡೆಗಳನ್ನು ನಿವಾರಿಸಲು ಎಜುಕೇಷನಲ್ ಕೌನ್ಸೆಲಿಂಗ್ ಸೌಲಭ್ಯ ಇರುವುದು. ಇದರಿಂದ ಮಕ್ಕಳಲ್ಲಿ ಯಾವುದೇ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾರ್ಗದರ್ಶನ ಪಡೆಯಲು ಸಾಧ್ಯವಿದೆ. ಜೊತೆಗೆ ಗರ್ಭಿಣಿಯರಿಗೆ, ಶಿಶುಗಳಿಗೆ, ಶಿಶು ಆರೈಕೆಗೆ, ಹದಿಹರೆಯದ ಯುವ ಮನಸ್ಸುಗಳಿಗೆ ಹಾಗೂ ವಯಸ್ಕರಿಗೆ ವಿಶೇಷ ಕೌನ್ಸೆಲಿಂಗ್‌ ಸೌಲಭ್ಯ ಇರುತ್ತದೆ. ಈ ಸಂಸ್ಥೆಯು ಪುತ್ತೂರಿನ ದುರ್ಗಾಪರಮೇಶ್ವರ ಭಟ್ ಹಾಗೂ ಅರ್ಪಿತಾ ಭಟ್ ಇವರ ನೇತೃತ್ವದಲ್ಲಿ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…