tamanvi
ಕರಾವಳಿ

ಹೆಲ್ಮೆಟ್ ನಿಂದ ಬಸ್ಸಿನ ಗಾಜು ಒಡೆದು ಪರಾರಿಯಾದ ಸವಾರ!!

ಸ್ಕೂಟರ್ ಸವಾರನೋರ್ವ ಹೆಲ್ಕೆಟ್‌ನಿಂದ ಕೆಎಸ್ಸಾರ್ಟಿಸಿ ಬಸ್‌ನ ಗಾಜು ಒಡೆದು ಪರಾರಿಯಾದ ಘಟನೆ ರವಿವಾರ ರಾತ್ರಿ ಪಡೀಲ್ ಸಮೀಪದ ಅಳಪೆಯಲ್ಲಿ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಸ್ಕೂಟರ್ ಸವಾರನೋರ್ವ ಹೆಲ್ಕೆಟ್‌ನಿಂದ ಕೆಎಸ್ಸಾರ್ಟಿಸಿ ಬಸ್‌ನ ಗಾಜು ಒಡೆದು ಪರಾರಿಯಾದ ಘಟನೆ ರವಿವಾರ ರಾತ್ರಿ ಪಡೀಲ್ ಸಮೀಪದ ಅಳಪೆಯಲ್ಲಿ ಸಂಭವಿಸಿದೆ.

ಬಸ್‌ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಸ್ಕೂಟರ್ ಸವಾರ ಅಳಪೆ ಬಳಿ ಅಡ್ಡ ಬಂದಿದ್ದಾನೆ. ಇದನ್ನು ಚಾಲಕ ಪ್ರಶ್ನಿಸಿದ್ದು ಆಗ ಸವಾರ ಬಸ್‌ಗೆ ಸ್ಕೂಟರ್ ಅಡ್ಡ ಇಟ್ಟು ತನ್ನಲ್ಲಿದ್ದ ಹೆಲ್ಕೆಟ್‌ನಿಂದ ಬಸ್‌ನ ಕಿಟಕಿ ಹಾಗೂ ಮುಂಭಾಗದ ಗಾಜು ಒಡೆದಿದ್ದಾನೆ. ಇದರಿಂದ ಚಾಲಕನ ಕೈಗೆ ಗಾಯವಾಗಿದೆ. ಸವಾರ ಪರಾರಿಯಾಗಿದ್ದಾನೆ.

ಚಾಲಕ ಅರುಣ್ ನೀಡಿದ ದೂರಿನಂತೆ ಕಂಕನಾಡಿ ಪೊಲೀಸರು ಸವಾರನ ವಿರುದ್ಧ ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…