tamanvi
ಕರಾವಳಿ

ಎಂಆರ್‌ಪಿಎಲ್ ಬಾಯ್ಲರ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಮೊಲಕಿ ನಿವಾಸಿ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಲು ಎಂಆರ್‌ಪಿಎಲ್ ನಿರ್ಧರಿಸಿದೆ.

ಮನೀಶ್ ಕರ್ಕಡ ಅವರು ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಾಯ್ಲರ್ ಸ್ಫೋಟ ಸಂಭವಿಸಿದ ವೇಳೆ ತೀವ್ರವಾಗಿ ಸುಟ್ಟ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದರು.

ಘಟನೆಯ ಬಳಿಕ ಮೃತರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸುವಂತೆ ಸಚಿವ ಯು.ಟಿ. ಖಾದರ್ ಅವರು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಲು ಎಂಆರ್‌ಪಿಎಲ್ ನಿರ್ಧಾರ ಕೈಗೊಂಡಿದೆ.

ಬಾಯ್ಲರ್ ಸ್ಫೋಟದಿಂದ ಕುಟುಂಬದ ಆಧಾರವಾಗಿದ್ದ ಮನೀಶ್ ಅವರನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಪರಿಹಾರ ಮೊತ್ತವನ್ನು ಕುಟುಂಬಕ್ಕೆ ನೆರವಾಗುವ ಕ್ರಮವಾಗಿ ನೀಡಲಾಗುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ರಿಫರ್ಬಿಶ್ಡ್ ಲ್ಯಾಪ್’ಟಾಪ್ ಖರೀದಿಗೆ ಸಿಗಲಿದೆ ಭರ್ಜರಿ ಆಫರ್ಸ್!!

ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಕೋರ್ ಟೆಕ್ನಾಲಜೀಸ್…