Gl
ಕರಾವಳಿ

ಮಂಗಳೂರಿಗೆ ಹೋಗುತ್ತಿದ್ದೀರಾ? ರಸ್ತೆ ಬದಲಾವಣೆ ಗಮನಿಸಿದ್ದೀರಾ? ಸಿಗ್ನಲ್ ಮುಕ್ತ ಮಂಗಳೂರಿನ ರಸ್ತೆಗಳು ಹೇಗಿವೆ ಎಂದು ತಿಳಿಯಲು ಇಲ್ಲಿ ಓದಿ…

ದೀರ್ಘಕಾಲದಿಂದ ಟ್ರಾಫಿಕ್ ಜಾಮ್ ದೈನಂದಿನ ಸಮಸ್ಯೆಯಾಗಿತ್ತು. ಆದರೆ ಜೂನ್ 7ರಿಂದ ಶನಿವಾರ ಟ್ರಾಫಿಕ್ ಸಿಗ್ನಲ್ ಗಳೇ ಇಲ್ಲದೆ ವಾಹನಗಳಿಗೆ ಸುಗಮ ಎಡ ತಿರುಗುಗಳ ನಿರ್ಮಾಣವು ಪೂರ್ಣಗೊಂಡಿದೆ

ಈ ಸುದ್ದಿಯನ್ನು ಶೇರ್ ಮಾಡಿ

ನಂತೂರು ಜಂಕ್ಷನ್ ನಲ್ಲಿ [ಫ್ರೀ ಲೆಫ್ಟ್] ಮುಕ್ತ ಎಡ ತಿರುವು ಇಲ್ಲದೆ ದೀರ್ಘಕಾಲದಿಂದ ಟ್ರಾಫಿಕ್ ಜಾಮ್ ದೈನಂದಿನ ಸಮಸ್ಯೆಯಾಗಿತ್ತು. ಆದರೆ ಜೂನ್ 7ರಿಂದ ಶನಿವಾರ ಟ್ರಾಫಿಕ್ ಸಿಗ್ನಲ್ ಗಳೇ ಇಲ್ಲದೆ ವಾಹನಗಳಿಗೆ ಸುಗಮ ಎಡ ತಿರುಗುಗಳ ನಿರ್ಮಾಣವು ಪೂರ್ಣಗೊಂಡಿದೆ. ಆದುದರಿಂದ ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ. ರೋಡ್ ಕಡೆಗೆ ಸಿಗ್ನಲ್ ಕಿರಿಕಿರಿ ಇಲ್ಲದೆ ಮನ ಬಂದಂತೆ ಎಡಕ್ಕೆ ತಿರುಗಬಹುದು. ಅಂತೆಯೇ ಕುಲಶೇಖರ ಕಡೆಯಿಂದ ಪಂಪ್ ವೆಲ್ ಕಡೆಗೆ ಎಡಕ್ಕೆ ತಿರುಗಬಹುದಾಗಿದೆ. ಪಂಪುವೆಲ್
ಕಡೆಯಿಂದ ಬಂದ ವಾಹನಗಳು ಎಡಕ್ಕೆ ತಿರುಗಿ ಮಲ್ಲಿಕಟ್ಟೆ ಕಡೆಗೆ ಮುಕ್ತವಾಗಿ ಸಂಚರಿಸಬಹುದಾಗಿದೆ.

rachana_rai
Pashupathi
akshaya college
Balakrishna-gowda

ಈ ಮೇಲೆ ಹೆಸರಿಸಿದ ಎಲ್ಲಾ ಮುಕ್ತ ಎಡ ತಿರುವುಗಳಿಗೆ ಬಿಟುಮೆನ್ ಕಾಂಕ್ರೀಟ್ ಮೇಲ್ಫ್ ರಸ್ತೆ ನಿರ್ಮಾಣಗೊಂಡಿದೆ. ಆದುದರಿಂದ ನಂತೂರು ಜಂಕ್ಷನ್ ನಲ್ಲಿ ಇದು ವಾಹನದಟ್ಟನೆಯನ್ನು ಹೆಚ್ಚಾಗಿ ಬೆಳಿಗ್ಗೆ ಹಾಗೂ ಸಾಯಂಕಾಲ ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಮಲ್ಲಿಕಟ್ಟೆಯಿಂದ ಸುರತ್ಕಲ್ ಕಡೆಗೆ ಹೋಗುವ ರಸ್ತೆಗೆ ಮುಕ್ತ ಎಡ ತಿರುವು ಈಗಾಗಲೇ ಇತ್ತು.

pashupathi

ಡ್ರೈನೇಜ್ ಮತ್ತು ಸರ್ವಿಸ್ ರಸ್ತೆ ತಯಾರಿ :- ರಾಷ್ಟ್ರೀಯ

ಹೆದ್ದಾರಿಯಲ್ಲಿ ವಿಭಜಕ ಯೋಜನೆಗೆ ಪೂರ್ವಸಿದ್ಧತಾ ಹಂತವಾಗಿ NH 66 ಮತ್ತು NH 75 ರ ಉದ್ದಕ್ಕೂ ಒಳಚರಂಡಿ ಕಾಮಗಾರಿಗಳನ್ನು ಪ್ರಾರಂಭಿಸಿದೆ. ಅಧಿಕಾರಿಯೊಬ್ಬರ ಪ್ರಕಾರ, ಶೋಲ್ಡರ್ ಡ್ರೈನ್ ನಿರ್ಮಾಣವು ಮಳೆಗಾಲದಲ್ಲಿ ಮುಂದುವರಿಯಬಹುದು ಮತ್ತು ಮಳೆಗಾಲದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಳಚರಂಡಿ ಕಾಮಗಾರಿಗಳು ಅಂತಿಮಗೊಂಡ ನಂತರ, ಮುಖ್ಯ ರಸ್ತೆಗಳಿಂದ ಸಂಚಾರವನ್ನು ಬೇರೆಡೆಗೆ ತಿರುಗಿಸಲು ಸರ್ವೀಸ್ ರಸ್ತೆಗಳನ್ನು ನಿರ್ಮಿಸಲು ಪ್ರಾಧಿಕಾರವು ಯೋಜಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

21 ಹಿಂದೂ, 15 ಮುಸ್ಲಿಂ ಮುಖಂಡರ ಗಡಿಪಾರು ಲಿಸ್ಟ್ ರೆಡಿ!! ಯಾರೆಲ್ಲ ಇದ್ದಾರೆ ಪೊಲೀಸ್ ಇಲಾಖೆ ಸಿದ್ಧಪಡಿಸಿದ ಲಿಸ್ಟ್’ನಲ್ಲಿ..??

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 36 ಮಂದಿಯನ್ನು ಗಡಿಪಾರು ಮಾಡಲು ಲಿಸ್ಟ್…

ದ.ಕ. ಎಸ್ಪಿ, ಕಮೀಷನರ್ ವರ್ಗಾವಣೆ!! ಪವರ್’ಫುಲ್ ಅಧಿಕಾರಿಗಳ ಎಂಟ್ರಿ – ಎಸ್ಪಿಯಾಗಿ ಅರುಣ್ ಕುಮಾರ್, ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ!

ಕೋಮು ದ್ವೇಷದಿಂದ ದಹದಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು…