ಪುತ್ತೂರು: ಮಕ್ಕಳು ಹೆತ್ತವರನ್ನು ಅನುಕರಣೆ ಮಾಡುವುದರ ಮೂಲಕ ಕಲಿಯುತ್ತಾರೆ. ಹಾಗಾಗಿ ಪೋಷಕರಾದವರು ಮಕ್ಕಳಿಗೋಸ್ಕರ ಬದಲಾಗಬೇಕು. ಕೇವಲ ಅಂಕ ಗಳಿಸುವುದು ನಿಜವಾದ ಶಿಕ್ಷಣ ಎಂಬ ತಪ್ಪು ಕಲ್ಪನೆಯಲ್ಲಿ ಅನೇಕ ಪೋಷಕರಿದ್ದಾರೆ. ಆದರೆ ಮಗುವಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಧರ್ಮ ಪ್ರಜ್ಞೆ, ದೇಶಪ್ರೇಮವನ್ನು ಬೆಳೆಸುವುದು ನಿಜವಾದ ಶಿಕ್ಷಣ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಆಯೋಜಿಸಲಾದ ರಕ್ಷಕ ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಮಾತಿನಂತೆ ಧಾರ್ಮಿಕ ವಿಚಾರಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಬೇಕು. ತಪ್ಪಿದಲ್ಲಿ, ನಂತರದ ದಿನಗಳಲ್ಲಿ ನಾವು ಅಸಹಾಯಕರಾಗಬೇಕಾಗುತ್ತದೆ. ಆದ್ದರಿಂದ ಹೆತ್ತವರು ಶಾಲೆಗೆ ಸೇರಿಸುವುದಷ್ಟೇ ಅಲ್ಲದೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಉತ್ಕೃಷ್ಟ ನಾಗರಿಕರನ್ನಾಗಿ ಅವರನ್ನು ಬೆಳೆಸಬೇಕು ಎಂದರು.
ಸಂಸ್ಥೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ, ಪುತ್ತೂರು ತಾಲೂಕು ವಲಯ ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದಲ್ಲ. ಆತ್ಮದಿಂದ ಬೆಳವಣಿಗೆ ಆಗಬೇಕು. ಅಷ್ಟೇ ಅಲ್ಲದೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೀಗೆ ಸರ್ವತೋಮುಖ ಬೆಳವಣಿಗೆಯೇ ನಿಜವಾದ ಶಿಕ್ಷಣ. ನಮ್ಮ ದೇಶದಲ್ಲಿ ಶಿಕ್ಷಣವನ್ನು ಪಡೆಯುವ ನಮ್ಮ ಮಕ್ಕಳು ನಮ್ಮ ದೇಶದ ಪ್ರಗತಿಗಾಗಿ ದುಡಿಯಬೇಕು ಎಂದು ತಿಳಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಅವರು ಶಾಲೆಯಲ್ಲಿ ನೂತನವಾಗಿ ಅಳವಡಿಸಲಾಗುವ ಶಾಲಾ ಆ್ಯಪ್ ಕುರಿತು ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ಅವರು ಶೈಕ್ಷಣಿಕ ವರ್ಷದ ಮೊದಲಾರ್ಧದಲ್ಲಿ ನಡೆಯಲಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಣೆಯನ್ನು ನೀಡಿದರು. ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಪಾಲಕರು ನಿರ್ವಹಿಸಬಹುದಾದ ಕರ್ತವ್ಯಗಳ ಕುರಿತು ಮಾತನಾಡಿದರು.
ಶಿಕ್ಷಕಿಯರಾದ ಸುಷ್ಮಾ ಮಿಥುನ್ ಸ್ವಾಗತಿಸಿ, ಕುಸುಮ ವಂದಿಸಿದರು. ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆ | ಮಕ್ಕಳಲ್ಲಿ ಮಾನವೀಯ ಮೌಲ್ಯದ ಜೊತೆಗೆ ಧರ್ಮಪ್ರಜ್ಞೆ, ದೇಶಪ್ರೇಮ ಬೆಳೆಸಿ: ಸುಬ್ರಮಣ್ಯ ನಟ್ಟೋಜ
What's your reaction?
- 494c
- 494cc
- 4ai technology
- 4ajjavara
- 4alwas
- 4apology
- 4artificial intelegence
- 4avg
- 4belthangady-provocative-speech-case-conviction
- 4bihar minister
- 4bjp
- 3bjp leader
- 3bjp national president
- 3bt ranjan
- 3co-operative
- 3coastal
- 3Court convicts accused in provocative speech case
- 3crime
- 3crime news
- 3cyclothon
- 3darmasthala
- 3death news
- 3dust bin
- 3education
- 3fraud
- 3gl
- 3gods own country
- 3gold
- 2google for education
- 2independence
- 2jewel
- 2jewellers
- 2jnana vikasa
- 2karnataka state
- 2kerala village
- 2kukke - kollur temple
- 2lokayuktha
- 2lokayuktha raid
- 2Mangalore
- 2manipal
- 2minister krishna bairegowda
- 2mla ashok rai
- 2mohan alwa
- 2mudubidre
- 2nidana news
- 1nirvathu mukku
- 1nitin nabin
- 1police
- 1ptr tahasildar
- 1puttur
- 1puttur news
- 1puttur tahasildar
- 1republic
- 1revenue
- 1revenue department
- 1revenue minister
- 1school
- 1senior citizen
- 1silver
- 1society
- 1sowmya
- 0students
- 0tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಕುಮಾರವ್ಯಾಸ ಕಾವ್ಯ ಗಮಕ ವಾಚನ
ಬೆಳಾಲು: ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಸೆ.11ರಂದು ಕುಮಾರವ್ಯಾಸ ಕವಿಯ ಕರ್ಣಾಟ ಭಾರತ…
ಬೆಥನಿ ಶಾಲೆಯ ಬಾಲಕಿಯರಿಗೆ ಕಬಡ್ಡಿಯಲ್ಲಿ ತಾಲೂಕು ಮಟ್ಟಕ್ಕೆ ಮುನ್ನಡೆ
ಪುತ್ತೂರು: ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಂತ ವಿಕ್ಟರ್ ಬಾಲಕಿಯರ…
ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…
ಸೆ.14-16: ವಿವೇಕಾನಂದ ಕಾಲೇಜಿನಲ್ಲಿ 45ನೇ ವರ್ಷದ ಗಣೇಶೋತ್ಸವ ಸಂಭ್ರಮ
ಪುತ್ತೂರು: ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ 45ನೇ ವರ್ಷದ…
ಪುತ್ತೂರಿನಲ್ಲಿ ಅಸರ್ ತರಬೇತಿ ಹಾಗೂ ಬಾಲ್ಯ ವಿವಾಹ ಮುಕ್ತ ಜಿಲ್ಲೆಯ ಸಮಾಲೋಚನಾ ಸಭೆ
ಪುತ್ತೂರು: ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಮಂಗಳೂರು ಪಡಿ ಸಂಸ್ಥೆಯ ಆಶ್ರಯದಲ್ಲಿ…
ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ
ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…
ಬೆಟ್ಟಂಪಾಡಿಯಲ್ಲಿ ಸೆ.19ರಂದು 21ನೇ ಸರಣಿಯ ‘ಗ್ರಾಮ ಸಾಹಿತ್ಯ ಸಂಭ್ರಮ’
ಪುತ್ತೂರು: ಕನ್ನಡ ಸಾಹಿತ್ಯವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಹಾಗೂ ಗ್ರಾಮೀಣ…
ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ
ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ…
ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ
ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ | ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ನೀಡುವ ಗೌರವ: ಆದರ್ಶ ಗೋಖಲೆ
ಪುತ್ತೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶೇಷವಾದ ಸ್ಥಾನವಿದೆ. ಗುರುವಿನ ಮಾರ್ಗದರ್ಶನದ…


















