tamanvi
ಅಪರಾಧ

ಸುಳ್ಯ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ಇಲ್ಲಿನ ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.

maithri

ಕೆಡ್ಡಸದ ಹಿನ್ನೆಲೆಯಲ್ಲಿ ಕೆಲವರು ಗದ್ದೆಯೊಂದರಲ್ಲಿ ಸೇರಿಕೊಂಡು ಕೋಳಿ ಅಂಕವನ್ನು ಆಯೋಜಿಸಿದ್ದರೆಂದು ತಿಳಿದುಬಂದಿದೆ. ಇನ್ನು ಸ್ಪರ್ಧೆ ನಡೆಸಲು ಗದ್ದೆ ಸುತ್ತ ಕಬ್ಬಿಣದ ಬೇಲಿ ಹಾಗೂ ಇತರ ಪರಿಕರ ಅಳವಡಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಳಿ ಅಂಕಕ್ಕೆ ಬಳಸಲಾಗಿದ್ದ ಕಬ್ಬಿಣದ ಬೇಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ ಸ್ಥಳದಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117