tamanvi
ಕರಾವಳಿ

ಮಂಗಳೂರಿನಲ್ಲಿ ರಾಜ್ಯದ ಮೊದಲ ಬೋಟ್ ಆಂಬ್ಯುಲೆನ್ಸ್ | ಸರ್ಕಾರದ ನೆರವಿಗೆ ಕಾಯದೇ, ಮೀನುಗಾರರೇ ರೂಪಿಸಿದ ಯೋಜನೆ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಸಮುದ್ರದಲ್ಲಿನ ತುರ್ತು ಅವಘಡಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಮಂಗಳೂರಿನ ಉಳ್ಳಾಲ ಮೀನುಗಾರರು ರಾಜ್ಯದ ಮೊದಲ ಬೋಟ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.

maithri

ಸರ್ಕಾರದ ನೆರವಿಗಾಗಿ ಕಾಯದೆ, ಮೀನುಗಾರರೇ ಮುಂದಾಗಿ ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ಈ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿದ್ದಾರೆ.

ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಈ ಬೋಟ್‌ನಲ್ಲಿ ಸೈರನ್, ಎಮರ್ಜೆನ್ಸಿ ದೀಪ, ಸ್ಟ್ರೆಚರ್, ಆಮ್ಲಜನಕ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಕಿಟ್, ವೈದ್ಯಕೀಯ ಉಪಕರಣಗಳು ಹಾಗೂ ಲೈಫ್ ಜಾಕೆಟ್‌ಗಳು ಲಭ್ಯವಿವೆ. ನುರಿತ ಚಾಲಕರು ಮತ್ತು ಆರೋಗ್ಯ ಸಿಬ್ಬಂದಿಯ ತಂಡ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ.

ಈ ಮಾನವೀಯ ಪ್ರಯತ್ನವು ಕರಾವಳಿಯ ಮೀನುಗಾರರ ಜೀವ ರಕ್ಷಣೆಗೆ ಭದ್ರತೆ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…

ಪುತ್ತೂರಿಗೆ ತಡವಾಗಿ ಆಗಮಿಸುತ್ತಿರುವ ಸುಬ್ರಹ್ಮಣ್ಯ – ಮಂಗಳೂರು ಪ್ಯಾಸೆಂಜರ್ ರೈಲು: ಕ್ರಮ ಕೈಗೊಳ್ಳಲು ಸಂಸದರಿಗೆ ಆಗ್ರಹ!!

ಪುತ್ತೂರು: ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬೆಳಗ್ಗಿನ ಹೊತ್ತು ಕಬಕ- ಪುತ್ತೂರು…

ಅಶೋಕ್ ರೈಯ ಶಾಸಕ ಸ್ಥಾನ ಪುತ್ತಿಲ ಪರಿವಾರದ ಭಿಕ್ಷೆ: ರಾಜೇಶ್ ಬನ್ನೂರು | ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಸೋಲು ಖಚಿತ!!

ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ…