tamanvi
ಅಪರಾಧ

ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ ಸುಮಂತ್!! ಸಂಬೋಳ್ಯ: ಕೆರೆಯಲ್ಲಿ ಪತ್ತೆಯಾದ ಬಾಲಕನ ಮೃತದೇಹ ಪ್ರಕರಣ: ತನಿಖೆಗಾಗಿ ನಾಲ್ಕು ತಂಡಗಳ ರಚನೆ!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ಒಡಿಲ್ನಾಳ ಗ್ರಾಮದ ಸಂಬೋಳ್ಯದ ಕೆರೆಯಲ್ಲಿ ಪತ್ತೆಯಾದ ಬಾಲಕನ ಮೃತದೇಹ ಪ್ರಕರಣದಲ್ಲಿ ಪ್ರಾಥಮಿಕ ತನಿಖಾ ವರದಿಯನ್ನು ಪೊಲೀಸ್ ಇಲಾಖೆ ಹೊರಗಿಟ್ಟಿದೆ.

ಧನುಪೂಜೆಗೆಂದು ದೇವಸ್ಥಾನಕ್ಕೆ ತೆರಳಿದ್ದ ಸುಮಂತ್ (15 ವ) ಅವರ ಮೃತದೇಹ ಜ. 14ರಂದು ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ವರದಿಯ ಪ್ರಕಾರ, ಹುಡುಗನು ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದನು ಮತ್ತು ತಕ್ಷಣದ ಸಾವಿನ ಕಾರಣ ಮುಳುಗು ಸಾವಾಗಿರುತ್ತದೆ ಎಂದು ತಿಳಿಸಿದೆ.

ತಲೆಯ ಮೇಲಿನ ಗಾಯಗಳು ಮಂದ ಬಲದ ಗಾಯ (Blunt injury)  ಉಂಟಾಗಿವೆ ಮತ್ತು ಯಾವುದೇ ಚೂಪಾದ (Sharp) ಆಯುಧಗಳಿಂದ ಆಗಿರುವ ಗಾಯ ಅಲ್ಲ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.  ಆದರೆ ತಲೆಯ ಮೇಲಿನ ಗಾಯಗಳ ಬಗ್ಗೆ ಸಮರ್ಪಕವಾದ ವಿವರಣೆ ದೊರಕಿಲ್ಲ. ಆದ್ದರಿಂದ ಸಮಗ್ರ ಹಾಗೂ ಸೂಕ್ಷ್ಮ ತನಿಖೆ ನಡೆಸುವ ಉದ್ದೇಶದಿಂದ ಈ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ನಡೆಸಲಾಗುತ್ತಿದೆ.

ಈ ಪ್ರಕರಣದ ಸಮಗ್ರ ತನಿಖೆಗಾಗಿ ಬೆಳ್ತಂಗಡಿ ಡಿಎಸ್‌ಪಿ ಅವರ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 119