tamanvi
ಅಪರಾಧ

ದಾವೂದ್ ಗ್ಯಾಂಗ್‌ನ ರಹಸ್ಯ ಡ್ರಗ್ಸ್ ಜಾಲ ಪತ್ತೆ!!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಚರರು ಮಧ್ಯಪ್ರದೇಶದ ಭೋಪಾಲ್ ಹೊರವಲಯದಲ್ಲಿ ರಹಸ್ಯವಾಗಿ ನಡೆಸುತ್ತಿದ್ದ ಮಾದಕವಸ್ತು ತಯಾರಿಕಾ ಕೇಂದ್ರವೊಂದನ್ನು ಇತ್ತೀಚೆಗೆ ಭೇದಿಸಲಾಗಿದೆ.

maithri

ಕಳೆದ 7 ವರ್ಷಗಳಿಂದ ನಿರ್ಜನವಾಗಿದೆ ಎನ್ನಲಾದ ಮನೆಯೊಂದಕ್ಕೆ ವಿದ್ಯುತ್ ಮೀಟ‌ರ್ ಅನ್ನು ಕೆಲವೇ ಗಂಟೆಗಳಲ್ಲಿ ಅನುಮೋದಿಸಿ, ಅಳವಡಿಸಲಾಗಿತ್ತು. ನಿರ್ಜನ ಮನೆಗೆ ಮಿಂಚಿನ ವೇಗದಲ್ಲಿ ಮೀಟ‌ರ್ ಅಳವಡಿಸಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅನುಮಾನಕ್ಕೆ ಕಾರಣವಾಗಿತ್ತು.

ಹೀಗಾಗಿ ಆ.16ರಂದು ಈ ಮನೆಗೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದರು.ದಾಳಿಯ ವೇಳೆ ಇದು ಕೇವಲ ಮನೆಯಲ್ಲ, ಬದಲಾಗಿ ಡ್ರಗ್ಸ್ ಕಾರ್ಖಾನೆ ಎಂದು ಬಯಲಾಗಿತ್ತು. ಮಿಯಾವ್-ಮಿಯಾವ್‌ ಎಂದು ಕರೆಯಲಾಗುವ 92 ಕೋಟಿ ರೂ. ಮೌಲ್ಯದ 61.20 ಕೇಜಿ ಮೆಫೆಡೋನ್ ಹಾಗೂ 541 ಕೇಜಿ ತೂಕದ ಇನ್ನಿತರೆ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಯಿತು.

ದಾವೂದ್ ಬಂಟ, ಟರ್ಕಿಯಲ್ಲಿ ಅಡಗಿರುವ ಸಲೀಮ್ ಧೋಲಾ ಈ ದಂಧೆಯ ರೂವಾರಿ ಎನ್ನಲಾಗಿದೆ. ಫಾರ್ಮಸಿ ಪದವೀಧರರು ಸೇರಿದಂತೆ ಅನೇಕ ಸ್ಥಳೀಯರು ಈ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ!! ವೃದ್ಧರ ಕುತ್ತಿಗೆಯಿಂದ ಚಿನ್ನದ ಸರ, ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನ ಕಳ್ಳತನ!!

ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ…

1 of 117