tamanvi
ಅಪರಾಧ

ತೆಕ್ಕಾರು: ಪತ್ನಿಯ ಇರಿದು ಕೊಂದ ಪತಿ! ಆರೋಪಿ ಪತಿ ರಫೀಕ್ ಪೊಲೀಸ್ ವಶ!

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಇಲ್ಲಿನ ತೆಕ್ಕಾರು ಬಾಜಾರು ಎಂಬಲ್ಲಿ ಪತ್ನಿಯೊಬ್ಬಳನ್ನು ಗಂಡನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ಜು.17ರ ಗುರುವಾರ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಾಜಾರು ಎಂಬಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ

maithri

ಪತ್ನಿಯನ್ನು ಕೊಲೆ ಮಾಡಿದಾತನನ್ನು ಬಾಜಾರು ನಿವಾಸಿ ರಫೀಕ್ (45) ಎಂದು ಗುರುತಿಸಲಾಗಿದೆ. ಕೊಲೆಯಾದ ಮಹಿಳೆಯನ್ನು ಝೀನತ್ (40) ಎಂದು ಗುರುತಿಸಲಾಗಿದೆ. ಮನೆಯಲ್ಲಿಯೇ ಮಾತಿಗೆ ಮಾತು ಬೆಳದ ಹಿನ್ನಲೆಯಲ್ಲಿ ಗಂಡ ರಫೀಕ್ ತನ್ನ ಪತ್ನಿ ಝೀನತ್ ರವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಎನ್ನಲಾಗುತ್ತಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117