tamanvi
ಅಪರಾಧ

ಪುತ್ತೂರು: ಮಗುವಿಗೆ ಜನ್ಮವಿತ್ತ ಸಂತ್ರಸ್ತೆ ಯುವತಿ! ಆರೋಪಿ ಪತ್ತೆಗೆ ಮುಂದುವರಿದ ಶೋಧ!

D_shiva_bhat
ಯುವತಿಯನ್ನು ವಂಚಿಸಿ ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿ ಪತ್ತೆ ಕಾರ್ಯ ಮುಂದುವರಿಯುತ್ತಿರುವ ಬೆನ್ನಲೇ ಇಂದು ರಾತ್ರಿ ಯುವತಿ ಮಗುವಿಗೆ ಜನ್ಮ ನೀಡಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಯುವತಿಯನ್ನು ವಂಚಿಸಿ ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿ ಪತ್ತೆ ಕಾರ್ಯ ಮುಂದುವರಿಯುತ್ತಿರುವ ಬೆನ್ನಲೇ ಇಂದು ರಾತ್ರಿ ಯುವತಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

maithri

ಸಂತ್ರಸ್ತೆಯೂ ಜೂ 24 ರಂದು ರಾತ್ರಿ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ. ರಾವ್ ತನಗೆ ಮದುವೆಯಾಗುವುದಾಗಿ ನಂಬಿಸಿ ಇದೀಗ ಮದುವೆಯಾಗಲು ನಿರಾಕರಿಸಿರುವುದಾಗಿ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದರು.

ಸಂತ್ರಸ್ತ ಯುವತಿಯ ತಾಯಿ ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಿಗದಿ ಮಾಡಿದ್ದರು. ಆದರೇ ನಿಗದಿತ ಸಮಯಕ್ಕೆ ಮಹಿಳೆ ಬಾರದೇ ಪತ್ರಿಕಾಗೋಷ್ಟಿ ರದ್ದಾಗಿತ್ತು. ಸಂತ್ರಸ್ತೆಗೆ ಆರೋಗ್ಯ ಸಮಸ್ಯೆಯೆಂಬ ಕಾರಣವನ್ನು ಕುಟುಂಬದ ಆಪ್ತ ವಲಯ ನೀಡಿತ್ತು.

ಬೆಳಗ್ಗಿನಿಂದ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ಸೂಚನೆಯಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 115