ರಾಜ್ಯ ವಾರ್ತೆ

ಮುಂಬೈಯಲ್ಲಿ ‘ವಾ ಗಳಿಗೆಡ್ ಪುಟುದನಾ’ ಯಶಸ್ವಿ ಪ್ರದರ್ಶನ

ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಚೊಚ್ಚಲ ಪ್ರದರ್ಶನದಲ್ಲೇ ಜನಮನ‌ಸೂರೆಗೊಂಡ ಗಮ್ಮತ್ ಕಲಾವಿದರ "ವಾ ಗಳಿಗೆಡ್ ಪುಟುದನಾ" ತುಳು ಸಾಂಸಾರಿಕ ಹಾಸ್ಯಮಯ ನಾಟಕ - ಮುಂಬೈ ಮಹಾನಗರದಲ್ಲಿ ಭಾನುವಾರ 27 ಅಕ್ಟೋಬರ್ 2024 ರಂದು ತಮ್ಮ ದ್ವಿತೀಯ ಪ್ರದರ್ಶನದೊಂದಿಗೆ ಅಭೂತಪೂರ್ವ ಯಶಸ್ವಿ…

ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ! ದೆಹಲಿ ಮೂಲದ ಯುವಕನ ಬಂಧನ! ಪ್ರಚಾರಕ್ಕಾಗಿ ಬೆದರಿಕೆ ಸಂದೇಶ!!

ವಿಮಾನಯಾನ ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ದ.ಕ. ಜಿಲ್ಲೆಗೆ 25.11 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ!!  ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ…

ಕೇಂದ್ರ ಸರ್ಕಾರದ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುಗಡೆಯಾದ 25.11 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಇಂದು ಮಂಗಳವಾರ ನೆರವೇರಿಸಲಿದ್ದಾರೆ

ಕೇರಳ ಸಿಎಂ ಇದ್ದ ಕಾರು ಸಹಿತ ಸರಣಿ ಅಪಘಾತ!!

ತಿರುವನಂತಪುರದಲ್ಲಿ ಮಹಿಳೆಯನ್ನು ರಕ್ಷಿಸಲು ಹೋಗಿ ಸಿಎಂ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಹಲವಾರು ವಾಹನಗಳು ಒಂದಕ್ಕೊಂದು ಸರಣಿ ಅಪಘಾತವಾಗಿರುವ ಘಟನೆ ನಡೆದಿದೆ.

ಕೀಟನಾಶಕದಿಂದ ತೊಂದರೆ..! ಗುರುವಾಯೂರು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ತುಳಸಿ ನಿಷೇಧ!!

ಪ್ರಸಿದ್ದ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ ದಳಗಳನ್ನು ಸಮರ್ಪಿಸುವುದನ್ನು ನಿರ್ಬಂಧ ವಿಧಿಸಲಾಗಿದೆ. ಭಕ್ತಾದಿಗಳು ಸಮರ್ಪಿಸುತ್ತಿದ್ದ ತುಳಸಿಯಲ್ಲಿ ಅಧಿಕ ಮಟ್ಟದ ಕೀಟನಾಶಕ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆಯೆಂದು ದೇವಾಲಯದ ಮೂಲಗಳು ತಿಳಿಸಿವೆ.

ಸೂಪರ್ ಸ್ಟಾರ್ ಪಕ್ಷದ ಚೊಚ್ಚಲ ರಾಜ್ಯ ಸಮಾವೇಶ!!  ಅಧಿಕೃತ ರಾಜಕೀಯ ಪ್ರವೇಶಕ್ಕೆ ಸಾಕ್ಷಿಯಾದ ರಾಜ್ಯ –…

ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಭಾನುವಾರ ಅಧಿಕೃತವಾಗಿ ರಾಜಕೀಯ ಅಖಾಡ ಪ್ರವೇಶಿಸಿದರು. ಚೆನ್ನೈನಿಂದ 150 ಕಿ.ಮೀ.ದೂರದಲ್ಲಿರುವ ವಿಕ್ರಂವಾಡಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ಬೃಹತ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ರಂಗಕ್ಕೆ ತನ್ನ…

ಅಗ್ನಿ ದುರಂತ: ಜತೆಯಲ್ಲಿ ಮಲಗಿದ್ದ ನಾಲ್ವರು ಸ್ನೇಹಿತರು ಸುಟ್ಟುಕರಕಲು!

ಬೆಂಕಿ ಅವಘಡ ಸಂಭವಿಸಿ ಒಂದೇ ಕೋಣೆಯಲ್ಲಿ ಮಲಗಿದ್ದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸರಸ್ವತಿ ಎನ್‌ಪ್ಲೇವ್‌ನಲ್ಲಿ ನಡೆದಿರುವುದು ವರದಿಯಾಗಿದೆ.