ರಾಜ್ಯ ವಾರ್ತೆ

ರೈಲ್ವೆ ಟಿಕೆಟ್  ರಿಸರ್ವೇಷನಲ್ಲಿ ಬದಲಾವಣೆ:ಬದಲಾಗಲಿದೆ ಕ್ರೆಡಿಟ್ ಕಾರ್ಡ್ ನಿಯಮ!!

ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೇ ಈಗಾಗಲೇ ಘೋಷಣೆ ಮಾಡಿದ್ದು, ನವೆಂಬರ್ 1ರಿಂದ ಜಾರಿಯಾಗಿದೆ.

ಸ್ಪೇನ್‌ನಲ್ಲಿ ಭೀಕರ ಪ್ರವಾಹ!!

ಭಾರಿ ಮಳೆ ಮತ್ತು ಪ್ರವಾಹದಿಂದ ಪೂರ್ವ ಸ್ಪೇನ್‌ನ ವಲೆನ್ಸಿಯಾ ಪ್ರಾಂತದಲ್ಲಿ ಹಲವು ಕಟ್ಟಡಗಳು, ಸೇತುವೆಗಳು ಮತ್ತು ಕಾರುಗಳು ನೆರೆ ನೀರಲ್ಲಿ ಕೊಚ್ಚಿಹೋಗಿದ್ದು ಮಣ್ಣಿನ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ

ಮಹಿಳೆಯರ ಉಚಿತ ಬಸ್‌ ಪ್ರಯಾಣ (ಶಕ್ತಿ ಯೋಜನೆ) ಬಂದ್!! ಮಹತ್ವದ ಮಾಹಿತಿ ಕೊಟ್ಟ ಸಚಿವ ಪರಮೇಶ್ವರ್‌!!

ಶಕ್ತಿ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ

ನಾಪತ್ತೆಯಾಗಿದ್ದ ಮಹಿಳೆಯ ದೇಹ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ..!!

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೋದ್‌ಪುರದಲ್ಲಿ ಸಂಭವಿಸಿದೆ

ಕಾಲ್ನಡಿಗೆಯಲ್ಲಿ ಅಯೋಧ್ಯೆಯಿಂದ ಶಬರಿಮಲೆಗೆ ಹೊರಟಿದ್ದ ವ್ಯಕ್ತಿಯ ದುರ್ಮರಣ! 25ನೇ ವರ್ಷದ ಶಬರಿಮಲೆ ದರ್ಶನ…

ಕಾಸರಗೋಡಿನಿಂದ ಹೊರಟು ದೇಶ ವ್ಯಾಪಕ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೆಲ್ಲಾ ಕಾಲ್ನಡಿಗೆಯಲ್ಲೇ ಪರ್ಯಟನೆಗೈದು ದೇಶದ ಜನ ಗಮನ ಸೆಳೆದ ಕಾಸರಗೋಡು ಕೂಡ್ಲುವಿನ ಸ್ನೇಹಿತರಿಬ್ಬರ ಪೈಕಿ ಓರ್ವ ಕಾಲ್ನಡಿಗೆಯ ಪಯಣ ಮಧ್ಯೆ ಮೃತಪಟ್ಟ ವರದಿಯಾಗಿದೆ. ಅಯೋಧ್ಯೆಯಿಂದ ಶ್ರೀ ಶಬರಿಮಲೆ ಗುರಿಯಾಗಿಸಿ ನಡೆಯುವ…

ನೆಲಮಂಗಲದಲ್ಲಿ ಕೆಟ್ಟು ನಿಂತ‌ ಬೆಂಗಳೂರು- ಮಂಗಳೂರು‌ ಸರಕಾರಿ‌ ಬಸ್.. ಶಾಸಕ ಅಶೋಕ್ ರೈ ಮೂಲಕ ಬದಲಿ…

ಬೆಂಗಳೂರಿಂದ‌ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನೆಲಮಂಗಳದಲ್ಲಿ ಕೆಟ್ಟು ನಿಂತಿದ್ದು ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಬದಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಸಾರ್ವತ್ರಿಕ ಶ್ಲಾಘನೆಗೆ ಕಾರಣರಾಗಿದ್ದಾರೆ.

ವಿಧಾನ ಪರಿಷತ್ ನೂತನ ಸದಸ್ಯರಾಗಿ ಕಿಶೋರ್ ಕುಮಾ‌ರ್ ಪುತ್ತೂರು ಪ್ರಮಾಣವಚನ ಸ್ವೀಕಾರ

ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರು ಪರಿಷತ್‌ನ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ನಟ ದರ್ಶನ್​ಗೆ ದೀಪಾವಳಿ ಉಡುಗೊರೆಯಾಗಿ ಜಾಮೀನು!

ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್​ಗೆ ದೀಪಾವಳಿ ಶುಭ ತಂದಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ…

ನಿರ್ಮಾಣ ಹಂತದ ಮೊಬೈಲ್ ಟವ‌ರ್ ಕಳ್ಳತನ..!!

ಮಂಗಳೂರಿನ ತಿರುವೈಲ್‌ನ ಮೂಡುಬಿದಿರೆ ರಸ್ತೆ ಬದಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಮುಂಬೈಯ ಜಿ.ಟಿ.ಎಲ್ ಇನ್ಸಾಸ್ಟ್ರಕ್ಟರ್ ಕಂಪನಿ ಲಿಮಿಟೆಡ್ ಬೆಂಗಳೂರು ಶಾಖೆಯ ಮೊಬೈಲ್‌ ಟವರನ್ನು ಕಳ್ಳರು ಕದ್ದೊಯ್ದಿದ್ದಾರೆ.

ಧರ್ಮಸ್ಥಳ ಯಾತ್ರೆ: ನಾಲ್ವರು ಮೃತ್ಯು!!

ಧರ್ಮಸ್ಥಳ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದಾಗ ಲಾರಿಯೊಂದು ಒಮ್ಮಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ಬಣಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.