tamanvi
ಪ್ರಚಲಿತ

ಟಿವಿ ಕ್ಲಿನಿಕ್ ಮಾಲಕ ಸತ್ಯಶಂಕರ್ ಅವರಿಗೆ ಜೆಸಿಐ ವಲಯ 15ರ ‘ಸಾಧನಾ ಶ್ರೀ’ ಪ್ರಶಸ್ತಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ನಾಳೆ (ಆ.23) ಮಡಂತ್ಯಾರಿನಲ್ಲಿ ನಡೆಯುವ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ

ಪುತ್ತೂರು: ಜೆಸಿಐ ವಲಯ 15ರ ‘ಸಾಧನಾ ಶ್ರೀ’ ಪ್ರಶಸ್ತಿಗೆ ಟಿವಿ ಕ್ಲಿನಿಕ್ ಮಾಲಕ ಹಾಗೂ ಪುತ್ತೂರು ಜೆಸಿಐ ಸದಸ್ಯ ಸತ್ಯಶಂಕರ್ ಆಯ್ಕೆಯಾಗಿದ್ದಾರೆ.

ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಆ.23ರಂದು ನಡೆಯಲಿರುವ ಮೃದಿನಿ ವ್ಯವಹಾರ ಸಮ್ಮೇಳನದಲ್ಲಿ ಸತ್ಯಶಂಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಐಟಿಸಿ ಡಿಪ್ಲೋಮಾ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ 2000ರಲ್ಲಿ ಸತ್ಯಶಂಕರ್ ಅವರು ಟೆಲಿವಿಷನ್ ಕ್ಷೇತ್ರಕ್ಕೆ ಪ್ರವೇಶಿಸಿದರು. ತಾಂತ್ರಿಕ ನೈಪುಣ್ಯ, ಕಠಿಣ ಪರಿಶ್ರಮ ಹಾಗೂ ಉದ್ಯಮಶೀಲತಾ ದೃಷ್ಟಿಕೋನದೊಂದಿಗೆ 2010ರಲ್ಲಿ ‘ಟಿವಿ ಕ್ಲಿನಿಕ್’ ಆರಂಭಿಸಿದರು.

2008ರಲ್ಲಿ ಕೇಶವ ಪ್ರಸಾದ್ ಮುಳಿಯ ಹಾಗೂ ತಮ್ಮ ಸಹೋದರ ಪಶುಪತಿ ಶರ್ಮಾ ಅವರ ಪ್ರೋತ್ಸಾಹದಿಂದ ಜೆಸಿಐ ಚಳವಳಿಗೆ ಸೇರ್ಪಡೆಗೊಂಡರು. ಪ್ರಸ್ತುತ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಸತ್ಯಶಂಕರ್ ಅವರು ಜೆಸಿಐ ಫೌಂಡೇಷನ್‌ಗೆ ದೇಣಿಗೆ ನೀಡಿ ಜೆ.ಎಫ್.ಡಿ. ಪದವಿ ಗಳಿಸಿದ್ದಾರೆ.

ಕುಳಮರ್ವ ವೆಂಕಟರಮಣ ಭಟ್ ಹಾಗೂ ರತ್ನಾವತಿ ದಂಪತಿಯ ಪುತ್ರರಾಗಿರುವ ಸತ್ಯಶಂಕರ್ ಅವರ ಸಾಧನೆಗೆ ಪತ್ನಿ ಸ್ಮಿತಾ ಶಂಕರ್ ಅವರ ಸಹಕಾರವೂ ಪ್ರಮುಖವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts