Gl
ಪ್ರಚಲಿತಸ್ಥಳೀಯ

ಹಿಂಸಾತ್ಮಕ ರೀತಿ ಕಾರಿನಲ್ಲಿ ದನ ಸಾಗಾಟ ಪತ್ತೆ! ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಕ್ರಮ ವ್ಯವಹಾರಗಳ ತಾಣ ಎಂದೇ ಖ್ಯಾತವಾಗಿರುವ ಕಬಕದ ಕಲ್ಲಂದಡ್ಕ ರಸ್ತೆ ಮತ್ತೊಂದು ಘಟನೆಗೆ ಸಾಕ್ಷಿಯಾಗಿದೆ.

rachana_rai
Pashupathi
akshaya college

ಕಬಕ ಅಡ್ಯಲಾಯ ದೈವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಶಿಫ್ಟ್ ಕಾರಿನಲ್ಲಿ ದನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ.

pashupathi

ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ ಎಂದು ಹೇಳಲಾಗಿದೆ.

ಕಾರಿನಲ್ಲಿ ಎರಡು ದನ ಹಾಗೂ ಎರಡು ಕರು ಪತ್ತೆಯಾಗಿದೆ. ಅದರ ಕೈ ಕಾಲುಗಳನ್ನು ಹಿಂಸಾತ್ಮಕ ರಿತಿಯಲ್ಲಿ ಕಟ್ಟಲಾಗಿತ್ತು. ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ಕಣ್ಣಿಗೆ ಮಣ್ಣೆರೆಚಿ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದು ಇದರಿಂದ ಚಾಲಕ ತನ್ನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.

ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು 4 ಗೋವುಗಳನ್ನು ಮತ್ತು ಜಖಂಗೊಂಡ ವಾಹನವನ್ನು ಪುತ್ತೂರು ನಗರ ಠಾಣೆಗೆ ತರಲಾಯಿತು. ರಕ್ಷಿಸಿದ ಗೋವುಗಳಿಗೆ ನೀರು ಮತ್ತು ಮೇವಿನ ವ್ಯವಸ್ತೆಯನ್ನು ಬಜರಂಗದಳದ ಕಾರ್ಯಕರ್ತರ ವ್ಯವಸ್ಥೆ ಮಾಡಿರುತ್ತಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

1 of 114