ಟ್ರೆಂಡಿಂಗ್ ನ್ಯೂಸ್ಸ್ಥಳೀಯ

ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಇನ್ನು ಕೆಲ ದಿನಗಳಷ್ಟೇ ಬಾಕಿ!! ಇ-ಕೆವೈಸಿ ಮಾಡುವುದು ಹೇಗೆ? ಎಲ್ಲಿ? ಇಲ್ಲಿದೆ ವಿವರ

GL
ಪುತ್ತೂರು: ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ ಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಿಕೊಳ್ಳಲು ಆ.31 ಅಂತಿಮ ದಿನವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ಒಂದು ಬಾರಿ ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ ಕೆವೈಸಿ (ಆಧಾರ್ ಆಧಾರಿತ ಬೆರಳಚ್ಚಿನ ದೃಢೀಕರಣ) ಮಾಡಿಸಿಕೊಳ್ಳಲು ಆ.31 ಅಂತಿಮ ದಿನವಾಗಿದೆ.

chennai-shopping
maithri

ಇದರಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಚೀಟಿದಾರರು ಆ.31ರ ಒಳಗಾಗಿ ಇ-ಕೆವೈಸಿ ಮಾಡಿಕೊಳ್ಳುವುದನ್ನು ಸರಕಾರ ಕಡ್ಡಾಯಗೊಳಿಸಿದೆ.

ಪುತ್ತೂರು ತಾಲೂಕಿನಲ್ಲಿ 2,413 ಅಂತ್ಯೋದಯ, 24,984 ಬಿಪಿಎಲ್ ಹಾಗೂ 21,003 ಎಪಿಎಲ್ ಪಡಿತರ ಚೀಟಿಯಿದೆ. ಇದರಲ್ಲಿ ಒಟ್ಟು 1,95,642 ಸದಸ್ಯರನ್ನು ಹೊಂದಿದೆ. ಈ ಪೈಕಿ 2045 ಅಂತ್ಯೋದಯ, 23,086 ಬಿಪಿಎಲ್ ಮತ್ತು 11,900 ಎಪಿಎಲ್ ಪಡಿತರ ಚೀಟಿಗಳ ಒಟ್ಟು 1,58,853 ಸದಸ್ಯರು ಈಗಾಗಲೇ ಇ- ಕೆವೈಸಿ ಮಾಡಿಸಿಕೊಂಡಿದ್ದಾರೆ.

368 ಅಂತ್ಯೋದಯ, 1898 ಬಿಪಿಎಲ್ ಹಾಗೂ 9103 ಎಪಿಎಲ್ ಪಡಿತರ ಚೀಟಿಗಳ ಒಟ್ಟು 36,779 ಮಂದಿ ಸದಸ್ಯರು ಇನ್ನೂ ಇ-ಕೆವೈಸಿ ಮಾಡಿಸಿಕೊಳ್ಳಲು ಬಾಕಿಯಿದೆ. ಕೆಲವೊಂದು ಚೀಟಿಗಳಲ್ಲಿ ಒಂದಿಬ್ಬರು ಸದಸ್ಯರು ಇ- ಕೆವೈಸಿ ಮಾಡಿಸಿಕೊಳ್ಳಲು ಬಾಕಿಯಿದೆ.

ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇ-ಕೆವೈಸಿ ಮಾಡಿಕೊಳ್ಳಬೇಕಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶವಿದ್ದು ವಲಸೆ ಬಂದವರು, ಹೋದವರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿಯೂ ತಮ್ಮ ಆಧಾರ್ ಆಧಾರಿತ ಬೆರಳಚ್ಚು ನೀಡಿ ದೃಡೀಕರಣ ಮಾಡಿಸಿಕೊಳ್ಳಬಹುದು ಎಂದು ತಾಲೂಕು ಕಚೇರಿಯ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಏ. 23: ವಿಟ್ಲ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಥೈರಾಯ್ಡ್ (TSH), ಮಧುಮೇಹ ಉಚಿತ ತಪಾಸಣಾ ಶಿಬಿರ

ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ ವಿಟ್ಲ ಶಾಖೆಯಲ್ಲಿ ಏಪ್ರಿಲ್ 23ರಂದು…

ರೋಟರಿ ಯುವದಿಂದ ರಾಮಕೃಷ್ಣ ಆಶ್ರಮದಲ್ಲಿ ಚಿತ್ರಕಲಾ ಶಿಬಿರ | ಯುವ ಕಲಾವಿದ ಯುಧಿಷ್ಠಿರ್ ಗೌಡ ಅವರಿಂದ ಕಲಾ ತರಬೇತಿ

ಪುತ್ತೂರು: ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ…

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌’ನಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಕೊಡುಗೆ: ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ

ಪುತ್ತೂರು: ಆಭರಣ ಕ್ಷೇತ್ರದಲ್ಲಿ ದಶಕಗಳ ನಂಬಿಕೆ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ…

1 of 134