tamanvi
ದೇಶವಿಶೇಷಸ್ಥಳೀಯ

Digital detox: ಆಶ್ಚರ್ಯವಾದರೂ ಇದು ಸತ್ಯ!! ಪ್ರತಿದಿನ 1.5 ಗಂಟೆ ಮೊಬೈಲ್ ಸೈಲೆಂಟ್ ಮಾಡುವ ಊರಿದು!

D_shiva_bhat
ಮೊಬೈಲ್ ಬಿಟ್ಟು ಅರೆಕ್ಷಣ ಇರಲು ಸಾಧ್ಯವೇ? ಇಲ್ಲಪ್ಪ. ರಾತ್ರಿ ಮಲಗಿದರೂ ಎಚ್ಚರವಾದಾಗ ಮೊಬೈಲ್ ನೋಡಲೇಬೇಕು. ಹಾಗಿರುವಾಗ 1.5 ಗಂಟೆ ಮೊಬೈಲ್ ಸೈಲೆಂಟ್ ಆಗೋದಾ? ಅಲ್ಲ ಮಾಡೋದು.

ಈ ಸುದ್ದಿಯನ್ನು ಶೇರ್ ಮಾಡಿ

ಮೊಬೈಲ್ ಬಿಟ್ಟು ಅರೆಕ್ಷಣ ಇರಲು ಸಾಧ್ಯವೇ? ಇಲ್ಲಪ್ಪ. ರಾತ್ರಿ ಮಲಗಿದರೂ, ಎಚ್ಚರವಾದಾಗ ಮೊಬೈಲ್ ನೋಡಲೇಬೇಕು. ಹಾಗಿರುವಾಗ 1.5 ಗಂಟೆ ಮೊಬೈಲ್ ಸೈಲೆಂಟ್ (Digital detox) ಆಗೋದಾ? ಅಲ್ಲ ಮಾಡೋದು. ಅದು ಹೇಗೆ ಸಾಧ್ಯ?

maithri

ಮಹಾರಾಷ್ಟ್ರದ ಸಾಂಗ್ಲಿಯ (Sangli in maharashtra) ಒಂದು ಗ್ರಾಮ. ಈ ಊರಿನಲ್ಲಿ ಪ್ರತಿ ದಿನ ಸಂಜೆ 7.30 ಕ್ಕೆ ಪಕ್ಕದ ದೇವಸ್ಥಾನದಲ್ಲಿ ಸೈರನ್ ಮೊಳಗುತ್ತದೆ. ಆಗ ಎಲ್ಲರೂ ಮೊಬೈಲ್ ದೂರ ಇಡುತ್ತಾರೆ. ಮೊಬೈಲ್ ಮಾತ್ರವಲ್ಲ, ಟಿವಿ ಸೇರಿದಂತೆ ಎಲ್ಲಾ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳಿಗೆ ಒಂದೂವರೆ ತಾಸು ವಿರಾಮ.‌ಬಳಿಕ ಅದು ಜೀವಂತವಾಗುವುದು ರಾತ್ರಿ 8.30ರ ಬಳಿಕ.

ಮಕ್ಕಳು, ಯುವಕರು, ಹಿರಿಯರು ಪುಸ್ತಕ ಓದುವುದು, ಹೊಸ ವಿಷಯಗಳ ಕುರಿತು ಮಾತನಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ತಮಗಾಗಿ ಸಮಯ ಮೀಸಲಿಡುತ್ತಾರೆ.

ಕೊರೋನಾದ ಬಳಿಕ ಮಕ್ಕಳು ಹೆಚ್ಚಾಗಿ ಮೊಬೈಲ್ ನ ಒಳಗೆ ಇರುವುದನ್ನು ತಪ್ಪಿಸಲು ಈ ನೂತನ ಯೋಚನೆ. ಊರವರ ಸಹಕಾರದಿಂದ ಚೆನ್ನಾಗಿ ಅನುಷ್ಠಾನವಾಗುತ್ತಿದೆ ಎನ್ನುತ್ತಾರೆ ಗ್ರಾಮ ಸರ್’ಪಂಚ್ ವಿಜಯ್ ಮೊಯ್ತೆ.

ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಲು ಹಾಗೂ ವಾಸ್ತವಿಕತೆಯಿಂದ ದೂರ ಆಗದಂತೆ ತಡೆಯುವುದೇ ಡಿಜಿಟಲ್ ಡಿಟಾಕ್ಸ್ (ಡಿಜಿಟಲ್ ಮುಕ್ತ) ಉದ್ದೇಶ ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ | ಪುತ್ತೂರು ಗೃಹಲಕ್ಷ್ಮೀ ಸಂಭ್ರಮಾಚರಣೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ

ಪುತ್ತೂರು: ಗೃಹ ಲಕ್ಷ್ಮೀ ಸೇರಿದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಮಂದಿ ಬದುಕು…

ದೇಶದ ಮೊದಲ ಖಾಸಗಿ ಕಕ್ಷಾ ರಾಕೆಟ್ ‘ವಿಕ್ರಮ್-1’ ಯಶಸ್ವಿ ಉಡಾವಣೆ! ಬಾಹ್ಯಾಕಾಶಕ್ಕೆ ರವಾನೆಯಾದ ಪ್ರಧಾನಿ ಮೋದಿಯ ಪೋಸ್ಟ್ ಕಾರ್ಡ್!

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದ್ದು, ದೇಶದ ಮೊದಲ…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

1 of 154