Gl
ದೇಶಸ್ಥಳೀಯ

ಕಣ್ಣೀರು ಹಾಕಿದ ಮಿಸ್ಟರ್ ಪರ್ಫೆಕ್ಷನಿಸ್ಟ್, ನಟ ಆಮಿರ್ ಖಾನ್! ಬಾಲಿವುಡ್ ತೊರೆಯುತ್ತಾರಾ ಆಮಿರ್ ಖಾನ್?

ನಟಿ ರಿಯಾ ಚಕ್ರವರ್ತಿ ತಮ್ಮ ಪಾಡ್‌ಕಾಸ್ಟ್ ‘ಅಧ್ಯಾಯ 2ರಲ್ಲಿ ಆಮಿರ್ ಖಾನ್ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ನಟಿ ರಿಯಾ ಚಕ್ರವರ್ತಿ ತಮ್ಮ ಪಾಡ್‌ಕಾಸ್ಟ್ ‘ಅಧ್ಯಾಯ 2ರಲ್ಲಿ ಆಮಿರ್ ಖಾನ್ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Pashupathi

ಈ ಸಂದರ್ಶನದಲ್ಲಿ ಆಮಿರ್ ಖಾನ್ ಅವರು ಬಾಲಿವುಡ್ ತೊರೆಯುವುದಾಗಿ ಹೇಳಿದ್ದಾರೆ. ರಿಯಾ ಚಕ್ರವರ್ತಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಪಾಡ್‌ಕಾಸ್ಟ್‌ನ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ.

akshaya college

ಆಮಿರ್ ಖಾನ್ ಅವರನ್ನು ರಿಯಾ ಚಕ್ರವರ್ತಿ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಆಮಿರ್ ಖಾನ್ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟ್ರೇಲರ್ ಅನ್ನು ಹಂಚಿಕೊಂಡ ನಟಿ ರಿಯಾ ಚಕ್ರವರ್ತಿ ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ‘ನನ್ನ ಪಾಡ್‌ಸ್ಟಾರ್‌ಗೆ ನಿಜವಾದ ಸ್ಟಾರ್ ಮತ್ತು ನಿಜವಾದ ಸ್ನೇಹಿತ ಆಮಿರ್ ಖಾನ್ ಅವರನ್ನು ಸ್ವಾಗತಿಸಲು ರೋಮಾಂಚನವಾಗಿದೆ. ಸ್ಟಾರ್‌ಡಮ್, ದುಃಖ ಮತ್ತು ಅದರೊಂದಿಗೆ ಬರುವ ಎಲ್ಲದರ ಅನುಭವವನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಅಧ್ಯಾಯ 2 ಶುಕ್ರವಾರ ಆಗಸ್ಟ್ 23 ರಂದು ಬಿಡುಗಡೆಯಾಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ನನಗೆ ಸಿನಿಮಾಗಳಿಂದ ದೂರ ಹೋಗಬೇಕು’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಇದಕ್ಕೆ ರಿಯಾ ಚಕ್ರವರ್ತಿ ‘ಸುಳ್ಳು’ ಎಂದು ಹೇಳಿದ್ದಾರೆ. ಇಲ್ಲ ನಿಜ ಎಂದು ಆಮಿರ್ ಖಾನ್ ಹೇಳಿದ್ದಾರೆ. ‘ಲೈ ಡಿಟೆಕ್ಟರ್ ಟೆಸ್ಟ್ ಮಾಡಬೇಕು’ ಎಂದು ರಿಯಾ ಅವರು ಹೇಳಿದ್ದಾರೆ. ಆ ಬಳಿಕ ಅವರು ಒಂದು ವಿಚಾರಕ್ಕೆ ಕಣ್ಣೀರು ಹಾಕಿದ್ದಾರೆ. ಆಮಿರ್ ಖಾನ್ ಅವರ ಈ ಹೇಳಿಕೆ ಸಖತ್ ಚರ್ಚೆ ಹುಟ್ಟುಹಾಕಿದೆ.

ಆಮಿರ್ ಖಾನ್ ಅವರು ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ನಟನೆಯ ‘ಥಗ್ಸ್ ಆಫ್ ಹಿಂದೂಸ್ತಾನ್’ ಹಾಗೂ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾಗಳು ರಿಲೀಸ್ ಆಗಿವೆ. ಈ ಎರಡೂ ಸಿನಿಮಾಗಳು ಹೇಳಿಕೊಳ್ಳುವಂತೆ ಯಶಸ್ಸು ಕಂಡಿಲ್ಲ. ಇದರಿಂದ ಆಮಿರ್ ಖಾನ್ ಅವರು ಬೇಸರಕ್ಕೆ ಒಳಗಾದರೇ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಅವರು ‘ಸಿತಾರೇ ಜಮೀನ್ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಮಿರ್ ಖಾನ್ ಅವರು ದಕ್ಷಿಣದ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

 ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ| ರೂಪಾಯಿಗೆ ಬಲ ನೀಡಿದ ಕ್ರಮವನ್ನು‌ ಬಹಿರಂಗಪಡಿಸಿದ ವಿನಿಮಿಯ ದತ್ತಾಂಶ!

ಅಮೆರಿಕದ ಡಾಲರ್ ಎದುರು ಸೋಮವಾರ ಭಾರತೀಯ ರೂಪಾಯಿ ಬಲಗೊಂಡಿದ್ದು, ಜಾಗತಿಕವಾಗಿ ಅಮೆರಿಕದ ಕರೆನ್ಸಿ…

ಮುಕ್ವೆಯನ್ನು ಮುಳುಗಿಸಿದ ಮಳೆ ನೀರು | ಮನೆ, ಅಂಗಡಿಗಳನ್ನು ಮುಳುಗಿಸಿತು ಉಕ್ಕಿ ಹರಿದ ಚರಂಡಿ ನೀರು; ಹೆದ್ದಾರಿ ಬಂದ್!

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ ನೀರು ಉಕ್ಕಿ ಹರಿದು ಮುಕ್ವೆ…

1 of 105