tamanvi
ಟ್ರೆಂಡಿಂಗ್ ನ್ಯೂಸ್ಸ್ಥಳೀಯ

‘ಗೋಪಣ್ಣ ಸ್ಮೃತಿ’ ಗೌರವಕ್ಕೆ ಯಕ್ಷ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಆಯ್ಕೆ | ಜುಲೈ 3ರಂದು ಅಗ್ರಹಾರದಲ್ಲಿ ಗೌರವ ಪ್ರದಾನ

D_shiva_bhat
ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ‍್ಯಕ್ರಮ ಜು. 3ರಂದು ಮಧ್ಯಾಹ್ನ 2ಕ್ಕೆ ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ‍್ಯಕ್ರಮ ಜು. 3ರಂದು ಮಧ್ಯಾಹ್ನ 2ಕ್ಕೆ ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ನಡೆಯಲಿದೆ.

maithri

ಕಾರ‍್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ ‘ಗೋಪಣ್ಣ ಸ್ಮೃತಿ ಗೌರವ’ವನ್ನು ಪ್ರದಾನಿಸಲಾಗುವುದು. ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.

ಲಕ್ಷ್ಮೀಶ ಅಮ್ಮಣ್ಣಾಯ

ಹಿರಿಯ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಅವರು ಉಪ್ಪಿನಗಂಡಿ ಸನಿಹದ ಇಳಂತಿಲದವರು. ಇವರು ಶ್ರೀ ಧರ್ಮಸ್ಥಳ, ಮಂಗಳಾದೇವಿ, ಬಪ್ಪನಾಡು, ಪುತ್ತೂರು, ಅರುವ, ಕರ್ನಾಟಕ, ಕುಂಬಳೆ, ಕದ್ರಿ ಮೇಳಗಳಲ್ಲಿ ಇಪ್ಪತ್ತೆರಡು ವರುಷದ ಮೇಳ ತಿರುಗಾಟ ನಡೆಸಿದ್ದಾರೆ. ಬಳಿಕ ಹವ್ಯಾಸಿ ರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಹಿಂದಿನ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಅರ್ಥದಾರಿ ಪಾವಲಕೋಡಿ ಗಣಪತಿ ಭಟ್, ಯಕ್ಷಗುರು ಮೋಹನ ಬೈಪಾಡಿತ್ತಾಯರು, ಮದ್ಲೆಗಾರ ಪದ್ಯಾಣ ಜಯರಾಮ ಭಟ್, ಅಧ್ಯಾಪಿಕೆ ಬಿ. ಸುಲೋಚನಾ ಹಾಗೂ ಭಾಗವತ ಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ಪ್ರದಾನ ಮಾಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ತಂಬಾಕು-ನಿಕೋಟಿನ್ ಉತ್ಪನ್ನಗಳ ನಿಷೇಧ: ಅಡಿಕೆ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಕ್ಯಾಂಪ್ಕೊ ಆಗ್ರಹ

ಮಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಹಾಗೂ…

ಜೆಸಿಐ ಪುತ್ತೂರು ನಿಯೋ ಪ್ರೈಮ್ ಅಸ್ತಿತ್ವಕ್ಕೆ | ನಾಳೆ (ಆ. 14) ಸಂಜೆ ಉದ್ಘಾಟನೆ, ಪದಸ್ವೀಕಾರ ಸಮಾರಂಭ

ಪುತ್ತೂರು: ಜೆಸಿಐ ಉಡುಪಿ ಸಿಟಿ ಪ್ರಾಯೋಜಕತ್ವದಲ್ಲಿ ಜೆಸಿಐ ಪುತ್ತೂರು ನಿಯೋ ಪ್ರೈಮ್ ಉದ್ಘಾಟನೆ…

1 of 144