ಪುತ್ತೂರು: ರಿಕ್ಷಾವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಹೋಗುತ್ತಿದ್ದ ಆ್ಯಕ್ಟೀವಾಗೆ ಡಿಕ್ಕಿ ಹೊಡೆದ ಘಟನೆ ಪಡೀಲ್ ಬಳಿ ಶುಕ್ರವಾರ ಸಂಜೆ ನಡೆದಿದೆ.
ಆ್ಯಕ್ಟೀವಾ (KA 19 HN 1431) ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ (KA21 A 6438) ನಜ್ಜುಗುಜ್ಜಾಗಿದೆ.
ಪಡೀಲಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾ ರಸ್ತೆಯ ಹಠಾತ್ತನೆ ಎಡ ಬದಿಗೆ ಬಂದು, ರಸ್ತೆ ಬದಿಯ ಮಣ್ಣಿನ ರಾಶಿ ಮೇಲಿನಿಂದ ಚಲಿಸಿದೆ. ಪರಿಣಾಮ ರಿಕ್ಷಾ ಚಾಲಕ ನಿಯಂತ್ರಣ ಕಳೆದುಕೊಂಡು, ಅದೇ ರಸ್ತೆಯಲ್ಲಿ ಎದುರಿನಿಂದ ಸಾಗುತ್ತಿದ್ದ ಆ್ಯಕ್ಟೀವಾಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.