ಬೆಂಗಳೂರು: ಕಲಿಯುಗ- ಸತ್ಯಯುಗದ ಸಂಧಿಕಾಲ ಆರಂಭವಾಗಿದ್ದು, ರಾಜಕಾರಣಿಗಳು ಅವರು ಮಾಡಿದ ಕರ್ಮಕ್ಕೆ ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದು ಓಡಿಶಾದ ಖ್ಯಾತ ಕಾಲಜ್ಞಾನಿ, ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯವಾಗಿರುವ ಭವಿಷ್ಯ ಮಾಲಿಕಾದ ಅದ್ಭುತ ಜ್ಞಾನವನ್ನು ಸಿದ್ದಿಕೊಂಡಿರುವ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ತಿಳಿಸಿದ್ದಾರೆ.ಬೆಂಗಳೂರು ಬಸವನಗುಡಿಯ ಶಂಕರಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆ ಎಲ್ಲಾ ರಾಜಕಾರಣಿಗಳ ಬದುಕಿನಲ್ಲಿ ಕಂಡು ಬರಲಿದೆ. ಎಲ್ಲ ರಾಜಕಾರಣಿಗಳು ತಮ್ಮ ಕರ್ಮಕ್ಕೆ ಫಲ ಪಡೆಯುವ ದಿನ ಬಂದಿದೆ. ಅದು ಒಂದಿಬ್ಬರು ರಾಜಕಾರಣಿಗಳಲ್ಲ,” ಎಂದು ಅವರು ತಿಳಿಸಿದರು.ಮಾರ್ಚ್ 29 2025ರಿಂದ 2034ರ ವರೆಗೆ ವಿಶ್ವ ಸಂಕಷ್ಟದ ದಿನ ಎದುರಿಸಲಿದೆ. ಭಾರತದ ಮೇಲೆ 13 ರಾಷ್ಟ್ರಗಳು ಧಾಳಿ ಮಾಡಲಿವೆ. ಇದರಲ್ಲಿ ಕೆಲವು ಮಿತ್ರ ದೇಶಗಳು ಕೂಡಾ ಸೇರಿವೆ. ಈ ಯುದ್ಧದಲ್ಲಿ ಉತ್ತರ ಭಾರತ ಅಪಾರ ಕಷ್ಟ ಎದುರಿಸಲಿದೆ ಎಂದು ತಿಳಿಸಿದ ಅವರು ಪುರಿ ಜಗನ್ನಾಥ ದೇಗುಲ ಸಮುದ್ರದಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ವಿಶ್ವದಲ್ಲಿ ಈ ಅವಧಿಯಲ್ಲಿ ಹೊಸ ಸಾಂಕ್ರಾಮಿಕ ಮಹಾಮಾರಿ, ಯುದ್ಧ ನಡೆಯಲಿದೆ. 2024ರ ಬಳಿಕ ಸತ್ಯಯುಗ ಆರಂಭ ಬಳಿಕ ಎಲ್ಲವು ಬದಲಾಗಲಿದೆ ಎಂದು ಅವರು ತಿಳಿಸಿದರು.ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ನಮ್ಮ ಬೆಂಗಳೂರಿನಲ್ಲಿ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲು ಆಗಮಿಸಿದ್ದಾರೆ. ಇದೆ ಮೊದಲ ಬಾರಿಗೆ ಅವರು ನಮ್ಮ ಬೆಂಗಳೂರಿನಲ್ಲಿ ಆಸ್ತಿಕ ಮಹಾಶಯರನ್ನು ಹರಸಲಿದ್ದಾರೆ.ಜೂನ್ 24ರಿಂದ ಜೂನ್ 30ರವರೆಗೆ ಪ್ರತಿದಿನ ಸಂಜೆ 4ರಿಂದ 7ರವರೆಗೆ, ನಗರದ ಬಸವನಗುಡಿಯ ಶಂಕರಪುರಂನ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಅವರು ಈ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಈ ಗ್ರಂಥದ ಪ್ರಕಾರ ಈಗಿರುವ 795 ಕೋಟಿ ಜನರ ಪೈಕಿ ಕೇವಲ 64 ಕೋಟಿ ಜನರು ಮಾತ್ರ ಕಲಿಯುಗದಿಂದ ಸತ್ಯಯುಗಕ್ಕೆ ತೆರಳುತ್ತಾರೆ. ಮುಂದಿನ 8 ವರ್ಷಗಳಲ್ಲಿ ಜಗತ್ತು ಮೂರನೇ ಜಾಗತಿಕ ಮಹಾ ಯು ದ್ಧ, ಆಹಾ ರ ಧಾನ್ಯಗಳ ಕೊರತೆ, ಬಿರುಗಾಳಿಗಳು ಮತ್ತು ಸುಂಟರ ಗಾಳಿಗಳು, ಪ್ರವಾಹಗಳು ಮತ್ತು ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಬೆಂಕಿಯಿಂದ ನಾಶ, ಭೂಕಂಪಗಳು, ಬರ ಮತ್ತು ಹಸಿವು, ಸಾಂಕ್ರಾಮಿಕ ರೋಗಗಳಿಂದ ಈ ಜಗತ್ತು ನಡುಗಲಿದೆ ಎಂದು ತಿಳಿಸಿದ್ದರು. ಈ ಪೈಕಿ ಈಗಾಗಲೇ ಕೆಲವು ಸತ್ಯವಾಗುತ್ತಿದ್ದು, ಪಂ. ಶ್ರೀ ಕಾಶಿನಾಥ್ ಮಿಶ್ರ ಅವರ ಭವಿಷ್ಯ ದರ್ಪಣ ಎಲ್ಲೆಡೆ ಪ್ರಖ್ಯಾತಿ ಹೊಂದುತ್ತಿದೆ.ಶ್ರೀ ಪುರಿಯ ಶ್ರೀ ಜಗನ್ನಾಥನ ಪರಮ ಭಕ್ತರಾದ ಪಂ. ಶ್ರೀ ಕಾಶಿನಾಥ್ ಮಿಶ್ರ ತ್ರಿಸಂಧ್ಯಾಧಾರ ಶ್ಲೋಕದ ಮೂಲಕ ಜಗತ್ತನ್ನು ರಕ್ಷಿಸಲು ತಮ್ಮ ಭಕ್ತರೊಂದಿಗೆ ಶ್ರಮಿಸುತ್ತಿದ್ದಾರೆ.ಈ ಭವಿಷ್ಯ ಮಾಲಿಕಾ ಗ್ರಂಥಗಳನ್ನು 600 ವರ್ಷಗಳ ಹಿಂದೆ ಪಂಚ ಸಖರು ಅಂದರೆ ದ್ವಾಪರ ಯುಗದ ಭಗವಾನ್ ಶ್ರೀ ಕೃಷ್ಣನ ಪರಮ ಮಿತ್ರರು ಕಲಿಯಗದಲ್ಲಿ ಪುನರ್ಜನ್ಮ ಪಡೆದು ಬರೆದು, ಮನುಕುಲದ ಭವಿಷ್ಯ ಬರೆದಿದ್ದಾರೆ. ಈ ಕೃಷ್ಣನ ಸ್ನೇಹಿತರೆಂದರೆ ಅಚ್ಯುತಾನಂದ ದಾಸ, ಬಲರಾಮ ದಾಸ, ಶಿಶು ಅನಂತ ದಾಸ, ಯಶವಂತ ದಾಸ, ಮತ್ತು ಜಗನ್ನಾಥ ದಾಸ (ಧಾಮ, ಸುಧಾಮ, ಸುಭಾಲ, ಸುಭಾವು, ಹಾಗು ಸುಭಾಕ್ಷ.) ಈ ಗ್ರಂಥದ ಜ್ಞಾನವನ್ನು ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಭಕ್ತರಿಗೆ ಅನುಗ್ರಹಿಸಲಿದ್ದಾರೆ.
ರಾಜಕಾರಣಿಗಳು ಕರ್ಮಕ್ಕೆ ತಕ್ಕ ಪಾಠ ಕಲಿಯುವ ದಿನ ಬಂದಿದೆ: ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ | ಭಾರತದ ಮೇಲೆ ದಾಳಿ ಮಾಡಲಿವೆಯಂತೆ ಮಿತ್ರರಾಷ್ಟ್ರ ಸಹಿತ 13 ರಾಷ್ಟ್ರಗಳು!!
Related Posts
ಬಪ್ಪನಾಡು ದೇವಿಯ ರಥೋತ್ಸವದ ವೇಳೆ ಮುರಿದು ಬಿದ್ದ ಬ್ರಹ್ಮರಥ!!
ಇತಿಹಾಸ ಪ್ರಸಿದ್ಧ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ…
ಕರ್ನಾಟಕದಲ್ಲಿ ಶೀಘ್ರದಲ್ಲೇ ರೋಹಿತ್ ವೇಮುಲ ಕಾಯ್ದೆ ಜಾರಿ: ಸಿಎಂ ಸಿದ್ದರಾಮಯ್ಯ!!
ಕರ್ನಾಟಕದಲ್ಲಿ ಆದಷ್ಟು ಬೇಗ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು…
ಮಹಿಳಾ ವೈದ್ಯೆಯ ಮೇಲೆ ಹಲ್ಲೆಗೆ ಯತ್ನ: ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ
ಪುತ್ತೂರು: ಮಹಿಳಾ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ವಿರುದ್ಧ ಸೂಕ್ತ ಕ್ರಮ…
ಬಲ್ನಾಡು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆದೇಶಕ್ಕೆ ಹೈಕೋರ್ಟ್ ತಡೆ!
ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನೂತನ…
ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನವೀಕೃತ ಮಳಿಗೆ ಉದ್ಘಾಟಿಸಿದ ನಟ ರಮೇಶ್ ಅರವಿಂದ್
ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಆಭರಣ ಮಳಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ…
12ನೇ ವರ್ಷಕ್ಕೆ ಪಾದಾರ್ಪಣೆಗೈದ ಡಾ. ನಝೀರ್ಸ್ ಡಯಾಬಿಟೀಕ್ ಸೆಂಟರ್ | ಉಚಿತ ತಪಾಸಣೆ, ವಿಶೇಷ ಉಪನ್ಯಾಸ
ಪ್ರಸಕ್ತ ಸಮಾಜದಲ್ಲಿ ಬಾಧಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳಲ್ಲಿ ಡಯಾಬಿಟೀಸ್ ಒಂದು. ಇದರಲ್ಲಿ…
ಏ. 27ರಂದು ನಡೆಯುವ ವಾಸ್ತು ಬಗ್ಗೆ ಚಿಂತನ – ಮಂಥನ 2025ರ ಪೂರ್ವಭಾವಿ ಸಭೆ | ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ: ವಿಶ್ವಕರ್ಮ ಸಂಘ-ಸಂಸ್ಥೆಗಳ ಖಂಡನೆ
ಪುತ್ತೂರು: ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ವತಿಯಿಂದ ಬೊಳುವಾರು…
KSRTC ಬಸ್ಗಳಲ್ಲಿ ತಂಬಾಕು, ಸಿಗರೇಟು ಜಾಹೀರಾತು: ಮುಖ್ಯಮಂತ್ರಿ ಕಚೇರಿಯಿಂದ ಬಂತು ಖಡಕ್ ಸೂಚನೆ!!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ತಂಬಾಕು, ಸಿಗರೇಟು, ಮದ್ಯ ಉತ್ಪನ್ನಗಳ…
ಶ್ರದ್ಧಾ ಭಕ್ತಿಗೆ ದೇವರ ಅನುಗ್ರಹ ಪ್ರಾಪ್ತಿ : ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿ
ಬಾರ್ಯ ಶ್ರೀ ಮಹಾವಿಷ್ಣುದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರಗಿದ ಶ್ರೀ ಮಹಾವಿಷ್ಣುಯಾಗದ…
ಪರವಾನಿಗೆ ರಹಿತ ಬ್ಯಾನರ್, ಫ್ಲೆಕ್ಸ್, ಕಟೌಟ್ ಮುದ್ರಿಸಿದರೆ ಎಸ್.ಒ.ಪಿ.! ಏನಿದು ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣೆ (ಎಸ್.ಒ.ಪಿ.)?
ನಗರದಲ್ಲಿ ಬ್ಯಾನರ್, ಪ್ಲೆಕ್ಸ್, ಕಟೌಟ್ ಅಳವಡಿಸುವವರು, ಅದರಲ್ಲಿರುವ ವ್ಯಕ್ತಿಗಳು, ಮುದ್ರಕರ…