ಕರಾವಳಿಸ್ಥಳೀಯ

ಕೆರೆಗೆ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ : ನವ ವಿವಾಹಿತನೊಬ್ಬ ಆಕಸ್ಮಿಕವಾಗಿ ಮನೆಯ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮೇ.25 ರಂದು ರಾತ್ರಿ ಗರ್ಡಾಡಿಯ ನಂದಿಬೆಟ್ಟದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಕು ನಿವಾಸಿ ಸದಾಶಿವ ಶೆಟ್ಟಿಯ ಒಬ್ಬನೇ ಮಗನಾಗಿರುವ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಕೃಷಿ ಕೆಲಸ ಮಾಡಿಕೊಂಡಿರುವ ಶೈಲೇಶ್ ಶೆಟ್ಟಿ(38) ಎಂಬವರು ತನ್ನ ಮನೆಯ ಕೆರೆಗೆ ಮೇ.25 ರಂದು ರಾತ್ರಿ ಸುಮಾರು 8:30 ಕ್ಕೆ ಜಾರಿ ಬಿದ್ದು ಕೆಸರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

SRK Ladders

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಶೈಲೇಶ್ ಶವವನ್ನು ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3