Gl harusha
ಕರಾವಳಿಸ್ಥಳೀಯ

ಕುಮಾರಧಾರ ನದಿಗೆ ಹಾರಿದ ಯುವತಿ! | ಸಮಯಪ್ರಜ್ಞೆ ಮೆರೆದ ಆಟೋ ಚಾಲಕ!

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ಯುವತಿಯೊಬ್ಬಳು ತನ್ನ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ್ದು ಆಟೋ ಚಾಲಕನ ಸಮಯ ಪ್ರಜ್ಞೆ ಯಿಂದ ಬದುಕುಳಿದ ಘಟನೆ ಆಲಂಕಾರು ಸಮೀಪದ ಶಾಂತಿ‌ಮೊಗರಿನಿಂದ ವರದಿಯಾಗಿದೆ.

srk ladders
Pashupathi
Muliya

ಶಾಂತಿಮೊಗರು ಸೇತುವೆಯ ಕೆಳಭಾಗದಲ್ಲಿ ಹರಿಯುವ ಕುಮಾರಧಾರ ನದಿಗೆ ಹಾರಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಒಂದೆಡೆ ಕಾಣಿಯೂರು ಗ್ರಾಮದ ಯುವತಿ ಎನ್ನಲಾಗಿದ್ದು ಇನ್ನು ಖಚಿತ ಪಟ್ಟಿಲ್ಲ. ಮತ್ತೊಂದು‌ ಮಾಹಿತಿ ಪ್ರಕಾರ ಬಲ್ಯದ ಯುವತಿ ಎನ್ನಲಾಗುತ್ತಿದೆ.

ಬ್ರಹ್ಮ ಶ್ರೀ ಎಂದು ಸ್ಕೂಟಿ ಮುಂಭಾಗ ಬರೆಯಲಾಗಿದೆ. ಯುವತಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಸದ್ಯ ಯುವತಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ನದಿಗೆ ಹಾರಿರಬಹುದೆಂಬ ಕುತೂಹಲಕ್ಕೆ ಪೊಲೀಸರ ತನಿಖೆಯಿಂದ ತೆರೆ ಬೀಳಲಿದೆ. ಸ್ಪಷ್ಟ ಮಾಹಿತಿ ಅಪ್ ಡೇಟ್ ಮಾಡಲಾಗುವುದು.


ಈ ಸುದ್ದಿಯನ್ನು ಶೇರ್ ಮಾಡಿ

Related Posts