tamanvi
ಸ್ಥಳೀಯ

ಸ್ಕೂಟರಿಗೆ ಸೈಡ್ ಕೊಡಲು ಹೋಗಿ ನಿಂತಿದ್ದ ಗೂಡ್ಸ್ ಲಾರಿಗೆ ಡಿಕ್ಕಿಯಾದ ಕಾರು: ಪೈವಳಿಕೆ ಮೂಲದ ನಾಲ್ವರಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಮರೀಲ್ ನ ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಬಳಿ ನಡೆದಿದೆ.

ಗುಲಾಬಿ (55), ಕೃಷ್ಣಪ್ಪ ನಾಯ್ಕ (60) ಇಬ್ಬರಿಗೆ ಗಂಭೀರ ಗಾಯಗೊಂಡಿದ್ದು, ರೋಹಿಣಿ (32), ಗನ್ಯ (2) ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಸುಳ್ಳಿಮಲೆಯ ಒಂದೇ ಕುಟುಂಬದ ನಿವಾಸಿಗಳು ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ವೇಗವಾಗಿ ಬಂದ ಬೈಕಿಗೆ ಸೈಡ್ ಕೋಡುವ ಸಂದರ್ಭ ಕಾರು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ದಂಪತಿಯನ್ನು ಸರ್ಕಾರಿ ಆಸ್ಪತ್ರೆಗೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು: ಪ್ರೆಸ್ ಕ್ಲಬ್ ಅವರಣದಲ್ಲಿ ಶಾಸಕರ ಬೆಂಬಲಿಗರಿಂದ ಹಕೀಂ ಕೂರ್ನಡ್ಕ ಪ್ರೆಸ್‌ಮೀಟ್‌ ತಡೆ ಯತ್ನ ..!!

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರೆಸ್‌ಮೀಟ್ ನಡೆಸಲು ಆಗಮಿಸಿದ್ದ…

ದ್ವೇಷಪೂರಿತ ಹೇಳಿಕೆ ಆರೋಪ: ಜಗದೀಶ್ ಕಾರಂತ್, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಪುತ್ತೂರು: ದರ್ಬೆಯಲ್ಲಿ ನಡೆದ ಖಾಸಗಿ ಗಲಾಟೆಯನ್ನು ಮುಂದಿಟ್ಟುಕೊಂಡು ಪುತ್ತೂರಿನ ಶಾಂತಿ ಕದಡಲು…

1 of 134