tamanvi
ಸ್ಥಳೀಯ

ದಾವಣಗೆರೆಯಲ್ಲಿ ಸಂಗೀತ ಶಿಕ್ಷಕಿ ಸವಿತಾ ಕೋಡಂದೂರು ಅವರಿಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ ಪ್ರದಾನ

D_shiva_bhat
70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಸಂಗೀತ ಶಿಕ್ಷಕಿ ಸವಿತಾ ಕೋಡಂದೂರವರಿಗೆ ಪ್ರತಿಷ್ಠಾನದ ಸಂಸ್ಥಾಪಕರಾದ ಗಣೇಶ ಶೆಣೈ ಸಾಲಿಗ್ರಾಮದ ಸಮಾರಂಭದ ಅಧ್ಯಕ್ಷರು ಪ್ರಧಾನ ಮಾಡಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪೆರ್ನಾಜೆ: ಮೇ 27ರ ಭಾನುವಾರ ಚೆನ್ನ ಗಿರಿ ವಿರೂಪಾಕ್ಷ ಕಲ್ಯಾಣ ಮಂಟಪ ದಾವಣಗೆರೆ ಇಲ್ಲಿ ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಕಲಾಕೃತಿ ಸಾಂಸ್ಕೃತಿಕ ಸಂಸ್ಥೆಯು ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಸಂಗೀತ ಶಿಕ್ಷಕಿ ಸವಿತಾ ಕೋಡಂದೂರವರಿಗೆ ಪ್ರತಿಷ್ಠಾನದ ಸಂಸ್ಥಾಪಕರಾದ ಗಣೇಶ ಶೆಣೈ ಸಾಲಿಗ್ರಾಮದ ಸಮಾರಂಭದ ಅಧ್ಯಕ್ಷರು ಪ್ರಧಾನ ಮಾಡಿದರು.

maithri

ಸಾಧನೆ ಮಾಡುವುದ ಬಹಳಷ್ಟು ಶ್ರಮ ತಾಳ್ಮೆ ಶಕ್ತಿ ಬೇಕು ಅಷ್ಟು ಸುಲಭವಾಗಿ ಗುರುತಿಸಿ ಕೊಳ್ಳುವುದು ಸಾಧ್ಯವಿಲ್ಲ. ನಿಮ್ಮಗಳ ಸಾಧನೆ ಇನ್ನೊಬ್ಬರಿಗೆ ಸ್ಪೂರ್ತಿ ಆಗಬೇಕು. ನಿಮ್ಮ ಕೆಲಸಕ್ಕೆ ಮತ್ತಷ್ಟು ಜವಾಬ್ದಾರಿಗಳನ್ನು ತರಲಿ ಎಂದು ಮೈಸೂರ ಜಿಲ್ಲೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷರಾದ ನಾಗರಾಜ್ ಬೈರಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸವಿತಾ ಕೊಡಂದೂರು ಅವರು ಪೆರ್ನಾಜೆ ಪ್ರಶಸ್ತಿ, ಕರಾವಳಿ ರತ್ನ, ಗಡಿನಾಡ ಧ್ವನಿ ಮುಂತಾದ ಪ್ರಶಸ್ತಿ ಪಡೆದುಕೊಂಡಿದ್ದು, ಹಾಡುಗಾರಿಕೆಯಲ್ಲಿ, ಸೆಕ್ಸೋಫೋನ್ ಜೊತೆ ಸಂಗೀತ ಕಲಾವಿದೆಯಾಗಿದ್ದು ಕಲಾ ಸೇವೆಯ ಸಾಧನೆ ಮಾಡಿದ್ದಾರೆ.

ಪ್ರಾರಂಭದಲ್ಲಿ ಸಂಸ್ಥೆಯ ಮುತ್ತೈದೆಯರು ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿಗೆ ಸ್ವಾಗತ ಮಾಡಿ ಕನ್ನಡ ತಿಲಕವನ್ನು ನೆಟ್ಟು ಕನ್ನಡ ಕಂಕಣಕಟ್ಟಿ ಕನ್ನಡ ಆರತಿ ಬೆಳಗಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಿದರು ತದನಂತರ ಕನ್ನಡ ಸಿರಿ ಪೇಟ ಸನ್ಮಾನ ಪತ್ರ ಫ್ರೇಮ್ ಚಿನ್ನದ ಲೇಪನದ ಪದಕ ಶಾಲು ಹಾರ ಸರಸ್ವತಿ ದೇವಿಯ ಸ್ಮರಣೆಗೆ ನೀಡಿ ಗೌರವಿಸಿದರು.

ಮುಖ್ಯ ಅತಿಥಿಗಳಾಗಿದ್ದ ನಾಗೇಶ್ ಗಿಣಿ ಅಧ್ಯಕ್ಷರು ಶ್ರೀಮತಿ ಸರಸ್ವತಿ ದಾಸಪ್ಪ ಸೇನೆ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ ಡ ನಾ ಗಂಗಾಧರಪ್ಪ, ಸಾಮಾಜಿಕ ಸಾಧಕ ರಾಜ್ಯಪಾಲರು ಮೈಸೂರು ನಾಗರತ್ನ ಎಸ್ ಶೆಟ್ಟಿ ಸಾಹಿತಿಗಳು ಕನ್ನಡ ಉಪನ್ಯಾಸಕರು ಸಂಸ್ಥೆ ಪದವಿಪೂರ್ವ ಕಾಲೇಜ್ ಮುಂಡಗೋಡ ಉತ್ತರ ಕನ್ನಡ ಜಿಲ್ಲೆ ಸಂಗೀತ ಪ್ರಸನ್ನ ನಾಡಿಗ ಶೈಕ್ಷಣಿಕ ಸಾಧಕಿ ಮೈಸೂರು ಆಶಾ ಆಡಿಗ ಆಚಾರ್ ಬಹುಮುಖ್ಯ ಪ್ರತಿಭೆ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಅಮೆರಿಕ ಜ್ಯೋತಿ ಗಣೇಶನ ಗೌರವ್ಯಾಧ್ಯಕ್ಷರು ಶ್ರೀಮತಿ ಸರಸ್ವತಿ ದಾಸಪ್ಪ ಶನಿ ಪ್ರತಿಷ್ಠಾನ ಸಾಲಿಗ್ರಾಮ ಹೆಚ್ ಮಂಜುನಾಥ್ ಅಧ್ಯಕ್ಷರು ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ, ಶ್ರೀಮತಿ ರಾಘವೇಂದ್ರ ಶೆಣೈ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ, ಹವ್ಯಾಸಿ ವಿಶೇಷ ಬರಹ ಜೇನು ಕೃಷಿ ಗಡ್ಡದ ಸಾಧಕಿ
ಸೌಮ್ಯ ಪೆರ್ನಾಜೆ, ಕುಮಾರ್ ಪೆರ್ನಾಜೆ ಹಾಗೂ ವಿವಿಧ ರಾಜ್ಯದ ಗಣ್ಯರು ಕಲಾವಿದರು ಸಾಧಕರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ | ಪುತ್ತೂರು ಗೃಹಲಕ್ಷ್ಮೀ ಸಂಭ್ರಮಾಚರಣೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ

ಪುತ್ತೂರು: ಗೃಹ ಲಕ್ಷ್ಮೀ ಸೇರಿದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಮಂದಿ ಬದುಕು…

ಕಲ್ಲರ್ಪೆಯಲ್ಲಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ | ಸಂತೆಗೆ ಆಗಮಿಸಿದೆ ಮಹಿಳೆಯರೇ ತಯಾರಿಸಿದ ಗೃಹೋಪಯೋಗಿ ಉತ್ಪನ್ನಗಳು

ಪುತ್ತೂರು: ತಾಲೂಕು ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಬುಧವಾರ ಆರ್ಯಾಪು ಗ್ರಾಮದ ಕಲ್ಲರ್ಪೆ ಬಸ್…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ರಂಜಾನ್ ಹಿನ್ನೆಲೆ: ಪುತ್ತೂರಿನಲ್ಲಿ ಶಾಂತಿ ಸಭೆ | ಚರ್ಚ್ ಮುಂಭಾಗ ರಿಕ್ಷಾ ಪಾರ್ಕಿಂಗ್!! ದೇವಳ ಮುಂಭಾಗ ಭಿಕ್ಷುಕರ ಹಾವಳಿ!!

ಪುತ್ತೂರು: ಪೊಲೀಸರು ಇರುವುದು ನಮ್ಮ ರಕ್ಷಣೆಗೆ ಎನ್ನುವ ಮನೋಭಾವ ಜನರಲ್ಲಿ ಬೆಳೆಯಬೇಕು. ಕಾನೂನು…

1 of 125