Gl
ದೇಶಸ್ಥಳೀಯ

ಶಾಸಕ, ಸಂಸದ ಸೇರಿ ಜನಪ್ರತಿನಿಧಿಗಳ ಭ್ರಷ್ಟಾಚಾರ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ : ಸಂಸದರು ಮತ್ತು ಶಾಸಕರು ಲಂಚ ಪಡೆದರೆ ಅಥವಾ ಸಂಸತ್ತಿನಲ್ಲಿ ಭಾಷಣಕ್ಕಾಗಿ ಹಣದ ಲಾಭ ಪಡೆದರೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್‌ ನೀಡಿದೆ. ಲಂಚ ಪಡೆದ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುದಕ್ಕೆ ಯಾವುದೇ ತಡೆ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಹೇಳಿ ಪಿ.ವಿ. ನರಸಿಂಹರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ 1998ರ ತೀರ್ಪನ್ನು ತೆಗೆದು ಹಾಕಿದೆ.

rachana_rai
Pashupathi
akshaya college
Balakrishna-gowda

ಸದನದಲ್ಲಿ ಮತ ಅಥವಾ ಭಾಷಣಕ್ಕೆ ಲಂಚ ಪಡೆದ ಆರೋಪದ ಮೇಲೆ ಸಂಸದರು ಮತ್ತು ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಶಾಸಕಾಂಗದ ಸದಸ್ಯರಿಂದ ಭ್ರಷ್ಟಾಚಾರ ನಡೆದರೆ ಅದು ಸಾರ್ವಜನಿಕರ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ ಹಾಗೂ ಅದು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದು ನ್ಯಾಯಪೀಠ ಹೇಳಿದೆ.

pashupathi

ಸಂಸತ್ ಅಥವಾ ಶಾಸಕಾಂಗದ ಕಾರ್ಯಚಟುವಟಿಕೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡಿದರೆ, ಅದು ಕಾನೂನಿನ ಚೌಕಟ್ಟಿನ ಒಳಗೆ ಬರದೆ ಇರುವ ವಿನಾಯಿತಿಗಳನ್ನು ಅನುಭವಿಸುವ ವರ್ಗವನ್ನು ಸೃಷ್ಟಿಸಲು ಕಾರಣವಾಗುತ್ತದೆ. ಸಂಸತ್ತಿನ ಸವಲತ್ತುಗಳು ಮೂಲಭೂತವಾಗಿ ಸದನದ ಎಲ್ಲರಿಗೂ ಸಂಬಂಧಿಸಿರುವುದು. ರಾಜ್ಯಸಭೆಗೆ ಅಥವಾ ರಾಷ್ಟ್ರಪತಿ/ಉಪರಾಷ್ಟ್ರಪತಿ ಕಚೇರಿಗೆ ನಡೆಯುವ ಚುನಾವಣೆಗಳು ಸಂಸದೀಯ ಸವಲತ್ತುಗಳಿಗೆ ಅನ್ವಯವಾಗುವ ಸಾಂವಿಧಾನಿಕ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 116