ರಾಜ್ಯ ವಾರ್ತೆ

ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗ್ರಹಣ: ಹೋಳಿ ದಿನದಂದೆ ಬಾನಲ್ಲಿ ವಿಸ್ಮಯ

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗ್ರಹಣ ಸಂಭವಿಸಲಿದ್ದು, ಹೋಳಿ ಹಬ್ಬದಂದೇ ಆಕಾಶದಲ್ಲಿ ಕೆಂಬಣ್ಣದ ಚಂದಿರನ ಅದ್ಭುತ ದೃಶ್ಯ ಗೋಚರವಾಗಲಿದೆ.

chennai-shopping
maithri

ಪಾಲ್ಗುಣ ಮಾಸದ ಹುಣ್ಣಿಮೆಯ ದಿನವೇ ಈ ಗ್ರಹಣ ಸಂಭವಿಸುತ್ತಿದ್ದು, ಭಾರತದಲ್ಲಿಯೂ ಸ್ಪಷ್ಟವಾಗಿ ಕಾಣಿಸಲಿದೆ. ಕರ್ನಾಟಕದಲ್ಲೂ ಸುಮಾರು 25 ನಿಮಿಷಗಳ ಕಾಲ ಗ್ರಹಣ ಗೋಚರವಾಗಲಿದೆ.

ಭಾರತದಲ್ಲಿ ಮಾ.3ರಂದು ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ, ಸಂಜೆ 6:47ಕ್ಕೆ ಮುಕ್ತಾಯವಾಗಲಿದೆ.

ರಕ್ತಚಂದ್ರಗ್ರಹಣದ ವೇಳೆ ಪಾಲಿಸಬೇಕಾದ ನಿಯಮ:

ಗ್ರಹಣದ ಮೊದಲು ಹಾಗೂ ಮೋಕ್ಷದ ಬಳಿಕ ಮನೆಯನ್ನು ಮತ್ತು ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು

ಗ್ರಹಣ ಸಮಯದಲ್ಲಿ ಧ್ಯಾನ, ಭಜನೆ ಹಾಗೂ ಕೀರ್ತನೆಗಳಲ್ಲಿ ತೊಡಗಬೇಕು

ಚಂದ್ರ ದೇವನಿಗೆ ಸಂಬಂಧಿಸಿದ ಮಂತ್ರಗಳು ಮತ್ತು ಮಹಾಮೃತ್ಯುಂಜಯ ಮಂತ್ರ ಪಠಿಸಬೇಕು

ಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಬೇಕು

ದೇವರ ವಿಗ್ರಹಗಳ ಮೇಲೆ ಗಂಗಾಜಲ ಸಿಂಪಡಿಸಿ, ಗ್ರಹಣ ಅವಧಿಯಲ್ಲಿ ದರ್ಬೆ ಬಂಧನದಲ್ಲಿಡಬೇಕು

ಆಹಾರ ಹಾಗೂ ಪಾನೀಯಗಳ ಮೇಲೆ ದರ್ಬೆ ಅಥವಾ ತುಳಸಿ ಇಡುವುದು ಶ್ರೇಯಸ್ಕರ

ಗ್ರಹಣದಂದು ಇವುಗಳು ನಿಷಿದ್ಧ :

ಗ್ರಹಣವನ್ನು ಸೂತಕ ಕಾಲವೆಂದು ಪರಿಗಣಿಸಲಾಗುತ್ತದೆ.ಹೀಗಾಗಿ ಶುಭಕಾರ್ಯಗಳನ್ನು ನಿಷೇಧಿಸಲಾಗಿದೆ

ಮದುವೆ, ಗೃಹ ಪ್ರವೇಶ, ಹೊಸ ವಾಹನ ಖರೀದಿ ಅಥವಾ ಹೊಸ ವೃತ್ತಿ ಪ್ರಾರಂಭಿಸುವುದು ಶ್ರೇಯಸ್ಕರ ಅಲ್ಲ

ಗ್ರಹಣ ಸಮಯದಲ್ಲಿ ಆಹಾರ ತಯಾರಿಕೆ ಹಾಗೂ ಸೇವನೆ ಮಾಡಬಾರದು

ಗರ್ಭಿಣಿಯರು ಗ್ರಹಣ ಸಮಯದಲ್ಲಿ ಹೊರಗೆ ಓಡಾಡಬಾರದು

ಭಕ್ತರು ಹಾಗೂ ಸಾರ್ವಜನಿಕರು ಗ್ರಹಣದ ಸಮಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ದುಬೈ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಾಸ್‌

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷದ ಪರಿಣಾಮವಾಗಿ…

ಯಾವುದೇ ಸಹಕಾರಿ ಸಂಘದಲ್ಲೂ ಕೃಷಿಕರಿಗೆ ಈ ಸಾಲಸಿಗುತ್ತಿಲ್ಲ; ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ರೈ

ಪುತ್ತೂರು: ರಾಜ್ಯ ಸರಕಾರವು ಕೃಷಿಕರ, ರೈತರ ಪರವಾಗಿದೆ, ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ…