ಕ್ರೀಡೆ

ಏಷ್ಯನ್ ಗೇಮ್ಸ್ 2026: 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ;ಭಾರತದ ಶೂಟರ್‌ಗಳ ಭರ್ಜರಿ ಪ್ರದರ್ಶನ – ಸುರುಚಿ ಇಂದರ್ ಸಿಂಗ್ ಹಾಗೂ ಕಮಲ್‌ಜೀತ್ ಜೋಡಿಗೆ ಬಂಗಾರ

ಈ ಸುದ್ದಿಯನ್ನು ಶೇರ್ ಮಾಡಿ

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟರ್‌ಗಳು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಸುರುಚಿ ಇಂದರ್ ಸಿಂಗ್ ಹಾಗೂ ಕಮಲ್‌ಜೀತ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

gl

ಇದರೊಂದಿಗೆ ಪ್ರಸಕ್ತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಒಲಿದಂತಾಗಿದೆ.

ಅರ್ಹತಾ ಸುತ್ತಿನಲ್ಲೂ ಅಗ್ರಸ್ಥಾನ

ಫೈನಲ್ ಪ್ರವೇಶಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿಯೂ ಭಾರತೀಯ ಜೋಡಿ ಅಮೋಘ ಪ್ರದರ್ಶನ ನೀಡಿತ್ತು. ಒಟ್ಟು 21 ತಂಡಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ ಸುರುಚಿ ಇಂದರ್ ಸಿಂಗ್ ಮತ್ತು ಕಮಲ್‌ಜೀತ್ ಜೋಡಿ 587 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿತ್ತು.

ಈ ಮೂಲಕ ಜೋಡಿ ನೂತನ ಏಷ್ಯನ್ ಗೇಮ್ಸ್ ಅರ್ಹತಾ ದಾಖಲೆಯನ್ನು ನಿರ್ಮಿಸುವುದರ ಜೊತೆಗೆ ಏಷ್ಯನ್ ದಾಖಲೆಯನ್ನು ಸಮಗಟ್ಟಿತ್ತು.

ಅರ್ಹತಾ ಸುತ್ತಿನ ಮೊದಲ ಸರಣಿಯಲ್ಲಿ 196, ಎರಡನೇ ಸರಣಿಯಲ್ಲಿ 195 ಹಾಗೂ ಅಂತಿಮ ಸರಣಿಯಲ್ಲಿ 196 ಅಂಕಗಳನ್ನು ಗಳಿಸಿದ ಭಾರತೀಯ ಜೋಡಿ, ಒಟ್ಟು 29 ‘ಇನ್ನರ್ 10’ ಹೊಡೆತಗಳೊಂದಿಗೆ ಫೈನಲ್‌ಗೆ ಪ್ರವೇಶಿಸಿತ್ತು.

ಫೈನಲ್‌ನಲ್ಲೂ ನಿಖರ ಗುರಿ

ಪ್ರಶಸ್ತಿ ಸುತ್ತಿನಲ್ಲೂ ಸುರುಚಿ ಮತ್ತು ಕಮಲ್‌ಜೀತ್ ಜೋಡಿ ನಿಖರ ಗುರಿಯೊಂದಿಗೆ ಸ್ಪರ್ಧಿಸಿ ಎದುರಾಳಿಗಳನ್ನು ಹಿಂದಿಕ್ಕಿತು. ಆರಂಭದಿಂದಲೇ ಉತ್ತಮ ಹೊಂದಾಣಿಕೆ ಪ್ರದರ್ಶಿಸಿದ ಜೋಡಿ ಅಂತಿಮವಾಗಿ ಅಗ್ರಸ್ಥಾನ ಕಾಯ್ದುಕೊಂಡು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿತು.

ವೈಯಕ್ತಿಕ ವಿಭಾಗಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದೆ ಹಿನ್ನಡೆ ಅನುಭವಿಸಿದ್ದ ಈ ಇಬ್ಬರು ಶೂಟರ್‌ಗಳು, ಮಿಶ್ರ ತಂಡ ವಿಭಾಗದಲ್ಲಿ ಅದ್ಭುತ ಹೊಂದಾಣಿಕೆ ತೋರುವ ಮೂಲಕ ದೇಶದ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಪದಕ ಬೇಟೆಗೆ ಈ ಚಿನ್ನದ ಪದಕ ಮತ್ತಷ್ಟು ಬಲ ತುಂಬಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…