tamanvi
ಕ್ರೀಡೆ

ಪುತ್ತೂರು: ಫಿಟ್ ಇಂಡಿಯಾ ಮಾದಕ ದ್ರವ್ಯ ಮುಕ್ತ 5ಕೆ ಮ್ಯಾರಥಾನ್ ಯಶಸ್ವಿ | ಪೊಲೀಸ್ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಸಂಘ ಸಂಸ್ಥೆಗಳಿಂದ ಆಯೋಜನೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಪುತ್ತೂರಿನಲ್ಲಿ ‘ಫಿಟ್ ಇಂಡಿಯಾ ಮಾದಕ ದ್ರವ್ಯ ಮುಕ್ತ 5ಕೆ ಮ್ಯಾರಥಾನ್’ ಯಶಸ್ವಿಯಾಗಿ ನಡೆಯಿತು.

maithri

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮ್ಯಾರಥಾನಿಗೆ ಚಾಲನೆ ನೀಡಲಾಯಿತು. ಈ ಜಾಗೃತಿ ಓಟವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಪ್ರಾರಂಭವಾಗಿ, ದರ್ಬೆ ವೃತ್ತ ಮತ್ತು ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಮೂಲಕ ಸಾಗಿ, ಪುನಃ ದೇವಸ್ಥಾನದ ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು. ವಿವಿಧ ವಿಭಾಗಗಳಲ್ಲಿ ಸುಮಾರು 642 ಮಂದಿ ಮ್ಯಾರಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪುತ್ತೂರಿನ ಎಲ್ಲಾ ರೋಟರಿ ಸಂಸ್ಥೆಗಳು, ಲಯನ್ಸ್ ಕ್ಲಬ್‌ಗಳು, ಇನ್ನರ್ ವೀಲ್ ಕ್ಲಬ್, ರೋಟರಾಕ್ಟ್ ಕ್ಲಬ್, ಜೆಸಿಐ ಸಂಸ್ಥೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಭಾರತ್ ಸ್ಕೌಟ್ಸ್ & ಗೈಡ್ಸ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ವಿವಿಧ ಸಾಮಾಜಿಕ ಮತ್ತು ಸೇವಾ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 5 ದಿನಗಳಿಂದ ವಿವಿಧ ಜನಜಾಗೃತಿ ಅಭಿಯಾನಗಳು ನಡೆದಿದ್ದವು. ಅದರ ಸಮಾರೋಪದ ಅಂಗವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಕ್ರೀಡೆಯೊಂದಿಗೆ ಭಾರತೀಯತೆ ಬೆಳೆಸಿಕೊಳ್ಳಿ: ಸುಬ್ರಮಣ್ಯ ನಟ್ಟೋಜ | ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಜೊತೆಗೆ ಅನೇಕ ಅನೇಕ ಅವಕಾಶಗಳು ವಿದ್ಯಾರ್ಥಿಗಳ…

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ! ಸಚಿವ ಸಂಪುಟದ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ಅಶೋಕ್ ರೈ ಭಾಗಿ

ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ಸಚಿವ ಸಂಪುಟದ ಪೂರ್ವಭಾವಿ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ…