ಪ್ರಚಲಿತರಾಜ್ಯ ವಾರ್ತೆ

ಪಿ.ಆರ್.ಸಿ.ಐ. ನೆಕ್ಸ್ಟ್ಜೆನ್ ಗವರ್ನನ್ಸ್ ಅವಾರ್ಡ್ಸ್ – 2026ಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಯ್ಕೆ | ಆಗಸ್ಟ್ 1ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI)ದ ಈ ಬಾರಿಯ PRCI NextGEN Governance Awards – 2026ಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)  ಭಾಜನವಾಗಿದೆ ಎಂದು PRCI Chairman Emeritus & Mentor ಎಂ. ಬಿ. ಜಯರಾಮ್ ಘೋಷಿಸಿದರು.

maithri

ಬೆಂಗಳೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಉತ್ತಮ ಆಡಳಿತ, ಪಾರದರ್ಶಕತೆ, ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸೇವೆ ಹಾಗೂ ನಾಗರಿಕ ಕೇಂದ್ರಿತ ಆಡಳಿತ ವ್ಯವಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. 2026ರ ಆಗಸ್ಟ್ 1ರಂದು ನವದೆಹಲಿಯ Constitution Club of Indiaದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಂತರ PRCI Transformative Governance Symposium ಜರುಗಲಿದೆ. ದೇಶದ ಹಿರಿಯ IAS, IPS ಅಧಿಕಾರಿಗಳು, ನೀತಿ ನಿರ್ಧಾರಕರು, ಶಿಕ್ಷಣ ತಜ್ಞರು, ಸಾರ್ವಜನಿಕ ಸಂಪರ್ಕ ವೃತ್ತಿಪರರು ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈ ಪ್ರಶಸ್ತಿಗಳು ದೇಶದ ವಿವಿಧ ರಾಜ್ಯಗಳ ಆಡಳಿತಾಧಿಕಾರಿಗಳು ಹಾಗೂ ಸರ್ಕಾರಿ ಸಂಸ್ಥೆಗಳು ಕೈಗೊಂಡಿರುವ ಜನಪರ, ಪಾರದರ್ಶಕ ಮತ್ತು ನವೀನ ಆಡಳಿತ ಮಾದರಿಗಳನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಸನ್ಮಾನಿಸುವ ಮಹತ್ವದ ಪ್ರಯತ್ನವಾಗಿದೆ. ಈ ಸಾಲಿನ ಅತ್ಯುನ್ನತ ಸಂಸ್ಥಾ ಪ್ರಶಸ್ತಿಯಾದ PRCI NextGEN Award for Excellence in Citizen-Centric Urban Governance ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ಗೆ ಘೋಷಿಸಲಾಗಿದೆ ಎಂದು ವಿವರಿಸಿದರು.

BDA ಅಧ್ಯಕ್ಷ ಶ್ರೀ ಎನ್. ಎ. ಹರೀಸ್ ನೇತೃತ್ವದಲ್ಲಿ Public Grievance Redressal System (PGRS) ಅನ್ನು ಜಾರಿಗೊಳಿಸಿದ್ದು, ದೇಶದಲ್ಲಿಯೇ ಅತ್ಯಂತ ಪರಿಣಾಮಕಾರಿ ನಾಗರಿಕ ದೂರು ನಿವಾರಣಾ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ದೂರು ನಿರ್ವಹಣಾ ವ್ಯವಸ್ಥೆಯ ಪ್ರಮುಖ ಅಂಶಗಳು – 24×7 ಸಾರ್ವಜನಿಕ ದೂರು ಸ್ವೀಕಾರ, ದೂರವಾಣಿ, WhatsApp, X (Twitter), CPGRAMS ಹಾಗೂ ಜನಸ್ಪಂದನದ ಏಕೀಕರಣ, ಪ್ರತಿಯೊಂದು ದೂರಿಗೂ ವಿಶಿಷ್ಟ Case ID, 30–60 ದಿನಗಳಲ್ಲಿ ಕಡ್ಡಾಯ ಪರಿಹಾರ, ಸ್ವಯಂಚಾಲಿತ Escalation ವ್ಯವಸ್ಥೆ, ಸಾರ್ವಜನಿಕ Open House Meeting, YouTube ನೇರಪ್ರಸಾರ, ಸಂಪೂರ್ಣ ಡಿಜಿಟಲ್ ದಾಖಲೆ ನಿರ್ವಹಣೆ, ಪಾರದರ್ಶಕ ಹಾಗೂ ಉತ್ತರದಾಯಿ ಆಡಳಿತ. ಈಗಾಗಲೇ ಇದರಲ್ಲಿ 4,797 ದೂರುಗಳ ನೋಂದಣಿಯಾಗಿದೆ. 54 Open House ಸಭೆಗಳು ನಡೆದಿವೆ. 2,306 ಪ್ರಕರಣಗಳ ವಿಚಾರಣೆ ನಡೆದಿದ್ದು, 1,544 ಪ್ರಕರಣಗಳ ಯಶಸ್ವಿ ಪರಿಹಾರ ಆಗಿದೆ ಎಂದು ವಿವರಿಸಿದರು.

ವಿವಿಧ ಅಧಿಕಾರಿಗಳಿಗೆ ಗೌರವ:

PRCI NextGEN Governance Awards–2026 ಅಡಿಯಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಆಡಳಿತ ನೀಡಿದ ಗಣ್ಯ ಅಧಿಕಾರಿಗಳನ್ನು ಗೌರವಿಸಲಾಗುವುದು. ಅಸ್ಸಾಂ ಸರ್ಕಾರದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಹಾಗೂ ಜಲಸಂಪನ್ಮೂಲ ಇಲಾಖೆ ಸ್ಪೆಷಲ್ ಚೀಫ್ ಸೆಕ್ರೆಟರಿ ಸೈದೈನ್ ಅಬ್ಬಾಸಿ, IAS ಅವರಿಗೆ PRCI NextGEN Award for Sustainable Water Leadership ಪ್ರಶಸ್ತಿ. ಬಿಹಾರ ರಾಜಭವನದ ಅಡಿಷನಲ್ ಚೀಫ್ ಸೆಕ್ರೆಟರಿ ದೀಪಕ್ ಕುಮಾರ್ ಸಿಂಗ್, IAS ಅವರಿಗೆ PRCI NextGEN Award for Excellence in Technology Driven Administration ಪ್ರಶಸ್ತಿ. National Institute of Open Schooling (NIOS) ನಿರ್ದೇಶಕ ರಾಜೀವ್ ಕುಮಾರ್ ಸಿಂಗ್ ಅವರಿಗೆ PRCI NextGEN Award for Inclusive Education Leadership ಅವಾರ್ಡ್. ಛತ್ತೀಸ್‌ಗಢ Director General of Police ಅರುಣ್ ದೇವ್ ಗೌತಮ್, IPS ಅವರಿಗೆ PRCI NextGEN Award for Excellence in Ethical Governance ಅವಾರ್ಡ್. New Delhi Municipal Council (NDMC) Chairman ಹಾಗೂ Andaman & Nicobar Administration Former Chief Secretary ಹಾಗೂ ಕೇಶವ್ ಚಂದ್ರ, IAS (1995 Batch) ಅವರಿಗೆ PRCI NextGEN Award for Excellence in Urban Governance Leadership ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

PRCI ಬಗ್ಗೆ

2004ರಲ್ಲಿ ಸ್ಥಾಪನೆಯಾದ Public Relations Council of India (PRCI) ದೇಶದ ಅತಿದೊಡ್ಡ ಸಾರ್ವಜನಿಕ ಸಂಪರ್ಕ ವೃತ್ತಿಪರ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತಾದ್ಯಂತ 60ಕ್ಕೂ ಹೆಚ್ಚು ಶಾಖೆಗಳ ಮೂಲಕ ಸಾರ್ವಜನಿಕ ಸಂಪರ್ಕ, ಸಂವಹನ, ಉತ್ತಮ ಆಡಳಿತ ಹಾಗೂ ಪಾರದರ್ಶಕತೆಯನ್ನು ಉತ್ತೇಜಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಎಂ.ಬಿ. ಜಯರಾಮ್ ಹೇಳಿದರು.

ಸಮಾರೋಪ

PRCI ಆರಂಭಿಸಿರುವ NextGEN Governance Awards ದೇಶದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಮಾನದಂಡವನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ರಾಷ್ಟ್ರೀಯ ವೇದಿಕೆಯಾಗಿದೆ. ಜನಪರ ಆಡಳಿತ, ತಂತ್ರಜ್ಞಾನ ಬಳಕೆ, ಪಾರದರ್ಶಕತೆ, ಜವಾಬ್ದಾರಿತನ ಹಾಗೂ ಉತ್ತಮ ಸೇವಾ ಮನೋಭಾವವನ್ನು ಉತ್ತೇಜಿಸುವ ಈ ಪ್ರಶಸ್ತಿಗಳು ದೇಶದ ಸರ್ಕಾರಿ ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ಪ್ರೇರಣೆಯಾಗಲಿವೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ PRCI ರಾಷ್ಟ್ರೀಯ ಅಧ್ಯಕ್ಷ ಶ್ರೀಮತಿ ಗೀತಾ ಶಂಕರ್, ಆಡಳಿತ ಮಂಡಳಿ ನಿರ್ದೇಶಕ ಡಾ. ಟಿ. ಎಸ್. ಲತಾ, ನವದೆಹಲಿ PRCI ಇದರ ಬಲದೇವ್’ರಾಜ್, PRCI ಪ್ರಧಾನ ಕಾರ್ಯದರ್ಶಿ ಪಶುಪತಿ ಶರ್ಮಾ, PRCI ನಿರ್ದೇಶಕ Shrinivasan, PRCI ದಕ್ಷಿಣ ಮುಖ್ಯಸ್ಥ ರಾಮಕೃಷ್ಣ, Bangalore PRCI ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts