tamanvi
ಧಾರ್ಮಿಕ

ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿಯಿಂದ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ | ಅಹೋರಾತ್ರಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ

D_shiva_bhat
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿಯ ಸಹಕಾರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಾಮೂಹಿಕ ಏಕಾದಶ ಯೋಗ ಶಿವ ನಮಸ್ಕಾರ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಸ್‌ಪಿವೈಎಸ್‌ಎಸ್‌ ಯೋಗ ಸಮಿತಿಯ ಸಹಕಾರದಲ್ಲಿ ಶಿವರಾತ್ರಿಯ ಪ್ರಯುಕ್ತ ಸಾಮೂಹಿಕ ಏಕಾದಶ ಯೋಗ ಶಿವ ನಮಸ್ಕಾರ ನಡೆಯಿತು.

maithri

ಫೆ.26ರಂದು ರಾತ್ರಿ 9.30ರಿಂದ ಉದ್ಘಾಟನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಫೆ. 27ರ ಮುಂಜಾನೆ 6ರ ತನಕ ಜಾಗರಣೆ, ಭಜನೆ, ಶಿವಜಾಗರಣೆ ಮಹತ್ವ, ಭಜನೆ ಮಹತ್ವ, ಶಿವ ಪಂಚಾಕ್ಷರಿ ಮಹತ್ವ, ಮುಂತಾದ ವಿಷಯಗಳಲ್ಲಿ ಬೌದ್ಧಿಕ್‌, ಕುಣಿತ ಭಜನೆ, ಶಿವ ಪಂಚಾಕ್ಷರಿ ಜಪ, ಶಿವಾಷ್ಟೋತ್ತರ ಶತನಾಮನಿ ಪಠಣ, ಮೃತ್ಯಂಜಯ ಜಪ ಪಠಣೆ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಶ್ರೀಕ್ಷೇತ್ರದಲ್ಲಿ 108 ಸುತ್ತು ಪ್ರದಕ್ಷಿಣೆ, ಕಲಶತೀರ್ಥ ಪ್ರೋಕ್ಷಣೆ ಕಾರ್ಯಕ್ರಮದ ಜತೆಗೆ ಸಾಮೂಹಿಕ ಏಕಾದಶ ಯೋಗ ಶಿವ ನಮಸ್ಕಾರವು 4 ಆವೃತ್ತಿಗಳಲ್ಲಿ ನಡೆಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಪೂರ್ಣೇಶ್ವರೀ ಹಾಲ್‌ನಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.

ಸಮಿತಿಯ ತಾಲೂಕು ಸಂಚಾಲಕರು ಉದ್ಘಾಟಿಸಿದರು.  ವೇದಿಕೆಯಲ್ಲಿ ಕಾರ್ಯಕ್ರಮದ ಮಾರ್ಗದರ್ಶಕರು, ಸಂಚಾಲಕರು ಹಾಗೂ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ವಿವಿಧ ಶಾಖೆಗಳಿಂದ ಸುಮಾರು 200ಕ್ಕೂ ಮಿಕ್ಕಿ ಯೋಗಬಂಧುಗಳು ಪಾಲ್ಗೊಂಡಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪೋಳ್ಯ ಮಠದ ಬ್ರಹ್ಮಕಲಶ: ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರ ಪಾರಾಯಣ, ಪ್ರಾರ್ಥನೆ

ಪುತ್ತೂರು: ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ…