tamanvi
ಧಾರ್ಮಿಕ

ಉಪ್ಪಿನಂಗಡಿ ವೃತ್ತದಲ್ಲಿ ಉಬಾರ್ ಮಂಜ ಬೈದ್ಯರ ಪುತ್ಥಳಿ ಸ್ಥಾಪಿಸಿ, ಅವರ ಹೆಸರನ್ನಿಡುವಂತೆ ಗೆಜ್ಜೆಗಿರಿ ಸಮಿತಿ ಮನವಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ ಮುಖ್ಯ ರಸ್ತೆಯ ವೃತ್ತಕ್ಕೆ ವೀರ ಉಬಾರ್ ಮಂಜ ಬೈದ್ಯರ ತ್ಯಾಗವನ್ನು ಸಾರುವ ಸಲುವಾಗಿ ಮಂಜ ಬೈದ್ಯರ ಪುತ್ತಳಿ ಸ್ಥಾಪಿಸಿ ಅವರ ಹೆಸರು ನಾಮಕರಣ ಮಾಡುವಂತೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಮೇ 13ರಂದು ಬೆಂಗಳೂರಿನಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಬೆಳ್ತಂಗಡಿ, ಜಯಂತ ನಡುಬೈಲು ಪುತ್ತೂರು, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ. ಉಪ್ಪಿನಂಗಡಿ, ಸಂಜೀವ ಪೂಜಾರಿ ಬಿರ್ವ ಸೆಂಟರ್ ಮೆಲ್ಕಾರ್ ಬಂಟ್ವಾಳ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts