ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಆದಾಯ 167 ಕೋಟಿ ರೂ.! ಉಳಿಸಿಕೊಂಡ ರಾಜ್ಯದ ಅತೀ ಶ್ರೀಮಂತ ದೇವಸ್ಥಾನವೆಂಬ ಖ್ಯಾತಿ!!

GL

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯದ ಅತೀ ಶ್ರೀಮಂತ ದೇವಸ್ಥಾನವೆಂಬ ಅಭಿದಾನಕ್ಕೆ ಪಾತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025-26ನೇ ಆರ್ಥಿಕ ವರ್ಷದಲ್ಲಿ 167 ಕೋಟಿ ರೂ. ಆದಾಯ ಗಳಿಸಿ, ಹೊಸ ದಾಖಲೆ ಬರೆದಿದೆ.

maithri

ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಪೈಕಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 1,67,89,09,080 ರೂ. (167.89 ಕೋಟಿ ರೂ.) ಆದಾಯ ಗಳಿಸಿದೆ.

2024-25ನೇ ಆರ್ಥಿಕ ವರ್ಷದಲ್ಲಿ 155.95 ಕೋಟಿ ರೂ. ಆದಾಯ ಗಳಿಸಿತ್ತು. 2025-26ನೇ ಆರ್ಥಿಕ ವರ್ಷದಲ್ಲಿ 11.94 ಕೋಟಿ ರೂ. ಹೆಚ್ಚುವರಿ ಗಳಿಸಿದ್ದು, ಶ್ರೀಮಂತ ದೇವಸ್ಥಾನಗಳ ಪೈಕಿ ಅಗ್ರ ಪಂಕ್ತಿಯನ್ನು ಕಾಯ್ದುಕೊಂಡಿದೆ.

ಆದಾಯ ಹಾಗೂ ಖರ್ಚು:

ಈ ವರ್ಷ ಹರಕೆ ಸೇವೆಯಿಂದ 64,08,90,940 ರೂ. ಸಂಗ್ರಹವಾಗಿದೆ.

ಹೂಡಿಕೆ ಮಾಡಿದ್ದು, ಅದರ ಮೇಲೆ 49,11,07,412 ರೂ. ಬಡ್ಡಿ ಸಂಗ್ರಹವಾಗಿದೆ.

ಕಾಣಿಕೆಯಿಂದ 24,69,63,576 ರೂ. ಸಂಗ್ರಹವಾಗಿದೆ.

ಅನ್ನಸಂತರ್ಪಣೆ ನಿಧಿಯಿಂದ 9,14,71,606 ರೂ. ಸಂಗ್ರಹವಾಗಿದೆ.

ಛತ್ರ ಸಂರಕ್ಷಣಾ ವಂತಿಕೆಯಿಂದ 6,93,66,026 ರೂ.

ಕಾಣಿಕೆ ಡಬ್ಬಿಯಿಂದ 5,47,43,244 ರೂ. ಹಾಗೂ ಕಟ್ಟಡ ಬಾಡಿಗೆ, ಇ – ಹುಂಡಿ, ಕೃಷಿ ತೋಟ, ಗುತ್ತಿಗೆಗಳಿಂದಲೂ ಆದಾಯ ಸಂಗ್ರಹವಾಗಿದೆ.

ಇದರಲ್ಲಿ ವಿವಿಧ ಸೌಲಭ್ಯಗಳಿಗಾಗಿ 85,20,14,531 ರೂ. ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಿಮೆ ವೇತನಕ್ಕಾಗಿ ಕ್ರಿಶ್ಚಿಯನ್ ಯುವಕನಿಂದ ದೈವ ನರ್ತನ!! ಮಂಗಳೂರಿನಲ್ಲಿ ನಡೆದ ಘಟನೆಗೆ ವಿರೋಧ ವ್ಯಕ್ತಪಡಿಸಿದ ಡಾ. ರತಿ

ಮಂಗಳೂರು: ಕ್ರಿಶ್ಚಿಯನ್ ಮಹಿಳೆಗೆ ಜನಿಸಿದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದು, ಇದೀಗ…