ಶಿಕ್ಷಣ

ವಿವೇಕಾನಂದ ಕಾಲೇಜಿನಲ್ಲಿ ಹಂಸಧ್ವನಿ ಕಾರ್ಯಕ್ರಮ | ಸಂಗೀತ ಭಾರತೀಯ ಸಂಸ್ಕೃತಿಯ ಸಂಪತ್ತು: ವಿದ್ವಾನ್ ಕಾಂಚನ ಎ. ಈಶ್ವರ ಭಟ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ.  ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ ಭಾವನೆಗಳ ವಿನಿಮಯವಾಗುವುದು. ಲಲಿತ ಕಲೆಗಳಲ್ಲಿ ಅಮೋಘವಾದುದು ಹಾಗೂ ದೈವಿಕ ಕಲೆ ಎನಿಸಿಕೊಂಡದ್ದು ಶಾಸ್ತ್ರೀಯ ಸಂಗೀತ. ಇಂತಹಾ ಶಾಸ್ತ್ರಬದ್ಧವಾದ ಯಾವುದೇ ಕಲೆಗಳನ್ನು ಕಲಿತುಕೊಳ್ಳಲು ಗುರು ಅವಶ್ಯ. ಗುರು ಎಂದರೆ ಬದುಕಿಗೆ ದಾರಿ ತೋರುವವನು ಎಂದರ್ಥ. ನಮ್ಮ ಸ್ವಂತಿಕೆ ಎಂಬುದಾಗಿ ಕಲೆಗೆ ಸೂಕ್ತವಲ್ಲದ ಸಂಗತಿಗಳನ್ನು ಮಾಡದೇ ಗುರು ತೋರಿದ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದಾಗ ಶಿಷ್ಯ ನಿಪುಣನಾಗುತ್ತಾನೆ ಎಂದು ಪುತ್ತೂರಿನ ಸುನಾದ ಸಂಗೀತ ಕಲಾಶಾಲೆಯ ನಿರ್ದೇಶಕ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ನುಡಿದರು.

maithri

hamsadwani

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಬೈಂದೂರು ಪ್ರಭಾಕರ ರಾವ್ ಸಭಾಂಗಣದಲ್ಲಿ ಸುನಾದ ಸಂಗೀತ ಕಲಾ ಶಾಲೆ ಪುತ್ತೂರು, ವಿವೇಕಾನಂದ ಸಂಶೋಧನಾ ಕೇಂದ್ರ , ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ‘ಹಂಸಧ್ವನಿ’ ಸುನಾದ ವಿವೇಕ ಸ್ಮೃತಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ  ಹಾಗೂ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಶುಭ ಹಾರೈಸಿದರು. ವೇದಿಕೆಯಲ್ಲಿ ಹಿರಿಯ ಪಿಟೀಲು ವಾದಕ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ, ಸಂಗೀತ ವಿದ್ವಾನ್ ಟಿ.ಎಸ್. ಪಟ್ಟಾಭಿರಾಮ ಪಂಡಿತ್ ಬೆಂಗಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಸ್ವಾಗತಿಸಿದರು. ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಕುಮಾರಿ ಟಿ ನಿರ್ವಹಿಸಿದರು.

ಸಂಗೀತ ಶಿಸ್ತನ್ನು ಬೆಳೆಸುತ್ತದೆ-ವಿದ್ವಾನ್ ಟಿ.ಎಸ್ ಪಟ್ಟಾಭಿರಾಮ ಪಂಡಿತ್

ಈ ಸಂದರ್ಭದಲ್ಲಿ ಸಂಗೀತ ಮತ್ತು ಜೀವನ ಮೌಲ್ಯ ಎಂಬುದರ ಕುರಿತಾಗಿ ಮಾತನಾಡಿದ ವಿದ್ವಾನ್ ಟಿ.ಎಸ್ ಪಟ್ಟಾಭಿರಾಮ ಪಂಡಿತ್, ‘ಓಂಕಾರ ಎಂಬುದು ಒಂದು ನಾದವಾಗಿ ಎಲ್ಲವೂ ಅದರೊಳಗೆ ಅಡಕವಾಗಿವೆ. ನಾವು ನಮ್ಮೊಳಗಿನ ರಾಕ್ಷತಸ್ವವನ್ನು ತೊಡೆದುಹಾಕಬೇಕು ಅಲ್ಲದೇ ನಮ್ಮೊಳಗೆ ಒಂದು ಅದ್ಭುತ ವ್ಯಕ್ತಿತ್ವವನ್ನು ರೂಪಿಸಲು ಸಂಗೀತ ಕಾರಣವಾಗುತ್ತದೆ. ನಮ್ಮನ್ನು ಪರಸ್ಪರ  ಒಗ್ಗೂಡಿಸಿ ಸಜ್ಜನಿಕೆಯನ್ನು ರೂಪಿಸುತ್ತದೆ. ನಮ್ಮ ಸಂಪೂರ್ಣ ಮನಸನ್ನೇ ಶುದ್ಧಗೊಳಿಸುವ ತಾಕತ್ತು ಸಂಗೀತಕ್ಕಿದೆ. ಸಂಗೀತವನ್ನು ನಿತ್ಯ ಅಭ್ಯಾಸ ಮಾಡಿಕೊಳ್ಳಲೇಬೇಕು.ಗುರು ಎಂದರೆ ಶಕ್ತಿ. ಗುರು-ಶಿಷ್ಯ ಸಂಬAಧದಲ್ಲಿನ ಚುರುಕುತನವನ್ನು ಅರಿತುಕೊಳ್ಳಲು ಲಲಿತ ಕಲೆಗಳು ಸಹಾಯಕ’ ಎಂದು ನುಡಿದರು.

ವಿದ್ವಾನ್ ವಿಠ್ಠಲ ರಾಮಮೂರ್ತಿ ಇವರು ‘ಸಂಗೀತ ಮತ್ತು ಭಾವ’ ಎನ್ನುವ ವಿಚಾರವನ್ನು ತಮ್ಮ ಹಾಡುಗಾರಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು. ನಂತರ ವಿದ್ವಾನ್ ಬಾಲಕರಷ್ಣ ಹೊಸಮನೆ ಹಾಗೂ ಡಾ.ನಿಶಿತಾ ಪುತ್ತೂರು ಇವರ ಪರಿಕಲ್ಪನೆಯಲ್ಲಿ ಭಾವ ರಾಗ ತಾಳ ನಾಟ್ಯವನ್ನು ಒಳಗೊಂಡಿರುವ ಪ್ರದರ್ಶನಂ ಎನ್ನುವ ಕಾರ್ಯಕ್ರಮ ನಡೆಯಿತು.

ಗೌರವ ಸಮರ್ಪಣೆ

ವಿದ್ವಾನ್ ವಿಠ್ಠಲ ರಾಮಮೂರ್ತಿ, ವಿದ್ವಾನ್ ಟಿ.ಎಸ್ ಪಟ್ಟಾಭಿರಾಮ ಪಂಡಿತ್ ಹಾಗೂ ಪುತ್ತೂರಿನ ಸುನಾದ ಸಂಗೀತ ಕಲಾಶಾಲೆಯ ನಿರ್ದೇಶಕ ವಿದ್ವಾನ್ ಕಾಂಚನ .ಎ ಈಶ್ವರ ಭಟ್ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಇವರಿಗೆ ಗೌರವ ಸಮರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಕರ್ನಾಟಕ ಶಾಸ್ತಿçà ಸಂಗೀತ ಕರ‍್ಯಕ್ರಮ ಜರುಗಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್ ಟಿ.ಎಸ್ ಪಟ್ಟಾಭಿರಾಮ ಪಂಡಿತ್, ಪಿಟೀಲಿನಲ್ಲಿ ವಿದ್ವಾನ್ ವಿಠ್ಠಲ ರಾಮಮೂರ್ತಿ, ಮೃದಂಗದಲ್ಲಿ ವಿದ್ವಾನ್ ಕಾಂಚನ .ಎ ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಹಾಗೂ ಮೋರ್ಸಿಂಗ್‌ನಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಸಹಕರಿಸಿದರು.

ಕಾರ್ಯಕ್ರಮವನ್ನು ಕಾಲೇಜಿನ ವಿಶೇಷಾಧಿಕಾರಿ ಡಾ.ಮನಮೋಹನ ಸಂಯೋಜಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಳೆ ಶ್ರೀಧರಾಭಿವಂದನ | ಡಾ. ಎಚ್.ಜಿ. ಶ್ರೀಧರ್ ಅವರಿಗೆ ಶಿಷ್ಯವೃಂದ, ಪುತ್ತೂರು ಕಸಾಪದಿಂದ ಸಾರ್ವಜನಿಕ ಸನ್ಮಾನ

ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಎಚ್‌.ಜಿ. ಶ್ರೀಧರ ಅವರಿಗೆ…