ಶಿಕ್ಷಣ

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮಂತ್ರಿ ಮಂಡಲ ರಚನೆ | ಅಧ್ಯಕ್ಷರಾಗಿ ಅವನಿ ನಾಯಕ್, ಕಾರ್ಯದರ್ಶಿಯಾಗಿ ರಿಧಿ ಆರ್.ಕೆ. ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಮಂತ್ರಿಮಂಡಲ ರಚಿಸಲಾಯಿತು.

maithri

ವಿದ್ಯಾರ್ಥಿ ನಾಯಕಿಯಾಗಿ ದ್ವಿತೀಯ ಪಿಯುಸಿಯ ಅವನಿ ನಾಯಕ್, ಉಪನಾಯಕನಾಗಿ ದ್ವಿತೀಯ ಪಿಯುಸಿಯ ನವನೀತ್ ರಾವ್ ಕೆ., ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿಯ ರಿಧಿ ಆರ್. ಕೆ., ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿಯ ಸಾಕ್ಷ ಐ.ಎಸ್. ಆಯ್ಕೆಯಾದರು.

ಸಾಂಸ್ಕೃತಿಕ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಯಶ್ವಿ ರಾವ್,  ಉಪ ಸಾಂಸ್ಕೃತಿಕ ಮಂತ್ರಿಯಾಗಿ ಪ್ರಥಮ ಪಿಯುಸಿಯ ಮೋನಿಶ್ ಎಲ್., ಶಿಕ್ಷಣ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಅಮೃತ ಡಿ.ಎಲ್., ಉಪ ಶಿಕ್ಷಣ ಮಂತ್ರಿಯಾಗಿ ಪ್ರಥಮ ಪಿಯುಸಿಯ ಸರ್ವದ್ ಜೆ. ನಾಯಕ್, ಶಿಸ್ತಿನ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ರಿಷಾನ್ ಕೆ., ಉಪ ಶಿಸ್ತಿನ ಮಂತ್ರಿಯಾಗಿ ಪ್ರಥಮ ಪಿಯುಸಿಯ ಅದ್ವಿಜ್ ಸಜೇಶ್, ಆರೋಗ್ಯ ಮಂತ್ರಿಯಾಗಿ

ದ್ವಿತೀಯ ಪಿಯುಸಿಯ ಸಿಂಚನ್, ಉಪ ಆರೋಗ್ಯ ಮಂತ್ರಿಯಾಗಿ ವರುಣ್, ಕ್ರೀಡಾಮಂತ್ರಿಯಾಗಿ ದ್ವಿತೀಯ ಪಿಯುಸಿಯ ಸೂರ್ಯ ಬಿ.ಆರ್., ಉಪ ಕ್ರೀಡಾ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಸಾರ್ಥಕ್ ಬಿ.ಎಸ್. ಆಯ್ಕೆಯಾದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಮಾತನಾಡಿ, ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಸಂವಿಧಾನದಲ್ಲಿ ಬರೆಯಲ್ಪಟ್ಟ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ  ಉತ್ತಮ ಅಭ್ಯರ್ಥಿಯ ಆಯ್ಕೆ ಅತ್ಯಂತ ಅವಶ್ಯಕ ಎಂದರು.

12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಒಟ್ಟು 46 ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಹಾಗೂ 626 ವಿದ್ಯಾರ್ಥಿಗಳು ಮತ ಚಲಾಯಿಸಿದರು.

ಸಂಸ್ಥೆಯ ಚುನಾವಣಾ ಅಧಿಕಾರಿಗಳಾದ ಗಣಕಶಾಸ್ತ್ರ ಉಪನ್ಯಾಸಕಿ ಜಯಂತಿ ಹೊನ್ನಮ್ಮ, ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ್, ರಸಾಯನಶಾಸ್ತ್ರ ಉಪನ್ಯಾಸಕಿ ವಿನುತ ಎಂ. ಸಾಲೆ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಆರ್. ಹಾಗೂ ಮಕ್ಕಳ ಕ್ಷೇಮ ಪಾಲನಾಧಿಕಾರಿ ಸಚಿನ್ ಕುಮಾರ್ ಮತ ಚಲಾವಣೆಗೆ ಬೇಕಾದ  ವ್ಯವಸ್ಥೆಗಳನ್ನು ಕಲ್ಪಿಸಿ, ಮತ ಚಲಾಯಿಸುವ ಬಗ್ಗೆ ಸಲಹೆ ಸೂಚನೆ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಳೆ ಶ್ರೀಧರಾಭಿವಂದನ | ಡಾ. ಎಚ್.ಜಿ. ಶ್ರೀಧರ್ ಅವರಿಗೆ ಶಿಷ್ಯವೃಂದ, ಪುತ್ತೂರು ಕಸಾಪದಿಂದ ಸಾರ್ವಜನಿಕ ಸನ್ಮಾನ

ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಎಚ್‌.ಜಿ. ಶ್ರೀಧರ ಅವರಿಗೆ…

ಹತ್ತನೆಯಲ್ಲಿ 55 ಶೇಕಡ, ಪಿಯು ಫಲಿತಾಂಶದಲ್ಲಿ 94.6 ಶೇಕಡ! ಬಪ್ಪಳಿಗೆಯ ಅಂಬಿಕಾ ಪ.ಪೂ.ವಿದ್ಯಾಲಯದ ನಿಹಾಲ್ ಎನ್ ಅವರಿಂದ ವಿಶಿಷ್ಟ ಸಾಧನೆ

ಪುತ್ತೂರು: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್…