tamanvi
ರಾಜಕೀಯ

ಗಿಡ ನೆಟ್ಟು ಮೊದಲ ಮಾಸಿಕ ಸಭೆಯನ್ನು ಉದ್ಘಾಟಿಸಿದ ಬಿಜೆಪಿ ತಾಲೂಕು ರೈತ ಮೋರ್ಚಾ! ಸ್ವಚ್ಛ, ಬಲಿಷ್ಠ ಸಂಘಟನೆಯಿಂದ ಪುತ್ತೂರಿನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಆರ್.ಸಿ. ನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಇದರ ರೈತ ಮೋರ್ಚಾದ ಪದಾಧಿಕಾರಿಗಳ ಮೊದಲ ಸಭೆ ಜೂನ್ 9ರಂದು ಶಾಂತಿಗೋಡು ಆನಡ್ಕ ಸುಬ್ರಹ್ಮಣ್ಯ ಭಟ್ ಮನೆಯಲ್ಲಿ ನಡೆಯಿತು. ರೈತ ಮೋರ್ಚಾ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಅವರ ತಂದೆ ಈಶ್ವರ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.

raitha-morcha

ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್ ಮಾತನಾಡಿ, ಪಕ್ಕದ ದೇಶದಲ್ಲಿ ಪೆಟ್ರೋಲಿಗೆ 400 ರೂ. ಆಗಿದೆ. ಆದರೆ ನಮ್ಮ ದೇಶದಲ್ಲಿ 100 ರೂ.ನ ಗಡಿದಾಟಿದ್ದೇವಷ್ಟೇ. 3-4 ರೂ. ಹೆಚ್ಚು ಆಗುವಾಗ ಬೊಬ್ಬೆ ಹೊಡೆಯುತ್ತಾರೆ. ಮೊನ್ನೆ ಗ್ಯಾಸಿಗೆ 29 ರೂ. ಹೆಚ್ಚಾಯ್ತು. ಕಾಂಗ್ರೆಸಿಗರು ಇದನ್ನು ಮಾತನಾಡುತ್ತಾರೆ. ಕೊಂಕಣ್ ಗ್ಯಾಸಿಗೆ 1930 ರೂ. ಕೊಡ್ಬೇಕು. ಆದರೆ ಅದಕ್ಕೆ ಸಬ್ಸಿಡಿ ಇದೆ. ಮತ್ತೆ ಕಾಂಗ್ರೆಸಿಗರು ಮಾತನಾಡ್ತಾರೆ. ಸಬ್ಸಿಡಿ ನಾಲ್ಕೇ ತಿಂಗಳು ಎಂದು. ನಾವು ಎಚ್ಚೆತ್ತುಕೊಳ್ಳಬೇಕು. ಎಲ್ಲಾ ರೈತರನ್ನು ಒಗ್ಗೂಡಿಸಿ, ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಸಂಘಟನೆಯತ್ತ ಗಮನ ಹರಿಸಬೇಕು. ಮತ್ತೆ ಪುತ್ತೂರಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಸಂಘಟನೆ ಸ್ವಚ್ಛವಾಗಿರಬೇಕು ಹಾಗೂ ಬಲಿಷ್ಠವಾಗಿರಬೇಕು. ಇದನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಮಂಡಲ ಅಧ್ಯಕ್ಷ ರಾಧಾಕೃಷ್ಣ ಆಳ್ವ ಮಾತನಾಡಿ, ರೈತ ಮೋರ್ಚಾದ ಸಭೆ ರೈತರ ಮನೆಯಲ್ಲೇ ಆಗಬೇಕೆಂಬ ಕಾರಣಕ್ಕೆ ರೈತರ ಮನೆಯಲ್ಲಿ ಆಯೋಜನೆ ಮಾಡಲಾಗಿದೆ. ಆರು ಮೋರ್ಚಾಗಳಲ್ಲಿ ರೈತ ಮೋರ್ಚಾದ ಕಾರ್ಯ ಅಭಿನಂದನೀಯ. ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಒಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲು ಮಂಡಲ, ಜಿಲ್ಲೆಯಿಂದ ತಿಳಿಸಿದ್ದಾರೆ. ರೈತರಿಗೆ ಸಂಬಂಧಪಟ್ಟ ಬ್ಯಾಂಕ್ ಗಳನ್ನು ಇದಕ್ಕೆ ಸೇರಿಸಿಕೊಳ್ಳಬೇಕು. ಇದನ್ನು ಯಶಸ್ವಿ ಮಾಡಬೇಕು. ಹಾಗಾದಾಗ ಇದೊಂದು ಮಾದರಿ ಕಾರ್ಯಕ್ರಮವಾಗುವುದರಲ್ಲಿ ಸಂಶಯ ಬೇಡ ಎಂದರು.

ರೈತ ಮೋರ್ಚಾ ಎಷ್ಟು ಗಟ್ಟಿಯಾಗಿದೆ ಎನ್ನುವುದು ಈ ಸಭೆಯನ್ನು ನೋಡಿದಾಗ ತಿಳಿಯುತ್ತದೆ. ರೈತ ಮೋರ್ಚಾ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿದ್ದರಿಂದ ಸಭೆ ಯಶಸ್ವಿಯಾಗಿದೆ. ರೈತ ಮೋರ್ಚಾ ತಳಮಟ್ಟದಿಂದಲೇ ಗಟ್ಟಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಮಂಡಲ ಪ್ರ.ಕಾರ್ಯದರ್ಶಿ ಸುನೀಲ್ ದಡ್ಡು ಮಾತನಾಡಿ, ಮುಂದಿನ ಸಭೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಅಲ್ಲದೇ ಸಭೆಯ ಸಂಘಟನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ವಿವಿಧ ಜವಾಬ್ದಾರಿಗಳನ್ನು ಪದಾಧಿಕಾರಿಗಳಿಗೆ ಹಂಚಿದರು.

ಅಧ್ಯಕ್ಷತೆ ವಹಿಸಿದ್ದ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶರತ್ ಚಂದ್ರ ಬೈಪಾಡಿತ್ತಾಯ ಮಾತನಾಡಿ, ಮಂಡಲದ ಜೊತೆ ಕೆಲಸ ಮಾಡಲು ರೈತ ಮೋರ್ಚಾ ಯಾವಾಗಲು ಸಿದ್ಧವಾಗಿದೆ. ಅಭಿವೃದ್ಧಿ ಚಿಂತನೆಯುಳ್ಳ ಕೆಲಸ ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತೇವೆ ಎಂದರು.

ಹರೀಶ್ ಬೀಜತ್ರೆ ಅವರು SIR ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರಮುಖರಾದ ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ವಿರೂಪಾಕ್ಷ ಭಟ್, ವಿದ್ಯಾದರ ಜೈನ್, ಹರಿಪ್ರಸಾದ್ ಯಾದವ್, ನರಿಮೊಗರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ಕಾರ್ಯದರ್ಶಿಗಳು, ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ನರಿಮೊಗರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಪುತ್ತೂರು ರೈತ ಮೋರ್ಚಾದ ಪ್ರ. ಕಾರ್ಯದರ್ಶಿಗಳಾದ ಲಕ್ಷ್ಮಣ ಬೆಳ್ಳಿಪಾಡಿ ಮತ್ತು ಯತೀಶ್ ದೇವ, ಉಪಾಧ್ಯಕ್ಷರಾದ ಸುಬ್ರಮಣ್ಯ ಭಟ್ ನೆಕ್ಕರೆ, ಹರೀಶ್ ಜಾರತ್ತಾರು ಅರಿಯಡ್ಕ, ಚಂದ್ರನಾಥ ಅಳಿಕೆ, ಕೋಶಾಧಿಕಾರಿ ಗಂಗಾಧರ ವೇಲೂರು ಬಜತ್ತೂರು, ಕಾರ್ಯದರ್ಶಿಗಳಾದ ದಿವಾಕರ ಬಲ್ಲಾಳ್ ಬೆಟ್ಟoಪಾಡಿ, ಗೋಪಾಲ ಸಫಲ್ಯ ಬಿಳಿಯೂರು, ಜಯಪ್ರಕಾಶ್ ವಿಟ್ಲ, ಸದಸ್ಯರಾದ ಕಿರಣ್ ಕುಮಾರ್ ಕೇಪು, ಸುದೀಶ್ ನನ್ಯ, ಶೇಖರ ಗೌಡ ಉಪ್ಪಿನಂಗಡಿ, ವೀಣಾ ಬಲ್ಲಾಳ್ ಕೆದಂಬಾಡಿ ಮೊದಲಾದವರು ಉಪಸ್ಥಿತರಿದ್ದರು.

ರೈತ ಮೋರ್ಚಾ ಪ್ರ  ಕಾರ್ಯದರ್ಶಿ ಯತೀಶ್ ದೇವ ಸ್ವಾಗತಿಸಿದರು. ಇನ್ನೋರ್ವ ಪ್ರ. ಕಾರ್ಯದರ್ಶಿ ಲಕ್ಷ್ಮಣ ಬೆಳ್ಳಿಪಾಡಿ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ!! ‘ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ’ ಹೊಸ ಸುಳಿವು ನೀಡಿದ ಪೋಸ್ಟರ್ ಸಾಲು!

ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ…