ರಾಜಕೀಯ

ಲಂಚ ಪಡೆದದ್ದನ್ನು ಸಾಬೀತು ಪಡಿಸಿದರೆ ಶಾಸಕ ಅಶೋಕ್ ರೈಗೆ ಬಿಜೆಪಿಯಿಂದ ಶಹಬ್ಬಾಶ್ | ಮನೆ ಕಟ್ಟಿದ್ದು ಅಕ್ರಮವೇ ಆಗಿದ್ದರೆ ತಹಸೀಲ್ದಾರನ್ನು ಅಮಾನತುಗೊಳಿಸಲಿ: ಸಂಜೀವ ಮಠಂದೂರು

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 45 ಜನರಿಂದ 2 ಲಕ್ಷ ರೂಪಾಯಿ ಲಂಚ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಒಳ್ಳೆಯ ಸ್ಥಳದಲ್ಲಿ ಆ 45 ಜನರನ್ನು ಕರೆದುಕೊಂಡು ಬಂದು ಆ ಮಾಜಿ ಶಾಸಕರಾರು ಎಂದು ಖಾತ್ರಿ ಪಡಿಸಿದರೆ ಭಾರತೀಯ ಜನತಾ‌ ಪಕ್ಷ ಅವರಿಗೆ ಶಹಬ್ಬಾಶ್ ಹೇಳಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಸವಾಲು ಹಾಕಿದ್ದಾರೆ.

maithri

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕನಾಗಿ, ಶಿಕ್ಷಕನ ಮಗನಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಾಗಿದೆ. ಆದರೆ ಪತ್ರಿಕಾಗೋಷ್ಠಿ ಕರೆದು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದ್ದಾರೆ. ಏನೇನೋ ಮಾತನಾಡುವುದು ಸರಿಯಲ್ಲ ಎಂದರು.

ಮಾಜಿ ಶಾಸಕರು ನೀವೆ ಆಗಿರಬಹುದಲ್ಲವೇ ಎಂಬ ಪ್ರಶ್ನೆಗೆ, ಒಂದು ವೇಳೆ ಆ ಮಾಜಿ ಶಾಸಕ ತಾನೇ ಆಗಿದ್ದರೆ 2 ಲಕ್ಷ ರೂಪಾಯಿ ಲಂಚ ನೀಡಿದವರನ್ನು ಕರೆದುಕೊಂಡು ಬರಲಿ. ಅಲ್ಲಿಗೆ ನಾವು ಬರ್ತೇವೆ. ಹಣವನ್ನು ಯಾವ ರೂಪದಲ್ಲಿ ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದರು.

ರಾಜಧರ್ಮವಲ್ಲ:

ಇದೇ ರೀತಿ ಅಕ್ರಮ ಸಕ್ರಮವನ್ನು ಎಸಿ ರೂಮಲ್ಲಿ ಕೊಡ್ತಾರೆ ಅನ್ತಾರೆ. ಪುತ್ತೂರು ಪುರಭವನದಲ್ಲಿ ಸಾವಿರ ಜನರಿಗೆ ಕೊಟ್ಟಿದೆ. ಒಬ್ಬ ಕಾಂಗ್ರೆಸಿಗನಿಗೆ, ಜೆಡಿಎಸ್ ನವರಿಗೆ ಕೊಡ್ತಾರೆ ಅಂತಾ ನಾವು ಹೇಳಿಲ್ಲ. ಅದು ರಾಜಧರ್ಮ ಅಲ್ಲ. ಪುತ್ತೂರಿನಲ್ಲಿ ಹೊಲಸು ರಾಜಕಾರಣ ಮಾಡ್ತಾ ಇದ್ದಾರೆ. ಸರಕಾರದ ಸ್ವತ್ತದು. ಪ್ರಚಾರಕ್ಕಾಗಿ, ತಾನು ಸುಭಗ ಎನಿಸಿಕೊಳ್ಳಲು ಹೀಗೆ ಹೇಳ್ತಾ ಇದ್ದಾರೆ ಎಂದು ಟೀಕಿಸಿದರು.

ಬ್ರಹ್ಮಾಂಡ ಭ್ರಚ್ಟಾಚಾರ:

ಲಂಚದ ಬಗ್ಗೆ ಮಾತನಾಡ್ತಾರೆ. ಲೋಕಾಯುಕ್ತ ಟ್ರ್ಯಾಪ್ ಆದದ್ದು ಓರ್ವ ತಹಸೀಲ್ದಾರ್. ಎಡಿಎಲ್ಆರ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಇದೆ ಎಂದು ಕಾಂಗ್ರೆಸಿಗನೇ ಹೇಳ್ತಾರೆ. ಕಾಂಗ್ರೆಸ್ ಕಚೇರಿಯಿಂದಲೇ ಭ್ರಷ್ಟಾಚಾರ ಶುರುವಾಗಿದೆ ಎಂದು ಕಾಂಗ್ರೆಸಿಗರೆ ಹೇಳ್ತಾರೆ.

ಯಾರದೋ ಮೇಲೆ ಗೂಬೆ ಕೂರಿಸಿ, ತಾನು ಮಹಾ ಸಾಧಕ ಎಂದು ಹೇಳಿಸಿಕೊಳ್ಳಲು ಹೀಗೆ ಮಾಡ್ತಾ ಇದ್ದಾರೆ. ಪುತ್ತೂರಿನಲ್ಲಿ ಅಕ್ರಮ ಸಕ್ರಮವನ್ನು ಡಿ.ವಿ. ಸದಾನಂದ ಗೌಡ, ವಿನಯ್ ಕುಮಾರ್ ಸೊರಕೆ, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಸಂಜೀವ ಮಠಂದೂರು ನಡೆಸಿದ್ದಾರೆ. ಹಾಗಾಗಿ ಮಾಜಿ ಶಾಸಕ ಯಾರೆಂದು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.

ತಹಸೀಲ್ದಾರನ್ನು ಅಮಾನತು ಮಾಡಲಿ:

ಆ ಮೂರು ಮನೆಗಳಿಗೆ 94 ಸಿ ಹಕ್ಕುಪತ್ರವನ್ನು ತಹಸೀಲ್ದಾರ್ ಬರೆದು ಇಟ್ಟಿದ್ದಾರೆ. ದಂಡನಾ ಶುಲ್ಕ ಕಟ್ಟಿಸಿಕೊಂಡಿದ್ದಾರೆ. ಶಾಸಕರಲ್ಲಿ ಮಾತನಾಡಿಕೊಂಡು ಬನ್ನಿ ಎಂದು ತಹಸೀಲ್ದಾರ್ ಹೇಳಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಬೆಂಬಲ ನೀಡಿದೆ. ಒಂದು ವೇಳೆ ಆ ಮನೆಗಳು ಅಕ್ರಮವೇ ಆಗಿದ್ದರೆ ಹಕ್ಕುಪತ್ರ ಬರೆದಿಟ್ಟ ತಹಸೀಲ್ದಾರ್ ಅನ್ನು ಆರ್.ಐ., ಗ್ರಾಮಕರಣಿಕರನ್ನು ಅಮಾನತು ಮಾಡಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಜ ರಾಧಾಕೃಷ್ಣ ಆಳ್ವ, ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್ ಉಪಸ್ಥಿತರಿದ್ದರು. 


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts