ಶಿಕ್ಷಣ

ಕೆಸಿಇಟಿ ಫಲಿತಾಂಶ 2026 – ಅಂಬಿಕಾ ವಿದ್ಯಾರ್ಥಿಗಳಿಂದ ದಾಖಲೆ | ಚಿತ್ರಾ ಕೆ.ಪಿ.ಗೆ 63ನೇ ರ್ಯಾಂಕ್, ತಾಲೂಕಿನಲ್ಲೇ ಅತ್ಯಧಿಕ ಟಾಪ್ ರ್ಯಾಂಕ್ ಗಳು ಅಂಬಿಕಾ ಮಡಿಲಿಗೆ, ನೂರರೊಳಗೆ ಹಲವು ರ್ಯಾಂಕ್ ದಾಖಲಿಸಿದ ಸಂಸ್ಥೆ – ಮೊದಲ ನೂರರಲ್ಲಿ ಏಳು, ಐನೂರರಲ್ಲಿ ಇಪ್ಪತ್ತೈದು, ಸಾವಿರದೊಳಗೆ ನಲವತ್ತೆರಡು ರ್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು 2026ನೇ ಶೈಕ್ಷಣಿಕ ವರ್ಷದ ಕೆ ಸಿ ಇ ಟಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೆ.

maithri

ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಚಿತ್ರಾ ಕೆ.ಪಿ ಅವರು ಬಿಪಿಟಿ, ಡಿ.ಫಾರ್ಮ ಮತ್ತು ಬಿಎಸ್ಸಿ ಎಎಚ್‌ಎಸ್ ನಲ್ಲಿ 63ನೇ ರ್ಯಾಂಕ್ ಹಾಗೂ ಬಿಪಿಒದಲ್ಲಿ 111ನೇ ರ್ಯಾಂಕ್ ಗಳಿಸಿದರೆ, ರಾಜ್ಯದಲ್ಲಿ ಮೊದಲ 100 ರ್ಯಾಂಕ್ ಒಳಗೆ 7 ರ್ಯಾಂಕನ್ನು, 500 ರ ಒಳಗೆ 25 ರ್ಯಾಂಕ್ ಹಾಗೂ 1000ದ ಒಳಗಿನ 42 ರ್ಯಾಂಕ್ ಗಳನ್ನು ಪಡೆಯುವ ಮೂಲಕ ತಾಲೂಕಿನಲ್ಲೇ ಮೊದಲ ನೂರು, ಐನೂರು ಹಾಗೂ ಸಾವಿರ ರ್ಯಾಂಕ್ ಒಳಗೆ ಅತ್ಯಧಿಕ ರ್ಯಾಂಕ್ ಗಳನ್ನು ಪಡೆದ ಸಂಸ್ಥೆಯಾಗಿ ಅಂಬಿಕಾ ಹೊರಹೊಮ್ಮಿದೆ. ಪ್ರತಿ ವರ್ಷವೂ ಅಂಬಿಕಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಾಲೂಕಿನಲ್ಲೇ ಮೊದಲ ಸ್ಥಾನಿಯಾಗಿ ಹೊರಹೊಮ್ಮುತ್ತಿರುವ ಪರಂಪರೆ ಈ ವರ್ಷವೂ ಮುಂದುವರೆದಿದೆ.

ಪುತ್ತೂರು ನೈತಾಡಿಯ ಕೃಷ್ಣರಾಜ್ ಎಚ್ ಎಸ್ ಮತ್ತು ವಿದ್ಯಾ ಕೃಷ್ಣರಾಜ್ ದಂಪತಿಯ ಪುತ್ರ ಪ್ರಜ್ವಲ್ ಎಚ್ (ಇಂಜಿನಿಯರಿಂಗ್ – 370 ರ್ಯಾಂಕ್), ಬೆಂಗಳೂರು ಜಿಲ್ಲೆಯ ಅನೇಕಲ್‌ನ ಅನಂತ ಪದ್ಮನಾಭ ಶರ್ಮ ಮತ್ತು ರೇಷ್ಮ ಅನಂತ ಶರ್ಮ ದಂಪತಿಯ ಪುತ್ರ ಅಖಿಲೇಶ್ ಅನಂತ ಶರ್ಮ (ಇಂಜಿನಿಯರಿಂಗ್ -448 ರ್ಯಾಂಕ್, ಬಿಪಿಒ – 305 ರ್ಯಾಂಕ್, ಬಿಎನ್‌ವೈಎಸ್ – 691 ರ್ಯಾಂಕ್),  ಪುತ್ತೂರು ಆರ್ಯಾಪಿನ ಮಹಾಲಿಂಗೇಶ್ವರ ಭಟ್ ಎಂ ಮತ್ತು ಎಸ್ ವಿ ದುರ್ಗಮಾಲಾ ದಂಪತಿಯ ಪುತ್ರ ಶ್ರೇಯಸ್ ಎಂ  (ಇಂಜಿನಿಯರಿಂಗ್ – 554 ರ್ಯಾಂಕ್, ಬಿಪಿಒ – 935 ರ್ಯಾಂಕ್), ಗದಗ ಜಿಲ್ಲೆಯ ಬೂದಿಹಾಳದ ಶಿವರುದ್ರಯ್ಯ ಪಟದಯ್ಯ ಹಿರೇಮಠ ಮತ್ತು ಶೈಲಾ ಶಿವರುದ್ರಯ್ಯ ಹಿರೇಮಠ ದಂಪತಿಯ ಪುತ್ರ ಪ್ರತೀಕ ಶಿವರುದ್ರಯ್ಯ ಹಿರೇಮಠ (ಇಂಜಿನಿಯರಿಂಗ್ – 946 ರ್ಯಾಂಕ್, ಬಿಪಿಟಿ, ಬಿಎಸ್ಸಿ ಎಎಚ್‌ಎಸ್, ಡಿ.ಫಾರ್ಮ – 477 ರ್ಯಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿಎಸ್ಸಿ – 276), ಬೆಳ್ಳಾರೆ ಇಂದಿರಾನಗರದ ರವೀಂದ್ರನಾಥ್ ಮತ್ತು ಸುಗುಣ ಎ ದಂಪತಿಯ ಪುತ್ರಿ ಶಾರ್ವರಿ ಆರ್ ಎಸ್ (ಫುಡ್ ಸೈನ್ಸ್ – 227, ಬಿಪಿಟಿ, ಬಿಎಸ್ಸಿ ಎಎಚ್‌ಎಸ್, ಡಿ.ಫಾರ್ಮ- 363 ರ್ಯಾಂಕ್, ಬಿಎನ್‌ವೈಎಸ್- 619 ರ್ಯಾಂಕ್, ಬಿಪಿಒ – 1024 ರ್ಯಾಂಕ್, ಇಂಜಿನಿಯರಿಂಗ್ – 1164 ರ್ಯಾಂಕ್), ಪುತ್ತೂರು ಚಿಕ್ಕಮುಡ್ನೂರಿನ ಪಿ ಜಗದೀಶ ಮತ್ತು ನವೀನ ಕುಮಾರಿ ದಂಪತಿಯ ಪುತ್ರಿ ಶ್ರೀನಿಧಿ (ಬಿಪಿಟಿ, ಡಿ.ಫಾರ್ಮ- 507 ರ್ಯಾಂಕ್, ಬಿಪಿಒ – 748 ರ್ಯಾಂಕ್), ಪುತ್ತೂರು ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿಯ ಪುತ್ರ ತ್ರಿಶೂಲ್ ಎನ್ ಡಿ (ಡಿ.ಫಾರ್ಮ, ಬಿಪಿಟಿ, ಬಿಎಸ್ಸಿ ಎಎಚ್‌ಎಸ್ – 548 ರ್ಯಾಂಕ್, ಅಗ್ರಿಕಲ್ಚರ್ ಬಿಎಸ್ಸಿ, ಫುಡ್ ಸೈನ್ಸ್ – 943 ರ್ಯಾಂಕ್), ಬೆಂಗಳೂರಿನ ಸುರೇಶ್ ಕೆ.ಆರ್ ಮತ್ತು ಶುಭಶ್ರೀ ದಂಪತಿಯ ಪುತ್ರಿ ಶ್ರೀಲಕ್ಷ್ಮಿ ಸುರೇಶ್ (ಡಿ.ಫಾರ್ಮ, ಬಿಪಿಟಿ, ಬಿಎಸ್ಸಿ ಎಎಚ್‌ಎಸ್ – 442 ರ್ಯಾಂಕ್), ಪುತ್ತೂರು ದರ್ಬೆಯ ಹರೀಶ್ ಪನಂಬು ಮತ್ತು ಸಂಧ್ಯಾ ಕುಮಾರಿ ದಂಪತಿಯ ಪುತ್ರಿ ಸಿಂಚನಾ ಹರೀಶ್ ಪನಂಬು (ಬಿಪಿಟಿ, ಡಿ.ಫಾರ್ಮ, ಬಿಎಸ್ಸಿ ಎಎಚ್‌ಎಸ್ – 469 ರ್ಯಾಂಕ್), ಪುತ್ತೂರು ತೆಂಕಿಲ ಕೃಷ್ಣಪ್ಪ ಪೂಜಾರಿ ಮತ್ತು ಜಯಂತಿ ದಂಪತಿಯ ಪುತ್ರಿ ಸಾಕ್ಷಿ ಕೃಷ್ಣ (ಬಿಪಿಒ- 611 ರ್ಯಾಂಕ್), ಪುತ್ತೂರು ಭಕ್ತಕೋಡಿ ಪಿಲಿಗುಂಡಿಯ ಕೃಷ್ಣಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಪಿ ಕೆ ರಕ್ಷಿತ್ (ಡಿ.ಫಾರ್ಮ, ಬಿಎಸ್ಸಿ ಎಎಚ್‌ಎಸ್, ಬಿಪಿಟಿ – 624 ರ್ಯಾಂಕ್, ಅಗ್ರಿಕಲ್ಚರಲ್ ಪ್ರಾಕ್ಟಿಕಲ್/ ಫುಡ್ ಸೈನ್ಸ್ ಪ್ರಾಕ್ಟಿಕಲ್ -28 ರ್ಯಾಂಕ್, ವೆಟರ್ನರಿ ಸೈನ್ಸ್ ಪ್ರಾಕ್ಟಿಕಲ್/ ಸೆರಿಕಲ್ಚರ್ ಪ್ರಾಕ್ಟಿಕಲ್- 50 ರ್ಯಾಂಕ್), ಪುತ್ತೂರು ಮೊಟ್ಟೆತ್ತಡ್ಕದ ಈರದಾಸಪ್ಪ ಇ ಮತ್ತು ಜ್ಯೋತಿ ಎ ದಂಪತಿಯ ಪುತ್ರಿ ಚಂದನಾ ಇ (ಡಿ.ಫಾರ್ಮ, ಬಿಎಸ್ಸಿ ಎಎಚ್‌ಎಸ್, ಬಿಪಿಟಿ – 865 ರ್ಯಾಂಕ್), ಕಾಸರಗೋಡು ಜಿಲ್ಲೆಯ ನೆಟ್ಟಣಿಗೆಯ ವಿಷ್ಣು ಪ್ರಕಾಶ್ ಎಂ ಮತ್ತು ವೀಣಾ ಸರಸ್ವತಿ ಸಿ ಹೆಚ್ ದಂಪತಿಯ ಪುತ್ರ ಶ್ರೀಶ ಎಂ (ಬಿಪಿಒ-964 ರ್ಯಾಂಕ್, ಇಂಜಿನಿಯರಿಂಗ್ – 1821 ರ್ಯಾಂಕ್), ಪುತ್ತೂರು ಹಾರಾಡಿಯ ಅಶೋಕ್ ಭಟ್ ಮತ್ತು ನಯನಾ ಎ ಭಟ್ ದಂಪತಿಯ ಪುತ್ರ ಅಭಿನವ್ ವಸಿಷ್ಠ (ಇಂಜಿನಿಯರಿಂಗ್ – 1620 ರ್ಯಾಂಕ್), ಬಂಟ್ವಾಳ ಮಾಣಿಯ ಬಿ ವಿನೋದ್ ಕುಮಾರ್ ಮತ್ತು ಸರಿತಾ ವಿನೋದ್ ದಂಪತಿಯ ಪುತ್ರ ರಚಿತ್ ವಿ ಪೂಜಾರಿ (ಇಂಜಿನಿಯರಿಂಗ್ -2326 ರ್ಯಾಂಕ್), ಬಂಟ್ವಾಳ ಮಾಣಿಯ ಅಶೋಕ ಬಿ ಕೊಂಡೆ ಮತ್ತು ಮಧುರಾ ಪಿ ದಂಪತಿಯ ಪುತ್ರಿ ವೃದ್ಧಿ ಎ ಕೊಂಡೆ (ಬಿಪಿಟಿ – 1443 ರ್ಯಾಂಕ್), ಪುತ್ತೂರು ದರ್ಬೆಯ ಜಯಕರ ಬಿ ಶೆಟ್ಟಿ ಮತ್ತು ಸೌಮ್ಯಲತಾ ಶೆಟ್ಟಿ ದಂಪತಿಯ ಪುತ್ರ ಶ್ರೇಯಸ್ ಜೆ ಶೆಟ್ಟಿ (ಇಂಜಿನಿಯರಿಂಗ್ – 2054 ರ್ಯಾಂಕ್), ಮೈಸೂರು ಎಚ್ ಡಿ ಕೋಟೆಯ ಮುರುಗೇಶ್ ಮತ್ತು ಕನಕೇಶ್ವರಿ ವಿ ದಂಪತಿಯ ಪುತ್ರ ಎಂ ಶ್ರೀಶೈಲ್ (ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿಎಸ್ಸಿ- 1758, ನ್ಯಾಚುರೋಪತಿ ಮತ್ತು ಯೋಗ-2149), ಪುತ್ತೂರು ಮಾಡಾವಿನ ವಿಷ್ಣು ಭಟ್ ಎನ್ ಮತ್ತು ಸುಮಲತಾ ಎನ್ ದಂಪತಿಯ ಪುತ್ರ ಸಂಹಿತಾ ಎನ್ (ಫುಡ್ ಸೈನ್ – 1515, ಅಗ್ರಿಕಲ್ಚರ್ ಬಿಎಸ್ಸಿ- 1864), ಸುಳ್ಯ ಕೆಳಗಿನ ನಾವೂರಿನ ಕೆ ಆರ್ ಕೃಷ್ಣ ರಾವ್ ಮತ್ತು ಆಶಾ ಕೃಷ್ಣ ರಾವ್ ದಂಪತಿಯ ಪುತ್ರ ಆಯುಷ್ ರಾವ್ ಕೆ (ಬಿಪಿಒ-1206 ರ್ಯಾಂಕ್), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚೈತ್ರಾ ಕೆ ಪಿ (ನರ್ಸಿಂಗ್- 2121 ರ್ಯಾಂಕ್, (ಫುಡ್ ಸೈನ್,  ಅಗ್ರಿಕಲ್ಚರ್ ಬಿಎಸ್ಸಿ- 2353), ಕಡಬ ಅಲಂಕಾರಿನ ರಾಜಶೇಖರ್ ಮತ್ತು ಕೆ ಗೀತಾ ದಂಪತಿಯ ಪುತ್ರ ಗಗನ್ ಕೆ ಆರ್ (ಬಿಪಿಒ-1364 ರ್ಯಾಂಕ್), ಪುತ್ತೂರು ಬೆಟ್ಟಂಪಾಡಿಯ ಕೆ ಅಚ್ಯುತ ಭಟ್ ಮತ್ತು ಬಿ ಅನ್ನಪೂರ್ಣ ದಂಪತಿಯ ಪುತ್ರ ವಿನ್ಯಾಸ್ ಶರ್ಮ ಕೆ (ವೆಟರ್ನರಿ ಸೈನ್ಸ್ ಪ್ರಾಕ್ಟಿಕಲ್-2186 ರ್ಯಾಂಕ್), ಪುತ್ತೂರು ಕುಂಬ್ರದ ನಾರಾಯಣ ಪೂಜಾರಿ ಕೆ ಮತ್ತು ದಿವ್ಯಾ ಎನ್ ದಂಪತಿಯ ಪುತ್ರಿ ಸನ್ನಿಧಿ ಎನ್ (ಬಿಪಿಒ-2030 ರ್ಯಾಂಕ್), ಶಿರಸಿ ತಾಲೂಕಿನ  ಗಣಪತಿ ಕೃಷ್ಣ ಭಟ್ ಮತ್ತು ದಿವ್ಯ ಗಣಪತಿ ಭಟ್ ದಂಪತಿಯ ಪುತ್ರ ಪ್ರಮೋದ್ ಗಣಪತಿ ಭಟ್ (ಅಗ್ರಿಕಲ್ಚರಲ್ ಪ್ರಾಕ್ಟಿಕಲ್- 238 ರ್ಯಾಂಕ್, ವೆಟರ್ನರಿ ಸೈನ್ಸ್ ಪ್ರಾಕ್ಟಿಕಲ್ – 492 ರ್ಯಾಂಕ್, ಫುಡ್ ಸೈನ್ಸ್ ಪ್ರಾಕ್ಟಿಕಲ್/ ಸೆರಿಕಲ್ಚರ್ ಪ್ರಾಕ್ಟಿಕಲ್-238 ರ್ಯಾಂಕ್), ಸುಳ್ಯ ತಾಲೂಕಿನ ಶೇಖರ್ ಎ.ಎಂ.ಶೇಖರ್ ಮತ್ತು ಮಮತ ಎ.ಎಸ್ ಪುತ್ರಿ ಅನನ್ಯ ಎ. ಎಸ್ (ಬಿಪಿಟಿ – 2293 ರ್ಯಾಂಕ್, ಬಿಎಸ್ಸಿ ಎಎಚ್‌ಎಸ್ -2293 ರ್ಯಾಂಕ್, ಡಿ.ಫಾರ್ಮ – 2293 ರ್ಯಾಂಕ್),  ಸುಳ್ಯ ತಾಲೂಕಿನ  ನಾರಾಯಣ ಕೆ ಆರ್ ಮತ್ತು ಚಿತ್ರಾವತಿ ಕೆ ದಂಪತಿಯ ಪುತ್ರ ಮೋಹಿತ್ ಕೆ.ಎನ್ (ಅಗ್ರಿಕಲ್ಚರಲ್ ಪ್ರಾಕ್ಟಿಕಲ್-2411 ರ್ಯಾಂಕ್, ಫುಡ್ ಸೈನ್ಸ್ ಪ್ರಾಕ್ಟಿಕಲ್-2411 /ಸೆರಿಕಲ್ಚರ್ ಪ್ರಾಕ್ಟಿಕಲ್- 2411 ರ್ಯಾಂಕ್, ವೆಟರ್ನರಿ ಸೈನ್ಸ್ ಪ್ರಾಕ್ಟಿಕಲ್-1410 ರ್ಯಾಂಕ್) ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಳೆ ಶ್ರೀಧರಾಭಿವಂದನ | ಡಾ. ಎಚ್.ಜಿ. ಶ್ರೀಧರ್ ಅವರಿಗೆ ಶಿಷ್ಯವೃಂದ, ಪುತ್ತೂರು ಕಸಾಪದಿಂದ ಸಾರ್ವಜನಿಕ ಸನ್ಮಾನ

ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಎಚ್‌.ಜಿ. ಶ್ರೀಧರ ಅವರಿಗೆ…